For Quick Alerts
ALLOW NOTIFICATIONS  
For Daily Alerts
 

25 ರನ್‌ ಬಾರಿಸುತ್ತಲೇ ಸಚಿನ್‌ ಮತ್ತೊಂದು ದಾಖಲೆ ಅಳಿಸಲಿರುವ ವಿರಾಟ್‌

ಭಾರತದ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ಸರಣಿಯ ವೇಳೆ ಬ್ಯಾಕ್‌ ಟು ಬ್ಯಾಕ್ ಸೊನ್ನೆ ಸುತ್ತಿದ್ದ ವಿರಾಟ್‌, ಮೂರನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದರು. ಇಲ್ಲಿಂದ ವಿರಾಟ್‌ ಹಿಂತಿರುಗೆ ನೋಡಲೇ ಇಲ್ಲ. ಮೈದಾನಕ್ಕೆ ಇಳಿದಾಗಲೆಲ್ಲಾ ಹೊಸ ದಾಖಲೆಗೆ ತಮ್ಮ ಹೆಸರನ್ನು ನಮೂದಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ವಿರಾಟ್‌ ವಿರಾವೇಶದ ಆಟವನ್ನು ಪ್ರದರ್ಶಿಸಿದರು. ಈಗ ವಿರಾಟ್‌ ಮತ್ತೊಂದು ಸರಣಿಗೆ ಸಜ್ಜಾಗುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಶತಕ ಹಾಗೂ ಕೊನೆಯ ಪಂದ್ಯದಲ್ಲಿ ಒಂದು ಅರ್ಧಶತಕ ಬಾರಿಸಿದ್ದ ವಿರಾಟ್‌, ದೇಶೀಯ ಟೂರ್ನಿಯಲ್ಲಿ ಆರ್ಭಟ ನಡೆಸಿದ್ದರು. 15 ವರ್ಷಗಳ ಬಳಿಕ ವಿಜಯ್ ಹಜಾರೆ ಏಕದಿನ ಸರಣಿಯಲ್ಲಿ ದೆಹಲಿ ಪರ ಬ್ಯಾಟ್ ಮಾಡಿದ್ದ ವಿರಾಟ್‌ ಆಡಿದ ಎರಡೂ ಪಂದ್ಯಗಳಲ್ಲಿ ಶತಕ ಸಾಧನೆ ಮಾಡಿ ಅಬ್ಬರಿಸಿದ್ದರು. ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಈಗ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ತವರಿನಲ್ಲಿ ಜನವರಿ 11 ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ವಿರಾಟ್‌ ಮೈದಾನ ಪ್ರವೇಶಿಸಲಿದ್ದಾರೆ.

Virat Kohli on the Cusp of History Set to Break Sachin Tendulkar s Record in New Zealand Series

ವಿರಾಟ್ ಅವರ ಭರ್ಜರಿ ಫಾರ್ಮ್‌ ಎದುರಾಳಿಗಳಿಗೆ ನಡುಕ ಹುಟ್ಟಿಸಿದೆ. ಭಾರತದ ಪರ ಸದ್ಯ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಬ್ಯಾಟ್ ಮಾಡುತ್ತಿರುವ ವಿರಾಟ್‌, ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಗುರು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು 25 ರನ್‌ ಬಾರಿಸಿದಲ್ಲಿ ಸಚಿನ್‌ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯನ್ನು ವಿರಾಟ್‌ ಅಳಿಸಿ ಹಾಕಲಿದ್ದಾರೆ.

25 ರನ್‌ಗೆ ದಾಖಲೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಈ ವರೆಗೆ ಮೂರು ಮಾದರಿಯ ಕ್ರಿಕೆಟ್‌ ಸೇರಿ ಒಟ್ಟು 27,975 ರನ್ ಗಳಿಸಿದ್ದಾರೆ. ಇಷ್ಟು ರನ್ ಬಾರಿಸಲು ವಿರಾಟ್‌ ಕೊಹ್ಲಿ ಒಟ್ಟಾರೆ ಅಂತಾರಾಷ್ಟ್ರೀಯ 623 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಟೆಸ್ಟ್‌, ಏಕದಿನ, ಟಿ20 ಪಂದ್ಯಗಳ ರನ್‌ಗಳು ಸೇರಿವೆ. ಇವರು ಇನ್ನು 25 ರನ್‌ ಬಾರಿಸಿದ್ದೇ ಆದಲ್ಲಿ 28 ಸಾವಿರ ರನ್‌ಗಳನ್ನು ಪೂರೈಸಲಿದ್ದಾರೆ. ಈ ವರೆಗೆ ವಿಶ್ವದಲ್ಲಿ ಈ ಸಾಧನೆಯನ್ನು ಕೇವಲ ಇಬ್ಬರು ಬ್ಯಾಟರ್‌ಗಳು ಮಾತ್ರ ಮಾಡಿದ್ದಾರೆ. ವಿರಾಟ್‌ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಈ ದಾಖಲೆ ನಿರ್ಮಿಸಿದರೆ, ಮತ್ತೊಂದು ದಾಖಲೆಯ ಒಡೆಯನಾಗುತ್ತಾರೆ.

Virat Kohli on the Cusp of History Set to Break Sachin Tendulkar s Record in New Zealand Series

ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೇ ವಿರಾಟ್‌ ಈ ಸಾಧನೆ ಮಾಡುವ ನಿರೀಕ್ಷೆ ಇದೆ. ಈ ಸಾಧನೆ ಮೊದಲ ಪಂದ್ಯದಲ್ಲಿ ಸಾಧ್ಯವಾಗದಿದ್ದರೂ ಇನ್ನು ಎರಡು ಪಂದ್ಯಗಳು ಬಾಕಿ ಇವೆ. ಈ ಪಂದ್ಯಗಳಲ್ಲಾದರೂ ವಿರಾಟ್‌ ಈ ದಾಖಲೆಯನ್ನು ನಿರ್ಮಿಸಬಲ್ಲರು. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 28 ಸಾವಿರ ರನ್‌ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.

ಸಚಿನ್‌ ದಾಖಲೆಯ ಮೇಲೆ ಕಣ್ಣು

ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 34,357 ರನ್ ಗಳಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಸಾಧಕರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಇದ್ದಾರೆ. ಇವರು 28,016 ರನ್ ಕಲೆ ಹಾಕಿದ್ದಾರೆ. ಸಂಗಾ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯದಲ್ಲಿ 28 ಸಾವಿರ ರನ್‌ ಮೈಲಿಗಲ್ಲು ತಲುಪಿದ್ದರು. ಸಚಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28 ಸಾವಿರ ಮುಟ್ಟಲು 644 ಇನಿಂಗ್ಸ್ ತೆಗೆದುಕೊಂಡರೆ, ಕುಮಾರ್ ಸಂಗಕ್ಕಾರ 666 ಇನಿಂಗ್ಸ್‌ ತೆಗೆದುಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಅವರಿಗೆ ಇನ್ನು ಅವಕಾಶಗಳಿದ್ದು, ಈ ದಾಖಲೆಯನ್ನು ಅವರು ಅಳಿಸಿ ಹಾಕಬಲ್ಲರು.

Story first published: Friday, January 2, 2026, 9:13 [IST]
Other articles published on Jan 2, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+