For Quick Alerts
ALLOW NOTIFICATIONS  
For Daily Alerts
 

Virat Kohli: ಬಾಬರ್ ಅಜಮ್‌ಗಿಂತ ವಿರಾಟ್ ಕೊಹ್ಲಿ ಉತ್ತಮ ಎಂದ ಪಾಕ್ ಮಾಜಿ ಕ್ರಿಕೆಟಿಗ

Virat Kohli: Pakistan Former Cricketer Explains Why Virat Kohli Better Than Babar Azam

ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ತಮ್ಮ ಅತ್ಯದ್ಭುತ ಬ್ಯಾಟಿಂಗ್ ಮೂಲಕ ಹಲವು ಮೈಲಿಗಲ್ಲುಗಳನ್ನು ಸೃಷ್ಠಿಸಿರುವ ಆಟಗಾರ. ಯಾವುದೇ ಮಾದರಿ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಕೂಡ ಉತ್ತಮ ಬ್ಯಾಟರ್. ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡ ಸಂದರ್ಭದಲ್ಲಿ ಹಲವರು ಬಾಬರ್ ಅಜಂ ಮತ್ತು ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಮಾಡಲು ಆರಂಭಿಸಿದ್ದರು. ಪಾಕಿಸ್ತಾನ ತಂಡದ ಅಭಿಮಾನಿಗಳು ಬಾಬರ್ ಅಜಂ ಶ್ರೇಷ್ಠ ಆಟಗಾರ ಎಂದರೆ, ಭಾರತದ ಅಭಿಮಾನಿಗಳು ವಿರಾಟ್ ಕೊಹ್ಲಿ ಶ್ರೇಷ್ಠ ಎನ್ನುತ್ತಿದ್ದರು.

ಸದ್ಯ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದು, ಬ್ಯಾಟಿಂಗ್ ಮೂಲಕವೇ ಟೀಕಾಕಾರರ ಬಾಯಿಮುಚ್ಚಿಸಿದ್ದಾರೆ. ಮೂರು ವರ್ಷಗಳ ಕಾಲ ಶತಕ ಗಳಿಸಲು ವಿಫಲವಾಗಿದ್ದ ಅವರು, ಕಳೆದ ಏಷ್ಯಾ ಕಪ್ ಬಳಿಕ ಮೂರು ಮಾದರಿಯಲ್ಲಿ ಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ 186 ರನ್ ಗಳಿಸಿ ಮಿಂಚಿದ್ದರು.

ಸದ್ಯ ಬಾಬರ್ ಅಜಮ್‌ಗಿಂತ ವಿರಾಟ್ ಕೊಹ್ಲಿಯೇ ಶ್ರೇಷ್ಠ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗೆ ಅಬ್ದುಲ್ ರಜಾಕ್ ಹೇಳಿದ್ದಾರೆ. ಕೊಹ್ಲಿ ಯಾಕೆ ಶ್ರೇಷ್ಠ ಎನ್ನುವುದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ.

Virat Kohli: Pakistan Former Cricketer Explains Why Virat Kohli Better Than Babar Azam

ವಿರಾಟ್ ಕೊಹ್ಲಿ ಫಿಟ್‌ನೆಸ್

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಫಿಟ್‌ನೆಸ್ ಹೊಂದಿರುವ ಆಟಗಾರ. ಅವರ ಫಿಟ್‌ನೆಸ್‌ಗೆ ಇಡೀ ಜಗತ್ತೇ ಮಾರುಹೋಗಿದೆ. ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಎನ್ನುವುದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. 34ನೇ ವಯಸ್ಸಿನಲ್ಲೂ ಕೊಹ್ಲಿ ಅದ್ಭುತವಾದ ಫಿಟ್‌ನೆಸ್ ಹೊಂದಿದ್ದಾರೆ. ರನ್‌ ಓಡುವುದರಲ್ಲಿ ಅವರು ಯುವ ಆಟಗಾರರನ್ನೂ ಮೀರಿಸುತ್ತಾರೆ.

ಕೊಹ್ಲಿ ಫಿಟ್‌ನೆಸ್‌ಗೆ ಅಬ್ದುಲ್ ರಜಾಕ್ ಕೂಡ ಮಾರುಹೋಗಿದ್ದಾರೆ. ಕೊಹ್ಲಿ ಫಿಟ್‌ನೆಸ್ ನೋಡಿ ನಾನು ಅವರ ಅಭಿಮಾನಿಯಾದೆ ಎಂದು ಹೇಳಿದ್ದಾರೆ. ಕೊಹ್ಲಿಗೆ ಹೋಲಿಕೆ ಮಾಡಿದರೆ, ಬಾಬರ್ ಅಜಮ್ ಉತ್ತಮ ಫಿಟ್‌ನೆಸ್ ಹೊಂದಿಲ್ಲ, ಅವರಿನ್ನೂ ಈ ವಿಚಾರದಲ್ಲಿ ಹೆಚ್ಚು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

Virat Kohli: Pakistan Former Cricketer Explains Why Virat Kohli Better Than Babar Azam

ಕೊಹ್ಲಿ ಗಾಯಗೊಳ್ಳುವುದು ಕಮ್ಮಿ

ವಿರಾಟ್ ಕೊಹ್ಲಿ ಗಾಯಗೊಂಡಿರುವುದು ಅತ್ಯಂತ ಕಡಿಮೆ ಬಾರಿ, ಅವರು ತಮ್ಮ ಕೌಶಲ್ಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಾರೆ. ಅವರ ಫಿಟ್ನೆಸ್ ವಿಶ್ವದರ್ಜೆಯದ್ದಾಗಿದೆ, ಕೊಹ್ಲಿ ಫಿಟ್‌ನೆಸ್ ಮತ್ತು ಕ್ಯಾಲೋರಿ ಸೇವನೆಗೆ ಸಂಬಂಧಿಸಿದಂತೆ ಕ್ರಿಕೆಟ್‌ನಲ್ಲಿ ಬದಲಾವಣೆಯನ್ನು ತಂದಿದ್ದಾರೆ ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.

ಅಜಮ್ ಶ್ರೇಷ್ಠ ಬ್ಯಾಟರ್ ಆಗಿದ್ದರೂ, ಆಟದ ಎಲ್ಲಾ ಸ್ವರೂಪಗಳಲ್ಲಿ ಕೊಹ್ಲಿಯಂತೆ ಸ್ಥಿರತೆಯನ್ನು ತೋರಿಸಲು ಸಾಧ್ಯವಾಗಿಲ್ಲ, ವಿರಾಟ್ ಕೊಹ್ಲಿ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ರನ್ ಗಳಿಸುವ ಆಟಗಾರ, ಏಕದಿನ, ಟಿ20 ಮತ್ತು ಟೆಸ್ಟ್ ಮಾದರಿಯಲ್ಲಿ ಸ್ಥಿರವಾಗಿ ರನ್ ಗಳಿಸಿದ್ದಾರೆ ಎಂದು ರಜಾಕ್ ಹೇಳಿದ್ದಾರೆ.

"ಬಾಬರ್ ಪಾಕಿಸ್ತಾನದ ನಂಬರ್ ಒನ್ ಆಟಗಾರ. ಏಕದಿನ ಮಾದರಿಯಲ್ಲಿ ಅವರು ನಂಬರ್ 1 ಆಟಗಾರ. ಪ್ರತಿಯೊಂದು ದೇಶಕ್ಕೂ ಉತ್ತಮ ಆಟಗಾರ ಇರುತ್ತಾರೆ. ನಾವು ಅವರಿಬ್ಬರನ್ನೂ ಹೋಲಿಕೆ ಮಾಡುವ ಅಗತ್ಯವಿಲ್ಲ. ಕಪಿಲ್ ದೇವ್ ಅಥವಾ ಇಮ್ರಾನ್ ಖಾನ್ ಇವರಿಬ್ಬರ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇಬ್ಬರೂ ವಿಶ್ವದರ್ಜೆಯ ಆಟಗಾರರು. ಆದರೆ, ಕೊಹ್ಲಿಯ ಫಿಟ್‌ನೆಸ್ ಬಾಬರ್‌ಗಿಂತ ಉತ್ತಮವಾಗಿದೆ ಎಂದು ರಜಾಕ್ ಹೇಳಿದ್ದಾರೆ.

Story first published: Tuesday, March 28, 2023, 13:13 [IST]
Other articles published on Mar 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+