Gabba Test: ಬ್ರಿಸ್ಬೇನ್‌ನಲ್ಲಿ ಶಕತದ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಪಂದ್ಯ ಬ್ರಿಸ್ಬೇನ್ ಅಂಗಳದಲ್ಲಿ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕಾಗಿ ಗಬ್ಬಾ ಮೈದಾನ ಸಂಪೂರ್ಣ ಸಿದ್ಧವಾಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ವಿಶ್ವಾಸವನ್ನು ಹೊಂದಿವೆ. ಈಗಾಗಲೇ ಭಾರತ, ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿತ್ತು. ಆಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತ್ತು. ಈಗ ಮೂರನೇ ಪಂದ್ಯದಲ್ಲಿ ಯಾರು ಪಂದ್ಯವನ್ನು ಗೆಲ್ಲುತ್ತಾರೋ ಅವರು ಸರಣಿಯಲ್ಲಿ ಮುನ್ನಡೆ ಸಾಧಿಸಲಿದ್ದಾರೆ.
ಬ್ರಿಸ್ಬೇನ್ ಮೈದಾನದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಂಗಳ ಪ್ರವೇಶಿಸುತ್ತಿದ್ದಂತೆ ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯಲಿದ್ದಾರೆ. ಉತ್ತಮ ಲಯದಲ್ಲಿ ಟೀಮ್ ಇಂಡಿಯಾ ಆಟಗಾರ ಆಡಿಲೇಡ್‌ನಲ್ಲಿ ನಿರಾಸೆಯನ್ನು ಅನುಭವಿಸಿದ್ದರು. ಹೀಗಾಗಿ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಈ ಬಾರಿ ಬ್ರಿಸ್ಬೇನ್‌ನಲ್ಲಿ ಲಯಕ್ಕೆ ಮರಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ವಿರಾಟ್ ಬ್ರಿಸ್ಬೇನ್‌ನಲ್ಲಿ ಬರೆಯಲಿರುವ ದಾಖಲೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪರ್ತ್‌ನಲ್ಲಿ ಅಬ್ಬರ
ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ, ಮೂರು ವರ್ಷದ ಬಳಿಕ ಶತಕ ಸಿಡಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾವನ್ನು ಕಾಡಲು ತಾವು ಸಿದ್ಧ ಎಂಬುದಾಗಿ ಸಾರಿ ಹೇಳಿದ್ದರು. ಆದರೆ ಆಡಿಲೇಡ್‌ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದಿದ್ದರು. ಎರಡನೇ ಟೆಸ್ಟ್ ನಿಗದಿತ ಸಮಯಕ್ಕಿಂತ ಬೇಗ ಮುಗಿದ ಹಿನ್ನೆಲೆಯಲ್ಲಿ, ಟೀಮ್ ಇಂಡಿಯಾ ಆಟಗಾರರು ಆಡಿಲೇಡ್‌ನಲ್ಲಿ ನೆಟ್ಸ್ ಅಭ್ಯಾಸ ನಡೆಸಿದರು. ಈ ವೇಳೆ ವಿರಾಟ್ ಕೊಹ್ಲಿ ಬ್ಯಾಕ್ ಫುಟ್ ಶಾಟ್‌ಗಳ ಪ್ರಯೋಗವನ್ನು ನಡೆಸಿ, ಮೂರನೇ ಟೆಸ್ಟ್‌ಗೆ ತಾಲೀಮು ನಡೆಸಿದರು.
ಬ್ರಿಸ್ಬೇನ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆ
ಬ್ರಿಸ್ಬೇನ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಬರೆಯಲು ಸಜ್ಜಾಗಿದ್ದಾರೆ. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಅಂಗಳಕ್ಕೆ ಇಳಿಯುತ್ತಿದ್ದಂತೆ ವಿರಾಟ್, ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಪಂದ್ಯಗಳನ್ನು ಆಡಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಿದ್ದಾರೆ. ಆಸೀಸ್ ವಿರುದ್ಧ ನೂರುಕ್ಕು ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 121 ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ವಿರಾಟ್ ಆಸೀಸ್ ವಿರುದ್ಧ 28 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಗಬ್ಬಾ ಅಂಗಳದಲ್ಲಿ ವಿರಾಟ್ ಅಂಗಳಕ್ಕೆ ಇಳಿಯುತ್ತಿದ್ದಂತೆ ಆಸ್ಟ್ರೇಲಿಯಾ ವಿರುದ್ಧ ನೂರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಸಾಧನೆ ಮಾಡಲಿದ್ದಾರೆ. ವಿರಾಟ್ ಆಸ್ಟ್ರೇಲಿಯಾ ವಿರುದ್ಧ 27 ಟೆಸ್ಟ್ ಪಂದ್ಯಗಳು, 49 ಏಕದಿನ ಪಂದ್ಯಗಳು ಮತ್ತು 23 ಟಿ20 ಪಂದ್ಯಗಳು ಆಡಿದ್ದಾರೆ. ಇನ್ನು ಸಚಿನ್ ಆಸ್ಟ್ರೇಲಿಯಾ ವಿರುದ್ಧ ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 110 ಪಂದ್ಯಗಳನ್ನು ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications