ಕಳೆದ ಕೆಲವು ವರ್ಷಗಳ ಹಿಂದೆ ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದ ಹೆಗ್ಗಳಿಕೆ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರದ್ದಾಗಿತ್ತು. ಆದರೆ ಈಗ ಇವರು ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ಪರ ಈಗ ನುರಿತ ಬ್ಯಾಟರ್ ರೀತಿ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವ ಬಿಟ್ಟಿದ್ದು ಏಕೇ ಎಂಬ ಪ್ರಶ್ನೆಗೆ ಉತ್ತಿರಿಸಿರಲಿಲ್ಲ. ಈಗ ಈ ಪ್ರಶ್ನೆಗೆ ಸ್ವತಃ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ. ಕೊಹ್ಲಿ ನಾಯಕತ್ವದಿಂದ ಕಳೆಗಿಳಿಯಲು ನಿರ್ಧರಿಸಿದ್ದರ ಹಿಂದಿನ ಅಸಲಿ ಕಾರಣ ಏನು ಎಂಬ ಬಗ್ಗೆ ಉತ್ತರ ನೀಡಿದ್ದಾರೆ.
ಟೀಮ್ ಇಂಡಿಯಾವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿರುವ ಹೆಗ್ಗಳಿಕೆ ಹೊಂದಿರುವ ವಿರಾಟ್, ಸುಮಾರು 10 ವರ್ಷಗಳ ಕಾಲ ಆರ್‌ಸಿಬಿ ತಂಡದ ಚುಕ್ಕಾಣಿ ಹಿಡಿದಿದ್ದರು. ಈ ಅವಧಿಯಲ್ಲಿ ಇವರ ಬ್ಯಾಟಿಂಗ್ ಹಾಗೂ ನಾಯಕತ್ವದ ಬಗ್ಗೆ ಸೂಕ್ಷ್ಮವಾಗಿ ಎಲ್ಲರೂ ಗಮನಿಸುತ್ತಿದ್ದರು. ಇನ್ನು ಜೀವನದಲ್ಲಿ ಸಂತೋಷವಾಗಿರಲು ಕೊಹ್ಲಿ ನಾಯಕತ್ವ ತೊರೆಯುವ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ದುಬೈನಲ್ಲಿ ನಡೆದಿದ್ದ 2021ರ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಈ ಬಳಿಕ ಆರ್‌ಸಿಬಿ ಪರವೂ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಲಿಲ್ಲ.

ಐಪಿಎಲ್ ವೇಳೆ ಆರ್‌ಸಿಬಿ ಬೋಲ್ಡ್ ಡೈರೀಸ್ ಪಾಡ್‌ಕ್ಯಾಸ್ಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿರಾಟ್ ನಾಯಕರಾಗಿ ಬ್ಯಾಟಿಂಗ್ ಮಾಡಲು ಹೋದಾಗಲೆಲ್ಲಾ ಅವರ ಮೇಲೆ ನಿರೀಕ್ಷೆಯ ಭಾರ ಇರುತ್ತಿತ್ತು ಎಂದು ತಿಳಿಸಿದ್ದಾರೆ. ಇವರ ಮೇಲೆ ಒತ್ತಡ ಇದ್ದಿದ್ದರಿಂದ ಅವರು ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲು ಆಗುತ್ತಿರಲಿಲ್ಲ.
ಇದರಿಂದ ಹೊರ ಬರಲು ತುಂಬ ಕಷ್ಟ ಪಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು 2022ರ ಸಮಯದಲ್ಲಿ ಕ್ರಿಕೆಟ್ ಅಂಗಳದಿಂದ ಸುಮಾರು ಒಂದು ತಿಂಗಳು ದೂರ ಉಳಿದಿದ್ದೇ. ಆ ಸಮಯದಲ್ಲಿ ಬ್ಯಾಟ್ ಮುಟ್ಟಿರಲಿಲ್ಲ ಎಂದು ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ರಾಷ್ಟ್ರೀಯ ಹಿರಿಯರ ತಂಡದ ಪರ ನಾಯಕತ್ವ ವಹಿಸಿಕೊಂಡಾಗ ಯಾವುದೇ ಐಸಿಸಿ ಟೂರ್ನಿಯನ್ನು ಗೆದ್ದಿಲ್ಲ. ಆದರೆ ಉತ್ತಮ ತಂಡವನ್ನು ಕಟ್ಟುವಲ್ಲಿ ವಿರಾಟ್ ಸಫಲರಾಗಿದ್ದಾರೆ. ಆರ್‌ಸಿಬಿ ಕಾರ್ಯಕ್ರಮದಲ್ಲಿ ವಿರಾಟ್, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಅವರ ಬಗ್ಗೆಯೂ ಮಾತನಾಡಿದ್ದಾರೆ. ನಾನು ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಬಗ್ಗೆ ಮಾಹಿ ಹಾಗೂ ಗ್ಯಾರಿ ಕರ್ಸ್ಟನ್ ವಿಶ್ವಾಸ ತುಂಬಿದರು. ಇದೇ ಸ್ಥಾನದಲ್ಲಿ ಅನೇಕ ಸ್ಟಾರ್ ಆಟಗಾರರು ಆಡುವುದನ್ನು ನೋಡಿದ್ದೇನೆ ಎಂದು ವಿರಾಟ್ ತಿಳಿದಿದ್ದಾರೆ.
ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈ ವೇಳೆ ವಿರಾಟ್ ತಮ್ಮ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಮನ ಗೆದ್ದಿದ್ದು ಮೂರನೇ ಬಾರಿಗೆ ಆರೆಂಜ್ ಕ್ಯಾಪ್ ಮೇಲೆ ಕಣ್ಣು ನೆಟ್ಟಿದ್ದಾರೆ.