Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಒಂದು ಬೌಂಡರಿ ಬಾರಿಸಿ ದಾಖಲೆ ನಿರ್ಮಿಸಲಿದ್ದಾರೆ ವಿರಾಟ್‌

ಶನಿವಾರದಿಂದ ಮತ್ತೆ ಐಪಿಎಲ್‌ ಆರಂಭವಾಗಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ ಒಂದು ವಾರ ರದ್ದಾಗಿದ್ದು ಐಪಿಎಲ್‌ ಮತ್ತೆ ಪುನರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಎಲ್ಲರ ಚಿತ್ತ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರ ಮೇಲೆ ನೆಟ್ಟಿರಲಿದೆ. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬೌಂಡರಿ ಬಾರಿಸುತ್ತಾ ಇದ್ದಂತೆ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಹಾಗಿದ್ದರೆ ವಿರಾಟ್ ಕೊಹ್ಲಿ ಬರೆಯಲಿರುವ ದಾಖಲೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾದ ಸೂಪರ್‌ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಇತ್ತೀಚಿಗೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯವನ್ನು ಹೇಳಿದ್ದಾರೆ. ದಿಢೀರ್‌ ವಿದಾಯ ಹೇಳಿರುವ ವಿರಾಟ್‌, ಇನ್ನು ಮುಂದೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡಲಿದ್ದಾರೆ. ವಿರಾಟ್‌ ಕೊಹ್ಲಿ ಅವರ ದೊಡ್ಡ ನಿರ್ಧಾರದಿಂದ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ. ಇನ್ನು ವಿರಾಟ್‌ ಕೊಹ್ಲಿ ಅವರ ಟೆಸ್ಟ್‌ ಕ್ರಿಕೆಟ್‌ ನಿವೃತ್ತಿ ನೀಡಿದ್ದರಿಂದ ಆರ್‌ಸಿಬಿ ಅಭಿಮಾನಿಗಳು ಶನಿವಾರ ಬಿಳಿ ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬರಲಿದ್ದು, ಈ ಮೂಲಕ ವಿರಾಟ್‌ಗೆ ಭರ್ಜರಿ ಗಿಫ್ಟ್‌ ನೀಡಲು ಪ್ಲ್ಯಾನ್ ಮಾಡಿದ್ದಾರೆ.

Virat Kohli on the Verge of Breaking Two Major IPL Records Against KKR

ವಿರಾಟ್‌ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಐಪಿಎಲ್‌ನಲ್ಲಿ ಒಂದೇ ತಂಡದ ಪರ ಅತಿ ಹೆಚ್ಚು ರನ್‌, ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಹಿರಿಮೆಯನ್ನು ಹೊಂದಿರುವ ವಿರಾಟ್‌ ಕೊಹ್ಲಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಒಂದು ಬೌಂಡರಿ ಬಾರಿಸಿದರೆ ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯಲಿದ್ದಾರೆ.

ವಿರಾಟ್‌ ಬರೆಯಲಿರುವ ದಾಖಲೆ ಏನು?

ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ 263 ಪಂದ್ಯಗಳನ್ನು ಆಡಿದ್ದು, 8509 ರನ್‌ಗಳನ್ನು 39ರ ಸರಾಸರಿಯಲ್ಲಿ ಸಿಡಿಸಿದ್ದಾರೆ. ಈ ವೇಳೆ 290 ಸಿಕ್ಸರ್‌ ಹಾಗೂ 749 ಬೌಂಡರಿ ಬಾರಿಸಿದ್ದಾರೆ. ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಇನ್ನೊಂದು ಬೌಂಡರಿ ಬಾರಿಸುತ್ತಿದ್ದಂತೆ ವಿರಾಟ್‌ ಐಪಿಎಲ್‌ನಲ್ಲಿ 750 ಬೌಂಡರಿ ಬಾರಿಸಿದ ದಾಖಲೆಯನ್ನು ಬರೆಯಲಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Virat Kohli on the Verge of Breaking Two Major IPL Records Against KKR

ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರರು

ಶಿಖರ್‌ ಧವನ್‌ 768
ವಿರಾಟ್‌ ಕೊಹ್ಲಿ 749
ಡೇವಿಡ್ ವಾರ್ನರ್‌ 663
ರೋಹಿತ್ ಶರ್ಮಾ 627
ಅಜಿಂಕ್ಯ ರಹಾನೆ 511

ಮತ್ತೊಂದು ದಾಖಲೆ

ವಿರಾಟ್‌ ಕೊಹ್ಲಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದೇ ಆದಲ್ಲಿ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಹಿರಿಮೆಯನ್ನು ಸಹ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಡೇವಿಡ್ ವಾರ್ನರ್‌ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಸದ್ಯ ಉಭಯ ಆಟಗಾರರು ಐಪಿಎಲ್‌ನಲ್ಲಿ 62 ಅರ್ಧಶತಕ ಸಿಡಿಸಿದ್ದಾರೆ. ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ರನ್‌ ಮಹಲ್‌ ಕಟ್ಟಿದ್ದೇ ಆದಲ್ಲಿ ದಾಖಲೆಯ ಪುಸ್ತಕಕ್ಕೆ ಭರ್ಜರಿ ಕೆಲಸ ನೀಡಲಿದ್ದಾರೆ.

Story first published: Saturday, May 17, 2025, 13:16 [IST]
Other articles published on May 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+