ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್: ದಾಖಲೆಗಳ ನಿರ್ಮಿಸಲು ಸಜ್ಜಾಗಿವೆ ಇಂಗ್ಲೆಂಡ್-ಭಾರತ

Virat Kohli On The Verge Of Achieving Another Milestone

ಬರ್ಮಿಂಗ್ ಹ್ಯಾಮ್, ಆಗಸ್ಟ್ 1: ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿರುವ ಎಜ್ ಬಾಸ್ಟನ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸುವುದಕ್ಕಾಗಿ ಸಜ್ಜಾಗಿವೆ. ಇಂಗ್ಲೆಂಡ್ ಗೆ ಇದು 1000ನೇ ಟೆಸ್ಟ್ ಕ್ರಿಕೆಟ್ ಆಗಿರುವುದರಿಂದ ಭಾರತವೂ ದಾಖಲೆಯಲ್ಲಿ ಪಾಲುದಾರನಾಗಲಿದೆ.

ಡ್ರೆಸ್ ಗಾಗಿ ಸಾಕ್ಷಿ ಧೋನಿ ಟ್ರೋಲ್: ಬೆನ್ನಿಗೆ ನಿಂತ ಅಭಿಮಾನಿಗಳು!ಡ್ರೆಸ್ ಗಾಗಿ ಸಾಕ್ಷಿ ಧೋನಿ ಟ್ರೋಲ್: ಬೆನ್ನಿಗೆ ನಿಂತ ಅಭಿಮಾನಿಗಳು!

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯೂ ದಾಖಲೆಯೊಂದನ್ನು ನಿರ್ಮಿಸುವುದರಲ್ಲಿದ್ದಾರೆ. ಇಂಗ್ಲೆಂಡ್ ಎದುರು ಕೊಹ್ಲಿ ಒಟ್ಟು 977ರನ್ ದಾಖಲೆ ಹೊಂದಿರುವುದರಿಂದ ಇಂದಿನ (ಆಗಸ್ಟ್ 1) ಪಂದ್ಯದಲ್ಲಿ ಕೊಹ್ಲಿ 1000ರನ್ ಪೂರೈಸಿದರೆ ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ. ಇಂಗ್ಲೆಂಡ್ ವಿರುದ್ಧ 1000 ರನ್ ಗಳಿಸಿದ ಭಾರತದ 13ನೇ ಆಟಗಾರನಾಗಿ ಕೊಹ್ಲಿ ಗುರುತಿಸಿಕೊಳ್ಳಲಿದ್ದಾರೆ.

ಇಂಗ್ಲೆಂಡ್ ಎದುರು ಅಧಿಕ ರನ್ ದಾಖಲೆಯನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. 7 ಶತಕ, 13 ಅರ್ಧ ಶತಕದೊಂದಿಗೆ 51.73 ಸರಾಸರಿಯಲ್ಲಿ ಸಚಿನ್, ಇಂಗ್ಲೆಂಡ್ ಎದುರು 2535 ರನ್ ಬಾರಿಸಿದ್ದಾರೆ.

ಸಚಿನ್ ಬಳಿಕ ಸುನೀಲ್ ಗವಾಸ್ಕರ್ (2483 ರನ್), ರಾಹುಲ್ ದ್ರಾವಿಡ್ (1950 ರನ್), ಗುಂಡಪ್ಪ ವಿಶ್ವನಾಥ್ (1880 ರನ್), ದಿಲೀಪ್ ವೆಂಗ್ ಸರ್ಕಾರ್ (1589 ರನ್), ಕಪಿಲ್ ದೇವ್ (1355 ರನ್), ಮೊಹಮ್ಮದ್ ಅಝಾರುದ್ದೀನ್ (1278 ರನ್), ವಿಜಯ್ ಮಂಜ್ರೇಕರ್ (1181 ರನ್), ಮಹೇಂದ್ರ ಸಿಂಗ್ ಧೋನಿ (1157 ರನ್), ಫಾರೂಕ್ ಇಂಜಿನಿಯರ್ (1113 ರನ್), ಚೇತೇಶ್ವರ್ ಪೂಜಾರ (1061 ರನ್), ರವಿ ಶಾಸ್ತ್ರಿ (1026 ರನ್) ಭಾರತೀಯರ ಪರ ಆಂಗ್ಲರ ಎದುರು 1000ಕ್ಕೂ ಅಧಿಕ ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ.

ಟೆಸ್ಟ್ ಕ್ರಿಕೆಟ್ ದಾರಿಯಲ್ಲಿ 1000 ಪಂದ್ಯಗಳನ್ನು ಪೂರೈಸಲಿರುವ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, 812 ಪಂದ್ಯಗಳ ಸಾಧನೆಯೊಂದಿಗೆ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ (535 ಪಂದ್ಯಗಳು) ತೃತೀಯ ಮತ್ತು ಭಾರತ (522 ಪಂದ್ಯಗಳು) ನಾಲ್ಕನೇ ಸ್ಥಾನದಲ್ಲಿದೆ.

2014ರ ಇಂಗ್ಲೆಂಡ್-ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆ ವೇಳೆ ಕೊಹ್ಲಿ ಕೇವಲ 134 ರನ್ ಗಳಿಸಿದ್ದರು. ಭಾರತ ಈ ಸರಣಿಯನ್ನು (ಒಂದು ಪಂದ್ಯ ಡ್ರಾ ದೊಂದಿದೆ) 3-1ರಿಂದ ಸೋತಿತ್ತುಕೂಡ. ಹೀಗಾಗಿ ಈ ಬಾರಿ ಕೊಹ್ಲಿಯ ಬ್ಯಾಟಿಂಗ್, ಭಾರತದ ಫಲಿತಾಂಶ ಕುತೂಹಲ ಮೂಡಿಸಿದೆ.

Story first published: Wednesday, August 1, 2018, 11:48 [IST]
Other articles published on Aug 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X