ತನ್ನ ಮೂವರು ಫೇವರಿಟ್ ಕ್ರಿಕೆಟಿಗರ ಹೆಸರನ್ನು ತಿಳಿಸಿದ ರುತುರಾಜ್ ಗಾಯಕ್ವಾಡ್; ಇಲ್ಲ ಧೋನಿ!

2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದು ಆಯ್ಕೆಗಾರರ ಮನ ಗೆದ್ದು ಭಾರತ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ರುತುರಾಜ್ ಗಾಯಕ್ವಾಡ್ ಈಗಾಗಲೇ 9 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನು ಆಡಿದ್ದು, ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವಲ್ಲಿ ಇನ್ನೂ ಸಹ ಯಶಸ್ವಿಯಾಗಿಲ್ಲ. ಸದ್ಯ ಜಿಂಬಾಬ್ವೆ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ರುತುರಾಜ್ ಗಾಯಕ್ವಾಡ್ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿಲ್ಲ.
ಹೀಗೆ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾದಿರುವ ರುತುರಾಜ್ ಗಾಯಕ್ವಾಡ್ ಇದೇ ಸಂದರ್ಭದಲ್ಲಿ ಬಿಸಿಸಿಐ ನಡೆಸಿರುವ ಒಂದು ಕಿರು ಸಂದರ್ಶನದಲ್ಲಿ ಭಾಗವಹಿಸಿ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹೌದು, ಎಂ ಎಸ್ ಧೋನಿ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರಲ್ಲಿ ಯಾರನ್ನು ಮೊದಲು ಆಯ್ಕೆ ಮಾಡುತ್ತೀರ ಮತ್ತು ನೆಚ್ಚಿನ ಮೂವರು ಕ್ರಿಕೆಟರ್‌ಗಳು ಯಾರು ಎಂಬ ಪ್ರಶ್ನೆಗಳ ಕುರಿತಾಗಿ ಉತ್ತರಿಸಿರುವ ರುತುರಾಜ್ ಗಾಯಕ್ವಾಡ್ ಈ ಕೆಳಕಂಡಂತೆ ಮಾತನಾಡಿದ್ದಾರೆ.

ನೆಚ್ಚಿನ ಮೂವರು ಕ್ರಿಕೆಟಿಗರು
ಈ ಸಂದರ್ಶನದ ವೇಳೆ ನೆಚ್ಚಿನ ಮೂವರು ಕ್ರಿಕೆಟಿಗರು ಯಾರು ಎಂಬ ಪ್ರಶ್ನೆ ಎದುರಾದಾಗ ರುತುರಾಜ್ ಗಾಯಕ್ವಾಡ್ ಅನಿರೀಕ್ಷಿತ ಉತ್ತರವನ್ನು ನೀಡಿದ್ದಾರೆ. ಈ ಪ್ರಶ್ನೆ ಎದುರಾದಾಗ ರುತುರಾಜ್ ಗಾಯಕ್ವಾಡ್ ಖಡಾಖಂಡಿತವಾಗಿ ಎಂ ಎಸ್ ಧೋನಿ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂದು ಊಹಿಸಲಾಗಿತ್ತು. ಹೌದು, ಎಂಎಸ್ ಧೋನಿ ನಾಯಕತ್ವದಡಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿರುವ ರುತುರಾಜ್ ಗಾಯಕ್ವಾಡ್ ತಮ್ಮ ನೆಚ್ಚಿನ ಮೂವರ ಆಟಗಾರರು ಯಾರು ಎಂಬುದನ್ನು ತಿಳಿಸಿದ್ದು, ಈ ಪಟ್ಟಿಯಲ್ಲಿ ಧೋನಿ ಹೆಸರು ಇಲ್ಲದಿರುವುದು ಆಶ್ಷರ್ಯ ಮೂಡಿಸದೇ ಇರದು. ಇನ್ನು ರುತುರಾಜ್ ಗಾಯಕ್ವಾಡ್ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈ ಮೂವರು ತನ್ನ ನೆಚ್ಚಿನ ಕ್ರಿಕೆಟಿಗರು ಎಂಬುದನ್ನು ತಿಳಿಸಿದ್ದಾರೆ.

ಧೋನಿ ಜತೆ ಅಭ್ಯಾಸ ಅಥವಾ ಸಚಿನ್ ಜತೆ ಊಟ
ಇನ್ನು ಇದೇ ಸಂದರ್ಶನದಲ್ಲಿ ಎದುರಿಸಿದ ರುತುರಾಜ್ ಗಾಯಕ್ವಾಡ್ ಎಂ ಎಸ್ ಧೋನಿ ಜತೆ ಅಭ್ಯಾಸ ಮಾಡಲು ಇಚ್ಚಿಸುತ್ತೀರಾ ಅಥವಾ ಸಚಿನ್ ತೆಂಡೂಲ್ಕರ್ ಜತೆ ರಾತ್ರಿ ಊಟ ಮಾಡುತ್ತೀರ ಎಂಬ ವಿಶೇಷ ಪ್ರಶ್ನೆಗೆ ಉತ್ತರಿಸಿದ ರುತುರಾಜ್ ಗಾಯಕ್ವಾಡ್ ಮೊದಲು ಎಂ ಎಸ್ ಧೋನಿ ಜತೆ ಅಭ್ಯಾಸ ನಡೆಸಿ ನಂತರ ಸಚಿನ್ ತೆಂಡೂಲ್ಕರ್ ಜತೆ ಊಟ ಮಾಡುತ್ತೇನೆ ಎಂದಿದ್ದಾರೆ. ಈ ಮೂಲಕ ಈ ಪ್ರಶ್ನೆಗೆ ರುತುರಾಜ್ ಗಾಯಕ್ವಾಡ್ ಜಾಣ್ಮೆಯಿಂದ ಉತ್ತರಿಸಿದ್ದಾರೆ.

ಕ್ರಿಕೆಟಿಗನಾಗದೇ ಇದ್ದಿದ್ದರೆ ಟೆನಿಸ್ ಆಟಗಾರನಾಗಿರುತ್ತಿದ್ದೆ
ಇನ್ನೂ ಮುಂದುವರೆದು ಮಾತನಾಡಿರುವ ರುತುರಾಜ್ ಗಾಯಕ್ವಾಡ್ ತಾವು ಕ್ರಿಕೆಟಿಗನಾಗದೇ ಇದ್ದಿದ್ದರೆ ಟೆನಿಸ್ ಪ್ಲೇಯರ್ ಆಗಿರುತ್ತಿದ್ದೆ ಎಂದು ಹೇಳಿದ್ದಾರೆ. ಟೆನಿಸ್ ದಿಗ್ಗಜರಾದ ನೊವಾಕ್ ಜೋಕೊವಿಕ್ ಹಾಗೂ ರಾಫೆಲ್ ನಡಾಲ್ ಈ ಇಬ್ಬರಲ್ಲಿ ಯಾರು ಅಚ್ಚು ಮೆಚ್ಚು ಎಂಬ ಪ್ರಶ್ನೆಗೆ ರುತುರಾಜ್ ಗಾಯಕ್ವಾಡ್ ಉತ್ತರಿಸಿದ್ದು, ಈ ಇಬ್ಬರ ಹೆಸರನ್ನೂ ಸಹ ಕೈಬಿಟ್ಟು ರೋಜರ್ ಫೆಡರರ್ ತನ್ನ ನೆಚ್ಚಿನ ಟೆನಿಸ್ ಪ್ಲೇಯರ್ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications