IPL 2024: ಐಪಿಎಲ್ ಇತಿಹಾಸದಲ್ಲಿ ಡೇವಿಡ್ ವಾರ್ನರ್ ಬೃಹತ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ
ಶುಕ್ರವಾರ, ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 173 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಇದೇ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದರು.

ಐಪಿಎಲ್ ಇತಿಹಾಸದಲ್ಲಿ ಪ್ರತ್ಯೇಕ ಎರಡು ತಂಡಗಳ ವಿರುದ್ಧ 1000 ರನ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ಸಾವಿರ ರನ್ ಪೂರ್ಣಗೊಳಿಸಿದ್ದ ವಿರಾಟ್ ಕೊಹ್ಲಿ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ 15ನೇ ರನ್ ಗಳಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಾವಿರ ರನ್‌ಗಳ ಗಡಿ ತಲುಪಿದರು.
35 ವರ್ಷದ ಬಲಗೈ ಬ್ಯಾಟರ್ ವಿರಾಟ್ ಕೊಹ್ಲಿ ಪಂದ್ಯದ ಮೊದಲ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಮಿಡ್ ವಿಕೆಟ್ ಮೂಲಕ ಬೃಹತ್ ಸಿಕ್ಸರ್ ಬಾರಿಸಿ ಅವರ ಅದ್ಭುತ ದಾಖಲೆಯನ್ನು ತಲುಪಿದರು.

ತಮ್ಮ ಎರಡನೇ ಮಗುವಿನ ಜನನದಿಂದಾಗಿ ಎರಡೂವರೆ ತಿಂಗಳ ವಿರಾಮದ ನಂತರ ವಿರಾಟ್ ಕೊಹ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಅವರು ಇಡೀ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಕಳೆದುಕೊಂಡರು.
ಫೆಬ್ರವರಿ 15ರಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಎರಡನೇ ಮಗುವನ್ನು ಲಂಡನ್‌ನಲ್ಲಿ ಸ್ವಾಗತಿಸಿದರು. ಸ್ಟಾರ್ ಬ್ಯಾಟರ್ ತನ್ನ ವಿರಾಮದಿಂದ ಮಾರ್ಚ್ 17ರಂದು ಭಾರತಕ್ಕೆ ಹಿಂತಿರುಗಿದರು ಮತ್ತು ತಂಡದ ಅನ್‌ಬಾಕ್ಸಿಂಗ್ ಈವೆಂಟ್‌ನ ಮುನ್ನ ಆರ್‌ಸಿಬಿ ತಂಡವನ್ನು ಸೇರಿಕೊಂಡರು.
ಎಂ ಚಿನ್ನಸ್ವಾಮಿಗೆ ಮರಳುತ್ತಿದ್ದಂತೆಯೇ ವಿರಾಟ್ ಕೊಹ್ಲಿ ತಕ್ಷಣವೇ ನೆಟ್ಸ್‌ಗೆ ಹೋದರು ಮತ್ತು ಮಾರ್ಚ್ 19ರಂದು ತುಂಬಿದ ಕ್ರೀಡಾಂಗಣದ ಮುಂದೆ ಅಭ್ಯಾಸ ಮಾಡಿದರು.
ಇನ್ನು ಎರಡು ತಂಡಗಳ ವಿರುದ್ಧ 1000 ರನ್ ಸಾಧನೆ ಮಾಡಿದ ಮೊದಲ ಆಟಗಾರ ವಿರಾಟ್ ಕೊಹ್ಲಿ ಅಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಡೇವಿಡ್ ವಾರ್ನರ್ ನಂತರ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎರಡು ಪ್ರತ್ಯೇಕ ತಂಡಗಳ ವಿರುದ್ಧ 1000 ರನ್ ಗಳಿಸಿದ ಏಕೈಕ ಬ್ಯಾಟರ್ ಎನಿಸಿದರು.
ಡೇವಿಡ್ ವಾರ್ನರ್ ಅವರು ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 1000 ರನ್ ದಾಟಿದ್ದಾರೆ. ಅಲ್ಲದೆ, ಈ ದಿನ ವಿರಾಟ್ ಕೊಹ್ಲಿ ಟಿ20 ಬ್ಯಾಟಿಂಗ್‌ನಲ್ಲಿ 12,000 ರನ್ ಪೂರೈಸಿದರು. ಈ ಅದ್ಭುತ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು.
ಆರ್‌ಸಿಬಿ ಮಾಜಿ ನಾಯಕ 2024ರ ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಹೆಗ್ಗುರುತನ್ನು ತಲುಪುವಲ್ಲಿ ಯಶಸ್ವಿಯಾದರು. ಈ ಮೂಲಕ 353 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಕ್ರಿಸ್ ಗೇಲ್ ನಂತರ, ಈ ಸಾಧನೆ ಮಾಡಿದ ಎರಡನೇ ಅತಿ ವೇಗದ ಬ್ಯಾಟರ್ ಆದರು.
ಮತ್ತೊಂದೆಡೆ, ವಿರಾಟ್ ಕೊಹ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1000ಕ್ಕೂ ಅಧಿಕ ರನ್ ಗಳಿಸಿದ್ದರು. ಈ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ 37.88ರ ಸರಾಸರಿ ಮತ್ತು 125.48ರ ಸ್ಟ್ರೈಕ್ ರೇಟ್ ಹೊಂದಿದ್ದರು.
ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 1 ಸಿಕ್ಸರ್ ಸಮೇತ 21 ರನ್ ಗಳಿಸಿ ಮುಸ್ತಫಿಜುರ್ ರೆಹಮಾನ್ ಬೌಲಿಂಗ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು ರಚಿನ್ ರವೀಂದ್ರ ಅವರ ಅತ್ಯುತ್ತಮ ಕ್ಯಾಚ್‌ಗೆ ಔಟಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications