Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli 10th Marks Card: ವಿರಾಟ್ ಕೊಹ್ಲಿ 10ನೇ ತರಗತಿಯ ಅಂಕಪಟ್ಟಿ ಫೋಟೋ ವೈರಲ್

ಭಾರತ ಕ್ರಿಕೆಟ್ ಮತ್ತು ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು ಎಂದೇ ಖ್ಯಾತರಾಗಿದ್ದಾರೆ. ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿ ರನ್ ಗಳಿಸುವ ಛಾತಿ ಮೈಗೂಡಿಸಿಕೊಂಡಿದ್ದಾರೆ.

ಕ್ರಿಕೆಟ್ ಹೊರತಾಗಿಯೂ ವಿರಾಟ್ ಕೊಹ್ಲಿ ಸುದ್ದಿಯಲ್ಲಿರುತ್ತಾರೆ. ಅವರ ಮೈ ಮೇಲಿನ ಟ್ಯಾಟೂ, ಹೇರ್ ಕಟಿಂಗ್, ಜಾಹೀರಾತು ಮತ್ತು ಇನ್ನಿತರ ವಿಷಯಗಳಲ್ಲಿ ಅವರನ್ನು ಅನುಸರಿಸುವ ಅಭಿಮಾನಿಗಳು ಬಹಳಷ್ಟಿದ್ದಾರೆ.

ವಿರಾಟ್ ಕೊಹ್ಲಿ ವಿದ್ಯಾಭ್ಯಾಸ ಮಾಡಿರುವುದು ಕೇವಲ 12ನೇ ತರಗತಿಯವರೆಗೆ ಮಾತ್ರ. 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಕೊಹ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಲಿಲ್ಲ. ನಂತರ ಕ್ರಿಕೆಟ್ ವೃತ್ತಿಜೀವನದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದರು.

Virat Kohli Marks Card: Team Indias Virat Kohli 10th Marks Card Photo Viral

ಅಲ್ಲಿಂದ ದೆಹಲಿ ಮೂಲದ ಯುವಕ ವಿರಾಟ್ ಕೊಹ್ಲಿ ಹಿಂತಿರುಗಿ ನೋಡಲೇ ಇಲ್ಲ, ಇದೀಗ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ಸ್ಥಾನಮಾನ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ 2006ರಲ್ಲಿಯೇ ದೆಹಲಿ ತಂಡದ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು. 2008ರಲ್ಲಿ ಮಲೇಷ್ಯಾದಲ್ಲಿ ನಡೆದ ಅಂಡರ್-19 ಏಕದಿನ ವಿಶ್ವಕಪ್‌ನಲ್ಲಿ ಭಾರತ ಯುವ ಪಡೆಯನ್ನು ಯಶಸ್ವಿಯಾಗಿ ಮುನ್ನಡೆಸಿ, ಟ್ರೋಫಿ ಎತ್ತಿ ಹಿಡಿದರು.

ಕ್ರಿಕೆಟ್‌ ವೃತ್ತಿಜೀವನದಲ್ಲಿ ಅದ್ಭುತ ಸಾಧನೆಗೂ ಮುನ್ನ ವಿರಾಟ್ ಕೊಹ್ಲಿ ತಮ್ಮ 10ನೇ ತರಗತಿಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಗುರುವಾರ, ಮಾರ್ಚ್ 30ರಂದು ಸ್ವತಃ ವಿರಾಟ್ ಕೊಹ್ಲಿ ತಮ್ಮ 10ನೇ ತರಗತಿಯ ಅಂಕಪಟ್ಟಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

Virat Kohli Marks Card: Team Indias Virat Kohli 10th Marks Card Photo Viral

ವಿರಾಟ್ ಕೊಹ್ಲಿಯ 10ನೇ ತರಗತಿ ಅಂಕಪಟ್ಟಿಯಲ್ಲಿ ಇಂಗ್ಲಿಷ್ ಭಾಷೆಗೆ 100ಕ್ಕೆ 83 ಅಂಕಗಳು, ಹಿಂದಿ ಭಾಷೆಗೆ 100ಕ್ಕೆ 75 ಅಂಕಗಳು, ಸಮಾಜ ವಿಜ್ಞಾನ 100ಕ್ಕೆ 81 ಅಂಕಗಳು, ಗಣಿತದಲ್ಲಿ 100ಕ್ಕೆ 51 ಅಂಕಗಳು, ವಿಜ್ಞಾನ ವಿಷಯದಲ್ಲಿ 100ಕ್ಕೆ 55 ಅಂಕಗಳನ್ನು ಗಳಿಸಿದ್ದಾರೆ. ರಚನಾತ್ಮಕ ವಿಷಯದಲ್ಲಿ 100ಕ್ಕೆ 74 ಅಂಕಗಳನ್ನು ಪಡೆದಿದ್ದಾರೆ.

ಗಣಿತ ಮತ್ತು ವಿಜ್ಞಾನ ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದಾರೆ. ಆದರೆ ವಿರಾಟ್ ಕೊಹ್ಲಿ ತಮ್ಮ ಅಂಕಪಟ್ಟಿಯನ್ನು ಪೋಸ್ಟ್ ಮಾಡಿ ಬಹಿರಂಗಪಡಿಸಲಿಲ್ಲ.

ಇದೇ ವೇಳೆ ಕೂ ಆ್ಯಪ್‌ನ ಶೀರ್ಷಿಕೆಯಲ್ಲಿ, #LetThereBeSport. ಎಂದು ಹೇಳುವ ಮೂಲಕ ಶಾಲೆಯಲ್ಲಿ ಕ್ರೀಡೆಯನ್ನು ಪ್ರಮುಖ ವಿಷಯವಾಗಿ ಸೇರಿಸಲು ವಿರಾಟ್ ಕೊಹ್ಲಿ ತಿಳಿಸಿದರು.

Virat Kohli Marks Card: Team Indias Virat Kohli 10th Marks Card Photo Viral

ಐಪಿಎಲ್ 2023ರಲ್ಲಿ ವಿರಾಟ್ ಕೊಹ್ಲಿ ಮೇಲೆ ಆರ್‌ಸಿಬಿ ಭರವಸೆ
2022ರ ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನಿಡುವ ನಿರೀಕ್ಷೆಯಲ್ಲಿದ್ದಾರೆ. 2022ರಲ್ಲಿ ವಿರಾಟ್ ಕೊಹ್ಲಿ ಆಡಿದ 16 ಪಂದ್ಯಗಳಲ್ಲಿ 22.73ರ ಸರಾಸರಿಯಲ್ಲಿ ಕೇವಲ 341 ರನ್ ಗಳಿಸಿದರು. ಇದೇ ವೇಳೆ ಕೇವಲ 2 ಅರ್ಧಶತಕ ಬಾರಿಸಿದ್ದರು.

2022ರ ಅರ್ಧಭಾಗದ ನಂತರ ವಿರಾಟ್ ಕೊಹ್ಲಿ ಏಷ್ಯಾ ಕಪ್‌ನಲ್ಲಿ ತಮ್ಮ ಚೊಚ್ಚಲ ಟಿ20 ಶತಕವನ್ನು ಬಾರಿಸಿದರು. ನಂತರ 2022ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದರು ಮತ್ತು ಪಂದ್ಯಾವಳಿಯಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರನಾದರು.

Story first published: Thursday, March 30, 2023, 20:31 [IST]
Other articles published on Mar 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+