Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ ಸೇರಿ ಭಾರತೀಯ ಕ್ರಿಕೆಟಿಗರಿಂದ ಶಿಕ್ಷಕರ ದಿನದ ಸಂದೇಶ

Virat Kohli, other Indian Cricketers send in Teachers Day wishes

ನವದೆಹಲಿ: ಸೆಪ್ಟೆಂಬರ್ 5ರಂದು ಶಿಕ್ಷಕರ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಮಾಡಲಾಗುತ್ತದೆ. ಈ ವಿಶೇಷ ದಿನ ಭಾರತದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಕ್ರಿಕೆಟಿಗರು ಶಿಕ್ಷಕರ ದಿನದ ಸಂದೇಶ ಕಳುಹಿಸಿದ್ದಾರೆ.

ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಗೌತಮ್ ಗಂಭೀರ್, ಅಜಿಂಕ್ಯ ರಹಾನೆ ಸೇರಿ, ಪ್ರಗ್ಯಾನ್ ಓಜಾ, ಶಿಖಾ ಪಾಂಡೆ ಸೇರಿದಂತೆ ಭಾರತದ ಅನೇಕ ಸ್ಟಾರ್ ಕ್ರಿಕೆಟ್ ಆಟಗಾರರು ತಮ್ಮ ತಮ್ಮ ಶಿಕ್ಷಕರನ್ನು ಸ್ಮರಿಸಿ ಶುಭಾಶಯಗಳನ್ನು ಬರೆದುಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಕೊಹ್ಲಿ, 'ನಮ್ಮ ಆಧಾರ ಸ್ತಂಭವಾಗಿ ಸದಾ ನಮಗೆ ಬೆಂಬಲ ನೀಡುವ, ನಮ್ಮ ಬೆನ್ನ ಹಿಂದೆಯಿದ್ದು ಪ್ರೋತ್ಸಾಹಿಸುವ ಎಲ್ಲಾ ಶಿಕ್ಷಕರಿಗೆ, ಕೋಚ್‌ಗಳಿಗೆ ಶಿಕ್ಷಕರ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ನಮಗೆ ಮಾರ್ಗದರ್ಶನ ಮಾಡಿದ ಶಿಕ್ಷಕರಿಗೆ ಅನಂತ ನಮನಗಳು ಎಂದು ಅನಿಲ್ ಕುಂಬ್ಳೆ ಬರೆದುಕೊಂಡಿದ್ದರೆ, ನನಗೇನನ್ನೋ ಹೇಳಿಕೊಟ್ಟ ಶಿಕ್ಷಕರಿಗೆ ಕೃತಜ್ಞತೆಗಳು ಎಂದು ವಿವಿಎಸ್ ಲಕ್ಷ್ಮಣ್ ಬರೆದಿದ್ದಾರೆ. ಇನ್ನು ಶಿಖರ್ ಧವನ್ ತನ್ನ ಬಾಲ್ಯದ ಶಿಕ್ಷಕ ಮದನ್ ಶರ್ಮಾ ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.

Story first published: Saturday, September 5, 2020, 16:12 [IST]
Other articles published on Sep 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+