ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್‌ಗಳಲ್ಲಿ ಕೊಹ್ಲಿಯೂ ಇದ್ದಾರೆ

ನವದೆಹಲಿ, ಜೂನ್ 7: ಜಗತ್ತಿನ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್‌ಗಳ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ನಿಯತಕಾಲಿಕೆ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೊಹ್ಲಿ ಅದರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯನಾಗಿದ್ದಾರೆ.
ಅತಿ ಹೆಚ್ಚು ಸಂಭಾವನೆ ಪಡೆದ ಅಥ್ಲೀಟ್‌ಗಳ ಪಟ್ಟಿ ಕೊಹ್ಲಿ 83ನೇ ಸ್ಥಾನ ಪಡೆದಿದ್ದಾರೆ.

ಕಳೆದ 12 ತಿಂಗಳಲ್ಲಿ ಕೊಹ್ಲಿ 4 ಮಿಲಿಯನ್ ಡಾಲರ್ ಹಣವನ್ನು ಸಂಬಳದ ಮೂಲಕ ಹಾಗೂ 20 ಮಿಲಿಯನ್ ಡಾಲರ್ ಹಣವನ್ನು ಉತ್ಪನ್ನಗಳ ರಾಯಭಾರಿಯಾಗುವುದ ಮೂಲಕ ಗಳಿಸಿದ್ದು, ಒಟ್ಟು 24 ಮಿಲಿಯನ್ ಡಾಲರ್ ಸಂಪಾದನೆ ಮಾಡಿದ್ದಾರೆ.
ಅಂದಹಾಗೆ, ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್‌ಗಳ ಪಟ್ಟಿಯಲ್ಲಿ ಯಾವ ಮಹಿಳಾ ಕ್ರೀಡಾಪಟುವೂ ಸ್ಥಾನ ಪಡೆದಿಲ್ಲ. ಪಟ್ಟಿಯಲ್ಲಿ ಇರುವ ಎಲ್ಲ 100 ಮಂದಿಯೂ ಪುರುಷ ಕ್ರೀಡಾಪಟುಗಳೇ ಆಗಿದ್ದಾರೆ.
ಕಳೆದ ಒಂದು ವರ್ಷದಲ್ಲಿ 285 ಮಿಲಿಯನ್ ಡಾಲರ್ ಸಂಪಾದನೆ ಮಾಡಿರುವ ಅಮೆರಿಕದ ಬಾಕ್ಸರ್ ಫ್ಲಾಯ್ಡ್ ಮೇ ವೆದರ್ ನೂರು ಜನರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮೇವೆದರ್ ಅವರು ಫೋರ್ಬ್ಸ್‌ನ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಏಳು ವರ್ಷಗಳಲ್ಲಿ ಇದು ನಾಲ್ಕನೆಯ ಬಾರಿ.
ಕಳೆದ ಎರಡು ವರ್ಷ ಸತತವಾಗಿ ಮೊದಲ ಸ್ಥಾನದಲ್ಲಿದ್ದ ರಿಯಲ್ ಮ್ಯಾಡ್ರಿಡ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 108 ಮಿಲಿಯನ್ ಡಾಲರ್‌ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ರಿಯಲ್ ಮ್ಯಾಡ್ರಿಡ್‌ನ ಅವರ ಎದುರಾಳಿ ಲಿಯೊನೆಲ್ ಮೆಸ್ಸಿ 111 ಮಿಲಿಯನ್ ಡಾಲರ್ ಗಳಿಕೆ ಹೊಂದಿದ್ದು, ಎರಡನೆಯ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications