ಲಾರ್ಡ್ಸ್‌ನಲ್ಲಿ ಮೈದಾನಕ್ಕೆ ಇಳಿಯುತ್ತಲೇ ದೊಡ್ಡ ದಾಖಲೆ ಬರೆಯಲಿದೆ ರೋಕಾ ಜೋಡಿ
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಸಿದ್ಧವಾಗಿವೆ. ಈ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದರಿಂದ ಮೂರನೇ ಪಂದ್ಯ ರೋಚಕತೆ ಹೆಚ್ಚಾಗಿಸಿದೆ. ಇನ್ನು ಈ ಪಂದ್ಯ ರೋಹಿತ್ ಶರ್ಮಾ ಅವರ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ರೋಹಿತ್ ಶರ್ಮಾ ಲಾರ್ಡ್ಸ್ ಮೈದಾನದಲ್ಲಿ ಮೂರನೇ ಪಂದ್ಯವನ್ನು ಆಡುವುದು ಖಚಿತ. ಇವರೊಂದಿಗೆ ವಿರಾಟ್ ಕೊಹ್ಲಿ ಸಹ ಕಣಕ್ಕೆ ಇಳಿಯಲಿದ್ದಾರೆ. ಈ ಇಬ್ಬರೂ ಲಾರ್ಡ್ಸ್‌ನಲ್ಲಿ ಅಂಗಳಕ್ಕೆ ಇಳಿಯುತ್ತಲೇ ದೊಡ್ಡ ದಾಖಲೆ ಬರೆಯಲಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ ಬಹು ವರ್ಷಗಳ ಕಾಲ ಒಟ್ಟಿಗೆ ಆಡುತ್ತಾ ಬಂದಿದ್ದಾರೆ. ಈ ಇಬ್ಬರೂ ಜೊತೆಗೂಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 399 ಪಂದ್ಯಗಳನ್ನು ಆಡಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯ, ಇವರಿಬ್ಬರೂ ಸೇರಿ ಆಡಲಿರುವ 400ನೇ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ.

ಲಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅಂಗಳಕ್ಕೆ ಇಳಿಯುತ್ತಲೇ ದೊಡ್ಡ ದಾಖಲೆ ಬರೆಯಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆ ಇವರದ್ದಾಗಲಿದೆ.
ಭಾರತದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಜೋಡಿ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, 399 ಪಂದ್ಯ
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, 391 ಪಂದ್ಯ
ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, 369 ಪಂದ್ಯ
ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, 367 ಪಂದ್ಯ
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, 341 ಪಂದ್ಯ
ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, 309 ಪಂದ್ಯ
ವಿಶ್ವದಲ್ಲೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಜೋಡಿ ಯಾವುದು?
ಒಟ್ಟಾರೆ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಜೋಡಿ ಎಂಬ ಹೆಗ್ಗಳಿಕೆ ಶ್ರೀಲಂಕಾದ ಕುಮಾರ್ ಸಂಗಾಕ್ಕರ್, ಮಹೇಲ್ ಜಯವರ್ಧನೆ ಅವರಿಗೆ ಸಲ್ಲುತ್ತದೆ. ಇವರು ಒಟ್ಟಾರೆಯಾಗಿ 550 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಶ್ರೀಲಂಕಾದವರೇ ಆದ ಮಹೇಲ್ ಜಯವರ್ಧನೆ ಹಾಗೂ ತಿಲಕ್‌ರತ್ನೆ ದಿಲ್ಶಾನ್ ಇದ್ದಾರೆ. ಈ ಇಬ್ಬರೂ ಜೊತೆಗೂಡಿ 426 ಪಂದ್ಯಗಳನ್ನು ಆಡಿದ್ದಾರೆ. ಇನ್ನು ಶ್ರೀಲಂಕಾದ ಮತ್ತೊಂದು ಜೋಡಿ ಕುಮಾರ್ ಸಂಗಾಕ್ಕರ್, ತಿಲಕ್‌ರತ್ನೆ ದಿಲ್ಶಾನ್ 418 ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

