ಟಿ20 ವಿಶ್ವಕಪ್: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!

ಕಳೆದ ಹಲವಾರು ದಿನಗಳಿಂದ ಕ್ರಿಕೆಟ್ ಅಭಿಮಾನಿಗಳ ಚಿತ್ತವನ್ನು ತನ್ನತ್ತ ಸೆಳೆದಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅಕ್ಟೋಬರ್ 15ರ ಶುಕ್ರವಾರದಂದು ತೆರೆಬಿದ್ದಿದೆ. ಭಾರತ ನೆಲದಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದ ಯುಎಇಗೆ ಸ್ಥಳಾಂತರವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಾವುದೇ ಅಡಚಣೆಯಿಲ್ಲದೆ ಅಂತ್ಯಗೊಂಡಿದೆ.
ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಅಕ್ಟೋಬರ್ 15ರ ಶುಕ್ರವಾರದಂದು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೋಲುಣಿಸುವುದರ ಮೂಲಕ ತನ್ನ ನಾಲ್ಕನೇ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು.
ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದ ಬೆನ್ನಲ್ಲೇ ಅಕ್ಟೋಬರ್ 17ರ ಭಾನುವಾರದಿಂದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಇದೇ ಯುಎಇ ನೆಲದಲ್ಲಿ ಆರಂಭವಾಗುತ್ತಿದೆ. ಈ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಈ ಹಿಂದೆಯೇ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ನಂತರ ಐಪಿಎಲ್ ದ್ವಿತೀಯಾರ್ಧದಲ್ಲಿ ಶಾರ್ದೂಲ್ ಠಾಕೂರ್ ಉತ್ತಮ ಪ್ರದರ್ಶನ ನೀಡಿದ ಕಾರಣ ಅಕ್ಷರ್ ಪಟೇಲ್ ಬದಲಾಗಿ ಶಾರ್ದೂಲ್ ಠಾಕೂರ್ ಅವರಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ನೀಡಲಾಯಿತು. ಹೀಗೆ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಹೊರಗಿಟ್ಟು ಶಾರ್ದೂಲ್ ಠಾಕೂರ್ ಅವರಿಗೆ ಸ್ಥಾನ ನೀಡಿದ ರೀತಿ ಯುಜ್ವೇಂದ್ರ ಚಹಲ್ ಅವರಿಗೂ ಸ್ಥಾನ ಸಿಗಬಹುದು ಎಂದು ಭಾರತ ಕ್ರಿಕೆಟ್ ಅಭಿಮಾನಿಗಳು ಎಣಿಸಿದ್ದರು. ಹೌದು, ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಯುಜುವೇಂದ್ರ ಚಾಹಲ್ ಅವರಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಲಿದೆ ಎಂದು ಎಣಿಸಲಾಗಿತ್ತು. ಆದರೆ ಅಂತಿಮ ಗಳಿಗೆಯಲ್ಲಿಯೂ ಕೂಡ ಯುಜ್ವೇಂದ್ರ ಚಹಲ್ ಅವರಿಗೆ ತಂಡದಲ್ಲಿ ಸ್ಥಾನ ನೀಡದೇ ಇರುವುದು ಸದ್ಯ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಯ್ಕೆಗಾರರ ವಿರುದ್ಧ ಟೀಕೆಗಳೂ ಸಹ ವ್ಯಕ್ತವಾಗುತ್ತಿವೆ.
ಇನ್ನು ಈ ಕುರಿತಾಗಿ ಇದೀಗ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು ಯುಜ್ವೇಂದ್ರ ಚಾಹಲ್ ಅವರಿಗೆ ಮುಂಬರಲಿರುವ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಅವಕಾಶ ಸಿಗದೇ ಇರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಆ ಒಂದು ಕಾರಣದಿಂದಾಗಿ ಯುಜ್ವೇಂದ್ರ ಚಾಹಲ್ ಅವರಿಗೆ ಅವಕಾಶ ನೀಡಲಾಗಿಲ್ಲ
'ಯುಜ್ವೇಂದ್ರ ಚಹಲ್ ಅವರಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ನೀಡುವುದು ತೀರಾ ಕಷ್ಟದ ಕೆಲಸವಾಗಿತ್ತು. ಆದರೆ ನಾವು ಚಹಲ್ ಬದಲಾಗಿ ರಾಹುಲ್ ಚಹರ್ ಅವರನ್ನು ಆಯ್ಕೆಮಾಡಿದ್ದರ ಹಿಂದೆ ಒಂದು ದೃಢವಾದ ಕಾರಣವೂ ಸಹ ಇದೆ. ಕಳೆದ ಕೆಲ ಐಪಿಎಲ್ ಆವೃತ್ತಿಗಳಲ್ಲಿ ರಾಹುಲ್ ಚಹರ್ ಉತ್ತಮ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮತ್ತು ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರಾಹುಲ್ ಚಹರ್ ಅಮೋಘ ಪ್ರದರ್ಶನವನ್ನು ನೀಡಿದರು. ರಾಹುಲ್ ಚಹರ್ ಕಷ್ಟದ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಬೌಲರ್. ಹೀಗಾಗಿ ಆತನನ್ನು ಆಯ್ಕೆ ಮಾಡಲಾಯಿತು' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ರಾಹುಲ್ ಚಹರ್ ಸ್ಪಿನ್ ವೇಗವೇ ಆಯ್ಕೆಗೆ ಕಾರಣ
ಇನ್ನೂ ಮುಂದುವರಿದು ಮಾತನಾಡಿರುವ ವಿರಾಟ್ ಕೊಹ್ಲಿ ರಾಹುಲ್ ಚಹರ್ ಅವರ ಸ್ಪಿನ್ ವೇಗವೇ ಅವರ ಆಯ್ಕೆಗೆ ಕಾರಣ ಎಂದಿದ್ದಾರೆ. 'ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್‍ಗಳು ನಿಧಾನಗತಿಯಲ್ಲಿ ಬೀಳಿಲಿವೆ. ಹೀಗಾಗಿ ವೇಗದ ಎಸೆತಗಳನ್ನು ಹಾಕುವ ಸ್ಪಿನ್ ಬೌಲರ್‌ನ ಅಗತ್ಯತೆ ತಂಡಕ್ಕಿದೆ. ವೇಗದ ಸ್ಪಿನ್ ಬೌಲಿಂಗ್ ಮಾಡಿದರೆ ಮಾತ್ರ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಆಕ್ರಮಣ ಮಾಡಲು ಸಾಧ್ಯ. ಈ ಎಲ್ಲಾ ಸಾಮರ್ಥ್ಯಗಳು ರಾಹುಲ್ ಚಹರ್ ಬೌಲಿಂಗ್‌ನಲ್ಲಿ ಖಂಡಿತವಾಗಿಯೂ ಇವೆ' ಎಂದು ವಿರಾಟ್ ಕೊಹ್ಲಿ ರಾಹುಲ್ ಚಹರ್ ಆಯ್ಕೆ ಹಿಂದಿನ ನಿಖರವಾದ ಕಾರಣ ಬಿಚ್ಚಿಟ್ಟಿದ್ದಾರೆ.

ವಿಶ್ವಕಪ್ ತಂಡದಲ್ಲಿ ಎಲ್ಲರಿಗೂ ಸ್ಥಾನ ನೀಡಲಾಗುವುದಿಲ್ಲ
'ರಾಹುಲ್ ಚಹರ್ ಬಳಿ ಈ ರೀತಿಯ ಸಾಮರ್ಥ್ಯ ಇರುವುದರಿಂದಲೇ ಅವರನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾದ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶ್ವಕಪ್ ಟೂರ್ನಿಗಳಿಗೆ ಆಟಗಾರರನ್ನು ಆಯ್ಕೆ ಮಾಡುವುದು ತೀರಾ ಕಷ್ಟದ ಕೆಲಸ. ಎಲ್ಲಾ ರೀತಿಯಲ್ಲಿಯೂ ಸ್ಪಷ್ಟವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಹೀಗಿದ್ದಾಗ ಪ್ರತಿಯೊಬ್ಬರಿಗೂ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗುವುದಿಲ್ಲ' ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications