ಭಾರತೀಯ ಕ್ರಿಕೆಟರ್ ಎಂದರೆ ಮಾರ್ಗನ್‌ಗೆ ಇಷ್ಟೊಂದು ತಾತ್ಸಾರನಾ?!

ಲಂಡನ್, ಮೇ 10: ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಅಂತ ಭಾರತದ ಆಟಗಾರರ ಜೊತೆ ವಿದೇಶಿ ಆಟಗಾರರ ಆಯ್ಕೆ ಕೊಟ್ಟಾಗ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಭಾರತದ ಯಾವ ಆಟಗಾರರನ್ನೂ ಆರಿಸಿಲ್ಲ. ಆಯಾ ತಲೆಮಾರಿನ ಆಟಗಾರ ಜೊತೆಗಿದ್ದ ಭಾರತೀಯ ಆಟಗಾರರನ್ನು ಮಾರ್ಗನ್ ಬದಿಗಿರಿಸಿದ್ದು ಅಚ್ಚರಿಗೆ ಕಾರಣವಾಗಿದೆ.
ಇಎಸ್‌ಪಿಎನ್ ಕ್ರಿಕ್ ಇನ್ಫೋ ನಡೆಸಿದ ರ್ಯಾಪಿಡ್ ಕ್ವಶ್ಚನ್‌ಗೆ ಉತ್ತರಿಸುತ್ತ ಮಾರ್ಗನ್, ಜೋ ರೂಟ್ ಮತ್ತು ವಿರಾಟ್ ಕೊಹ್ಲಿಯಲ್ಲಿ ನಿಮ್ಮ ನೆಚ್ಚಿನ ಆಯ್ಕೆ ಯಾರು ಎಂಬ ಪ್ರಶ್ನೆಗೆ ತನ್ನ ಸಹ ಆಟಗಾರ ರೂಟ್ ಉತ್ತಮ ಬ್ಯಾಟ್ಸ್ಮನ್ ಎಂದರು. ಇನ್ನು ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಇವರಲ್ಲಿ ಲಾರಾ ಅವರನ್ನು ಆರಿಸಿದ್ದಾರೆ. ಎಬಿ ಡಿ ವಿಲಿಯರ್ಸ್ ಮತ್ತು ರೋಹಿತ್ ಶರ್ಮಾ ಇವರಲ್ಲಿ ಎಬಿಡಿಯನ್ನು ಆರಿಸಿದ್ದಾರೆ.
ಆದರೆ ಬಿಗ್ ಬ್ಯಾಷ್ ಲೀಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಐಪಿಎಲನ್ನು, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳಲ್ಲಿ ಭಾರತವನ್ನು ಮಾರ್ಗನ್ ಆಯ್ಕೆ ಮಾಡಿದರು. ಇನ್ನು ಸ್ಪೈಡರ್ ಮ್ಯಾನ್ ಎದುರು ಸೂಪರ್ ಮ್ಯಾನನ್ನು, ಭಾರತದ ಆಹಾರದ ಎದುರು ಇಂಗ್ಲಿಷ್ ಆಹಾರವನ್ನು, ರಗ್ಬಿ ಎದುರು ಗಾಲ್ಫ್ ಆಟವನ್ನು ಮಾರ್ಗನ್ ಆರಿಸಿದ್ದಾರೆ.
ಮುಂಬರಲಿರುವ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಮಾರ್ಗನ್, ವಿಶ್ವಕಪ್ ಬಗ್ಗೆ ಮಾತನಾಡುತ್ತ, ಟ್ರೋಫಿ ಎತ್ತಲು ತಮ್ಮ ತಂಡ ಎಲ್ಲಾ ರೀತಿಯಲ್ಲೂ ಶಕ್ತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾದ ಸವಾಲು ಸ್ವೀಕರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications