ಅವಶ್ಯಕತೆ ಬಿದ್ದರೆ ಓವರ್ ನಲ್ಲಿ 6 ಡೈವ್‌ಗಳನ್ನೂ ಹೊಡೆಯಬಲ್ಲೆ: ಕೊಹ್ಲಿ


ನವದೆಹಲಿ, ಅಕ್ಟೋಬರ್ 26: ಕ್ರಿಕೆಟ್ ವಿಚಾರದಲ್ಲಿ ನನಗೆ ಯಾವತ್ತಿಗೂ ತಂಡವೇ ಮುಖ್ಯ. ತಂಡದ ಗೆಲುವಿಗೋಸ್ಕರ ನಾನು ಎಷ್ಟೇ ಶ್ರಮವನ್ನಾದರೂ ವ್ಯಯಿಸಬಲ್ಲೆ ಎಂದಿರುವ ಟೀಮ್ ಇಂಡಿಯಾ ನಾಯಕ, ಅವಶ್ಯಕತೆ ಬಿದ್ದರೆ ಒಂದೇ ಓವರ್ ನಲ್ಲಿ 6 ಡೈವ್ ಗಳನ್ನು ಬೇಕಾದರೆ ಹೊಡೆಯಬಲ್ಲೆ ಎಂದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ವಿಶಾಖಪಟ್ನಂನಲ್ಲಿ ನಡೆದಿದ್ದ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 129 ಎಸೆತಗಳಲ್ಲಿ ಅಜೇಯ 157 ರನ್ ಬಾರಿಸಿದ್ದರು. ಈ ರೋಚಕ ಪಂದ್ಯದಲ್ಲಿ ಎರಡೂ ತಂಡಗಳು 321 ರನ್ ಬಾರಿಸಿ ಟೈ ಮಾಡಿಕೊಂಡಿದ್ದವು. ಹೀಗಾಗಿ ತಂಡದ ಗೆಲುವಿಗೆ ಒಂದೊಂದು ರನ್ನೂ ಅವಶ್ಯಕ ಎಂದಿರುವ ಕೊಹ್ಲಿ ಈ ಮಾತುಗಳನ್ನಾಡಿದರು.
ವಿಶಾಖಪಟ್ನಂ ಪಂದ್ಯದಲ್ಲಿ ಕೊಹ್ಲಿ ಮತ್ತು ಅಂಬಾಟಿ ರಾಯುಡು ಇಬ್ಬರೇ ಗಮನಾರ್ಹ ಹೋರಾಟ ಮಾಡಿದ್ದು. ರಾಯುಡು 73 ರನ್ ಬಾರಿಸಿದ್ದರೆ, ಕೊಹ್ಲಿ 13 ಬೌಂಡರಿ ಮತ್ತು 4 ಸಿಕ್ಸರ್ ಗಳು ಸೇರಿ 157 ರನ್ ನೊಂದಿಗೆ 37ನೇ ಏಕದಿನ ಶತಕ ಪೂರೈಸಿಕೊಂಡಿದ್ದರು. ಇದೇ ಪಂದ್ಯದಲ್ಲಿ ಕೊಹ್ಲಿ 10,000 ರನ್ ಮೈಲಿಗಲ್ಲು ಸ್ಥಾಪಿಸಿದ್ದರು.

ದೇಹ ದಂಡನೆಗೂ ಸಿದ್ಧ
ವಿಶಾಖಪಟ್ನಂ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ನನಗೆ ಎಂದಿಗೂ ತಂಡವೇ ಮುಖ್ಯ. ತಂಡಕ್ಕೋಸ್ಕರ ತಾನು ಎಷ್ಟೇ ದೇಹ ದಂಡನೆಗೂ ಸಿದ್ಧ. ನನ್ನ ಶ್ರಮ ತಂಡಕ್ಕೆಷ್ಟು ನೆರವಾಗುತ್ತೋ ಎಂಬುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೋಲ್ಲ. ಆದರೆ ತಂಡದ ಪರ ಶ್ರಮವಹಿಸಲು ನಾನು ಯಾವತ್ತಿಗೂ ಸಿದ್ಧ ಎಂಬರ್ಥದಲ್ಲಿ ಮಾತನಾಡಿದರು.

ತಂಡಕ್ಕೋಸ್ಕರವೇ ಆಡುವವ
ಕೊಹ್ಲಿ ಆಟವನ್ನು ಗಮನಿಸಿದ ಯಾರಿಗಾದರೂ ಕೊಹ್ಲಿ ಸ್ವಾರ್ಥಕ್ಕೋಸ್ಕರ ಆಡುವ ಬದಲು ತಂಡಕ್ಕೋಸ್ಕರ ಆಡುವವರು ಅನ್ನೋದು ಗೊತ್ತಾಗಿ ಬಿಡುತ್ತೆ. ಅಷ್ಟೋ ಸಾರಿ ಕೊಹ್ಲಿ ತಂಡದ ಗೆಲುವಿನ ಹೊರೆ ಹೊತ್ತುಕೊಂಡಿದ್ದೂ ಇದೆ. ಅದರಲ್ಲೂ ನಾಯಕನಾದ ಮೇಲಂತೂ ಕೊಹ್ಲಿ ತಂಡದ ಗೆಲುವಿನ ನಿಟ್ಟಿನಲ್ಲಿ ಹೆಚ್ಚು ಹೋರಾಟಕ್ಕೆ ನಿಂತಿದ್ದಂತೂ ಸ್ಪಷ್ಟ.

ನನ್ನ ಕರ್ತವ್ಯವದು
'ಒಂದು ವೇಳೆ ಒಂದೇ ಓವರ್ ನಲ್ಲಿ 6 ಬಾರಿ ಡೈವ್ ಹೊಡೆಯಬೇಕಾಗಿ ಬಂದರೆ ನಾನು ತಂಡಕ್ಕೋಸ್ಕರ ಅದನ್ನು ಮಾಡಿಯೇ ತೀರುತ್ತೇನೆ. ಅದು ನನ್ನ ಕರ್ತವ್ಯವೂ ಹೌದು. ನನ್ನ ದೇಶಕ್ಕೋಸ್ಕರ ಆಡಲು ನನ್ನನ್ನು ತಂಡದಲ್ಲಿ ಆರಿಸಿದ್ದಾರೆ. ತಂಡಕ್ಕಾಗಿ 6 ಡೈವ್ ಹೊಡೆದರೆ ಅದೂ ನನ್ನ ಜವಾಬ್ದಾರಿ ಪರಿಧಿಯಲ್ಲೇ ಬರುತ್ತದೆ' ಎಂದು ವಿರಾಟ್ ಹೇಳಿದರು.

ಹೆಚ್ಚುವರಿ ರನ್ ಗಳಿಸೋದೇ ಉದ್ದೇಶ
'ಪಂದ್ಯದ ವೇಳೆ ನಾನು 6 ಡೈವ್ ಬೇಕಾದರೆ ಹೊಡೆಯುತ್ತೇನೆಂದರೆ ಅದು ಯಾರೆದುರೂ ತೋರಿಸಿಕೊಳ್ಳೋದಕ್ಕೆ ಅಲ್ಲ. ಅಲ್ಲಿ ತಂಡಕ್ಕಾಗಿ ಹೆಚ್ಚುವರಿ ರನ್ ಕದಿಯುವುದಷ್ಟೇ ಉದ್ದೇಶ ಹೊರತು ಬೇರೇನು ಇಲ್ಲ' ಎಂದು ಕೊಹ್ಲಿ ತಿಳಿಸಿದರು. ಪಂದ್ಯ ಟೈ ಆಗೋದನ್ನು ತಪ್ಪಿಸಲು ಒಂದು ರನ್ನೂ ಮುಖ್ಯ ಎಂಬುದನ್ನು ತಿಳಿಸಿ ಕೊಹ್ಲಿ ಅಭಿಪ್ರಾಯ ಹಂಚಿಕೊಂಡರು.(ಚಿತ್ರ ಕೃಪೆ: ರಾಯಲ್ ಚಾಲೆಂಜ್)

ನನ್ನನ್ನು ತಳ್ಳಿಬಿಡಿ
'ಬ್ಯಾಟಿಂಗ್ ಮಾಡುತ್ತಿದ್ದಾಗ, ರನ್ ಕದಿಯುವಿಕೆಯ ಅಗತ್ಯವಿದ್ದಾಗ ನಾನು ದಣಿದಿದ್ದೇನೆ ಅಥವಾ ಓಡುವ ಯೋಚನೆಯಲ್ಲಿಲ್ಲ ಅಂತ ಭಾವಿಸುವುದರ ಬದಲು ನೀವು (ಕ್ರೀಸ್ ನಲ್ಲಿರುವ ಇನ್ನೊಬ್ಬ ಆಟಗಾರ) ನನ್ನನ್ನು ಓಡಿಸಿ. ನನ್ನ ತಂಡಕ್ಕೆ ಯಾವೆಲ್ಲ ರೀತಿಯಲ್ಲಿ ನಾನು ನೆರವು ನೀಡಲು ಸಾಧ್ಯವೋ ಆ ಎಲ್ಲದಕ್ಕೂ ನಾನು ಯಾವಾಗಲೂ ತಯಾರಿದ್ದೇನೆ' ಎಂದರು ಕ್ಯಾಪ್ಟನ್ ಕೊಹ್ಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications