ಕನ್ನಡ ಬರುತ್ತಾ ಎಂದು ಕೇಳಿದ ಅಭಿಮಾನಿಗೆ ವಿರಾಟ್ ಕೊಹ್ಲಿ ಉತ್ತರ; ಕನ್ನಡಿಗರು ಫಿದಾ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಐಪಿಎಲ್ ಮುಂದೂಡಲ್ಪಟ್ಟ ಬೆನ್ನಲ್ಲೇ ಎಲ್ಲರ ಚಿತ್ತ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಮೇಲಿದೆ.
ಧೋನಿಗೆ 15 ಕೋಟಿ ಕೊಟ್ಟು ತಂಡದಲ್ಲಿ ಉಳಿಸಿಕೊಳ್ಳುವುದು ವ್ಯರ್ಥ ಎಂದ ಮಾಜಿ ಕ್ರಿಕೆಟಿಗ!
ಜೂನ್ 18ರಿಂದ 22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಟಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಜರುಗಲಿದೆ. ಈ ನಡುವೆ ಶನಿವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರವನ್ನು ಏರ್ಪಡಿಸಿದ್ದರು. ಕೊಹ್ಲಿ ತಮ್ಮ ಅಭಿಮಾನಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.

ಹೀಗೆ ಕೊಹ್ಲಿ ಅಭಿಮಾನಿಯೊಬ್ಬರು 'ನಿಮಗೆ ಕನ್ನಡ ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಬರುತ್ತಾ?' ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅಭಿಮಾನಿ ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ 'ಸ್ವಲ್ಪ ಸ್ವಲ್ಪ ಬರುತ್ತೆ ಸರ್, ಆದರೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ' ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ 'ಸ್ವಲ್ಪ ಸ್ವಲ್ಪ' ಎಂದು ಕನ್ನಡ ಬಳಸಿದ್ದನ್ನು ಕಂಡ ಕನ್ನಡಿಗರು ಬಹಳ ಸಂತೋಷಕ್ಕೊಳಗಾಗಿದ್ದು ವಿರಾಟ್ ಕೊಹ್ಲಿಯ ಈ ಉತ್ತರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲಿಯೂ ಕೊಹ್ಲಿಯ ಈ ಉತ್ತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗಂತೂ ತುಸು ಹೆಚ್ಚೇ ಸಂತೋಷವನ್ನು ನೀಡಿದೆ.

'ಈ ಸಲ ಕಪ್ ನಮ್ದೆ' ಎಂದಿದ್ರು ಕೊಹ್ಲಿ
ಕೊಹ್ಲಿಗೆ ಬೆಂಗಳೂರು ಮತ್ತು ಕನ್ನಡಿಗರೆಂದರೆ ಹಿಂದಿನಿಂದಲೂ ಸಹ ಅಪಾರವಾದ ಪ್ರೀತಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಅತ್ಯದ್ಭುತ ಎಂದು ಯಾವಾಗಲೂ ಕೊಂಡಾಡುವ ವಿರಾಟ್ ಕೊಹ್ಲಿ ಈ ಹಿಂದೆ ಮೈದಾನದಲ್ಲಿ ಈ ಸಲ ಕಪ್ ನಮ್ದೆ ಎಂದು ಕನ್ನಡದಲ್ಲಿಯೇ ಹೇಳುವುದರ ಮೂಲಕ ಕನ್ನಡಿಗರ ಮನವನ್ನು ಗೆದ್ದಿದ್ದರು.

ಹೊಸ ಟೆಸ್ಟ್ ಜೆರ್ಸಿ ತೋರಿಸಿ ಎಂದ ಅಭಿಮಾನಿ
ವಿರಾಟ್ ಕೊಹ್ಲಿ ಶನಿವಾರ ಇನ್ಸ್ಟಾಗ್ರಾಮ್ ಪ್ರಶ್ನೋತ್ತರ ನಡೆಸುತ್ತಿರುವಾಗಲೇ ಅಭಿಮಾನಿಯೊಬ್ಬ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ಧರಿಸಲಿರುವ ವಿಶೇಷ ಜೆರ್ಸಿಯನ್ನು ತೋರಿಸಿ ಎಂದು ಕೇಳಿದ್ದ. ಈ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ ಕ್ಷಮಿಸಿ ಸದ್ಯಕ್ಕೆ ಆಗುವುದಿಲ್ಲ ಆದರೆ ಸ್ವಲ್ಪ ಸಮಯದ ಬಳಿಕ ಖಂಡಿತವಾಗಿಯೂ ಅದನ್ನು ನಿಮ್ಮ ಮುಂದೆ ಇಡುತ್ತೇನೆ ಎಂದು ಹೇಳಿದರು.

ಆರೋಗ್ಯ ಮಾಹಿತಿ ಹಂಚಿಕೊಂಡ ಕೊಹ್ಲಿ
ಇದೇ ವೇಳೆ ವಿರಾಟ್ ಕೊಹ್ಲಿ ತಮ್ಮ ಆರೋಗ್ಯದ ಕುರಿತು ಕೂಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬ ಕೊರೊನಾ ಲಸಿಕೆ ಪಡೆದ ನಂತರದ ಅನುಭವವನ್ನು ಪ್ರಶ್ನೆಯ ಮೂಲಕ ಕೇಳಿದ್ದ. ಇದಕ್ಕೆ ಉತ್ತರಿಸಿದ ವಿರಾಟ್ ಕೊಹ್ಲಿ ತುಸು ಮೈಕೈ ನೋವು ಹಾಗೂ ಸ್ವಲ್ಪ ಮಟ್ಟದ ಜ್ವರ ಬಿಟ್ಟರೆ ಮತ್ತೇನೂ ಇಲ್ಲ ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications