ವಿರಾಟ್ or ಸಚಿನ್ : ಇಶಾಂತ್ ಶರ್ಮಾ ಆಯ್ಕೆ ಮಾಡಿದ ಬೆಸ್ಟ್ ಬ್ಯಾಟ್ಸ್‌ಮನ್!
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರ. ಮೂರೂ ಫಾರ್ಮೆಟ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯನ್ನು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.
ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಹೋಲಿಕೆ ಮಾಡಲಾಗಿತ್ತು, ಈ ಬಗ್ಗೆ ಸಾಕಷ್ಟು ಆಟಗಾರರು ತಮ್ಮದೇ ರೀತಿಯ ಉತ್ತರವನ್ನು ನೀಡಿದ್ದಾರೆ. ಇನ್ನು ಕೆಲವರು ಇಬ್ಬರೂ ಆಟಗಾರರ ಮಧ್ಯೆ ಹೋಲಿಕೆ ಸಲ್ಲದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಅದೇನೆ ಇದ್ದರು ಈ ಚರ್ಚೆ ಮುಂದುವರೆಯುತ್ತಲೇ ಇದೆ.
ಇದೇ ಪ್ರಶ್ನೆ ಟೀಮ್ ಇಂಡಿಯಾದ ಅನುಭವಿ ವೇಗಿ ಇಶಾಂತ್ ಶರ್ಮಾ ಅವರಿಗೂ ಎದುರಾಗಿದೆ. ಇದಕ್ಕೆ ಇಶಾಂತ್ ಶರ್ಮಾ ಉತ್ತರವನ್ನೂ ನೀಡಿದ್ದಾರೆ. ಇಶಾಂತ್ ನೀಡಿದ ಉತ್ತರವೇನು ಅನ್ನೋದನ್ನು ಮುಂದೆ ಓದಿ

ಇಶಾಂತ್ ಮುಂದೆ ಕಠಿಣ ಪ್ರಶ್ನೆ
ಟೀಮ್ ಇಂಡಿಯಾದ ಅನುಭವಿ ವೇಗಿ ಇಶಾಂತ್ ಶರ್ಮಾ ಕ್ರಿಕೆಟ್ ವೆಬ್‌ಸೈಟ್‌ಗೆ ಸಂದರ್ಶನವನ್ನು ನೀಡಿದ್ದರು. ಈ ಸಂದರ್ಭದಲ್ಲಿ ಇಶಾಂತ್ ಶರ್ಮಾ ಅವರಲ್ಲಿ ಈ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಇಶಾಂತ್ ಶರ್ಮಾ ಹಿಂದೂ ಮುಂದು ನೋಡದೆ ತಮ್ಮ ಉತ್ತರವನ್ನು ನೀಡಿದ್ದಾರೆ.

ಇಶಾಂತ್ ನೀಡಿದ್ರು ಉತ್ತರ!
ಟೀಮ್ ಇಂಡಿಯಾ ಅನುಭವಿ ವೇಗಿ ಇಶಾಂತ್ ಶರ್ಮಾ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಕೊಹ್ಲಿಯೇ ತನ್ನ ಪ್ರಕಾರ ಬೆಸ್ಟ್ ಬ್ಯಾಟ್ಸ್‌ಮನ್ ಎಂದಿದ್ದಾರೆ. ನಾನು ಕಂಡ ಅತ್ಯುತ್ತಮ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದು ಉತ್ತರವನ್ನು ನೀಡಿದ್ದಾರೆ.

ಜೊತೆ ಜೊತೆಗೆ ಕಾಲಿಟ್ಟರು ಟೀಮ್ ಇಂಡಿಯಾಗೆ
ಇಶಾಂತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ಒಂದೇ ಸಮಯದಲ್ಕಿ ಕಾಲಿಟ್ಟರು. ಇಶಾಂತ್ ಶರ್ಮಾ 2007ರಲ್ಲಿ ಟೀಮ್ ಇಂಡಿಯಾಗೆ ಪ್ರವೇಶ ಪಡೆದರೆ ವಿರಾಟ್ ಕೊಹ್ಲಿ 2008ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರು.

ಅನೇಕ ದಾಖಲೆ ಬ್ರೇಕ್ ಮಾಡಿದ್ದಾರೆ ವಿರಾಟ್
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚುಹರಿಸಿರುವ ಆಟಗಾರ. ಟೆಸ್ಟ್ ಏಕದಿನ ಟಿ20ಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡುತ್ತಿರುವ ವಿರಾಟ್ ಅನೇಕ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಮುರಿದಿರುವ ವಿರಾಟ್ ಮತ್ತಷ್ಟು ಎತ್ತರಕ್ಕೇರುವ ಮುನ್ಸೂಚನೆ ನೀಡಿದ್ದಾರೆ.

ಸದ್ಯ ವಿರಾಟ್ ಫಾರ್ಮ್‌ನಲ್ಲಿಲ್ಲ
ವಿರಾಟ್ ಕೊಹ್ಲಿ ಸದ್ಯ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಹಿಂದೇಂದೂ ಕಾಣದ ಫಾರ್ಮ್ ಸಮಸ್ಯೆಯನ್ನು ಎದುರಿಸಿದ್ದರು. ಕಳೆದ ಆಗಸ್ಟ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೂ ಶತಕವನ್ನು ವಿರಾಟ್ ಕೊಹ್ಲಿ ಸಿಡಿಸಲು ಸಾಧ್ಯವಾಗಲ್ಲ. ಆದರೆ ವಿರಾಟ್ ಕೊಹ್ಲಿ ಈ ಫಾರ್ಮ್ ಸಮಸ್ಯೆಯಿಂದ ಆದಷ್ಟು ಬೇಗ ಹೊರಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ವಿರಾಟ್ ಅಭಿಮಾನಿಗಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications