Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೈನ್ ಮಾಡಿ ಕೆಣಕಿದ ಕೆಸ್ರಿಕ್‌ಗೆ ಬ್ಯಾಟ್‌ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋ

Virat Kohli compiles an anger-fuelled masterclass | Oneindia Kannada
Virat Kohli Mocks Kesrick Williams By Imitating Notebook Send-Off

ಹೈದರಾಬಾದ್, ಡಿಸೆಂಬರ್ 7: ನಾಯಕ ವಿರಾಟ್ ಕೊಹ್ಲಿ ಆರ್ಭಟದ ಪರಿಣಾಮವಾಗಿ ವೆಸ್ಟ್ ಇಂಡೀಸ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ ರೋಚಕ ಗೆಲುವನ್ನಾಚರಿಸಿತ್ತು. ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಆಟಗಾರ ಕೆಸ್ರಿಕ್ ವಿಲಿಯಮ್ಸ್‌ಗೆ ಕೊಹ್ಲಿ ತಿರುಗೇಟು ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಡಿಸೆಂಬರ್ 6) ನಡೆದ ಪಂದ್ಯದಲ್ಲಿ ಕೊಹ್ಲಿ 50 ಎಸೆತಗಳಿಗೆ ಅಜೇಯ 94 ರನ್ ಸಿಡಿಸಿದರು. ವಿರಾಟ್ ಹೀಗೆ ವಿರಾಟ್ ರೂಪ ಪ್ರದರ್ಶಿಸಲು ಕಾರಣ ಎದುರಾಳಿ ಆಟಗಾರ ಕೆಸ್ರಿಕ್ ಕೆಣಕಿದ್ದು.

ಕೆಸ್ರಿಕ್‌ಗೆ ಕೆಣಕಿದ್ದರಿಂದ ಉಗ್ರರೂಪ ತಾಳಿದ್ದ ಕೊಹ್ಲಿ ಈ ಪಂದ್ಯದಲ್ಲಿ ಒಟ್ಟು 6 ಸಿಕ್ಸ್‌, 6 ಬೌಂಡರಿಗಳನ್ನು ಚಚ್ಚಿ ಬ್ಯಾಟ್‌ ಮೂಲಕವೇ ವಿಲಿಯಮ್ಸ್‌ಗೆ ಉತ್ತರಿಸಿದ್ದರು.

ಮರುಕಳಿಸಿದ ಸಿಪಿಎಲ್ ದೃಶ್ಯ

ವಿಕೆಟ್ ಲಭಿಸಿದಾಗ ಕೆಸ್ರಿಕ್ ವಿಲಿಯಮ್ಸ್‌, ಕಿಸೆಯಿಂದ ನೋಟ್ ಬುಕ್‌ ಹೊರ ತೆಗೆದು ಸೈನ್‌ ಹಾಕಿದಂತೆ ನಟಿಸಿ ಬ್ಯಾಟ್ಸ್‌ಮನ್‌ನ ಕೆಣಕುತ್ತಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್‌)ನಲ್ಲಿ ಚಾದ್ವಿಕ್ ವಾಲ್ಟನ್ ಅವರನ್ನು ಕೆಸ್ರಿಕ್, ಹೀಗೇ ಕೆಣಕಿ ಸಾಲು ಸಾಲು ಸಿಕ್ಸ್‌-ಫೋರ್ಸ್ ಹೊಡೆಸಿಕೊಂಡಿದ್ದರು.

ವಿರಾಟ್ ವಿರಾಟ ರೂಪ

ವಿರಾಟ್ ವಿರಾಟ ರೂಪ

ಶುಕ್ರವಾರದ ಪಂದ್ಯದಲ್ಲೂ ಸಿಪಿಎಲ್‌ನ ಇಂಥದ್ದೇ ದೃಶ್ಯ ಕಾಣಸಿಕ್ಕಿತ್ತು. ಆಟದ ವೇಳೆ ಕೆಸ್ರಿಕ್ ವಿಲಿಯಮ್ಸ್ ಅವರು ತನ್ನ ನೋಟ್‌ಬುಕ್ ಸಿಗ್ನೇಚರ್ ಮೂಲಕ ಕೊಹ್ಲಿಯನ್ನು ಕೆಣಕಿದ್ದರು. ಪರಿಣಾಮ ಕೊಹ್ಲಿ 13 ಓವರ್‌ನಂತರ ಅಕ್ಷರಶಃ ಉಗ್ರರೂಪ ತಾಳಿದ್ದರು. ಇದರ ಪರಿಣಾಮವಾಗಿಯೇ ಕೊನೆಯ ಎಸೆತಕ್ಕೂ ಸಿಕ್ಸ್‌ ಚಚ್ಚಿದ ಕೊಹ್ಲಿ ಪಂದ್ಯ ಗೆಲ್ಲಿಸಿಕೊಟ್ಟರು.

ಯರ್ರಾಬಿರ್ರಿ ಸಿಕ್ಸ್-ಫೋರ್ಸ್

15 ಓವರ್‌ನಲ್ಲಿ ಜೇಸನ್ ಹೋಲ್ಡರ್ ಎಸೆತಕ್ಕೆ ಕೊಹ್ಲಿ ಸಿಕ್ಸ್ ಬಾರಿಸಿದ್ದ ಕೊಹ್ಲಿ 23ನೇ ಟಿ20ಐ ಅರ್ಧಶತಕ ಪೂರೈಸಿಕೊಂಡರು. 16ನೇ ಓವರ್‌ಗೆ ಚೆಂಡೆಸೆಯಲು ಕೆಸ್ರಿಕ್ ವಿಲಿಯಮ್ಸ್ ಬಂದರು. ಆ ಓವರ್‌ನಲ್ಲಿ ಯರ್ರಾಬಿರ್ರಿ ಸಿಕ್ಸ್ ಫೋರ್‌ಗಳನ್ನು ಚಚ್ಚಿದ ಕೊಹ್ಲಿ, ಒಟ್ಟಿಗೆ 23 ರನ್‌ಗಳನ್ನು ಆ ಓವರ್‌ನಲ್ಲಿ ತಂಡಕ್ಕೆ ಸೇರಿಸಿಕೊಂಡರು. ಅದೇ ಓವರ್‌ನಲ್ಲಿ ಕೊಹ್ಲಿ ನೋಟ್‌ಬುಕ್ ಸಿಗ್ನೇಚರ್ ಆ್ಯಕ್ಷನ್ ಮಾಡಿ ಕೆಸ್ರಿಕ್ ಉರಿಸಿದ್ದರು.

ರಾಹುಲ್ ಸ್ಫೋಟಕ ಅರ್ಧ ಶತಕ

ರಾಹುಲ್ ಸ್ಫೋಟಕ ಅರ್ಧ ಶತಕ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ತಂಡ ಎವಿನ್ ಲೆವಿಸ್ 40, ಶಿಮ್ರಾನ್ ಹೆಟ್ಮೈಯರ್ 56, ಕೀರನ್ ಪೊಲಾರ್ಡ್ 37 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್‌ ನಷ್ಟದಲ್ಲಿ 207 ರನ್‌ ಮಾಡಿತ್ತು. ಇದು ನಿಜಕ್ಕೂ ಸವಾಲಿನ ಮೊತ್ತವಾಗಿದ್ದರೂ ಭಾರತ, ಕೆಎಲ್ ರಾಹುಲ್ 62 (40 ಎಸೆತ), ವಿರಾಟ್ ಕೊಹ್ಲಿ 94 ರನ್‌ನೊಂದಿಗೆ 18.4 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 209 ರನ್ ಮಾಡಿ ರೋಚಕ ಗೆಲುವನ್ನಾಚರಿಸಿತು.

Story first published: Saturday, December 7, 2019, 11:43 [IST]
Other articles published on Dec 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+