ಧೋನಿಗೆ 15 ಕೋಟಿ ಕೊಟ್ಟು ತಂಡದಲ್ಲಿ ಉಳಿಸಿಕೊಳ್ಳುವುದು ವ್ಯರ್ಥ ಎಂದ ಮಾಜಿ ಕ್ರಿಕೆಟಿಗ!

CSK ಧೋನಿಗೆ 15 ಕೋಟಿ ಕೊಟ್ಟು ಉಳಿಸಿಕೊಂಡಿರೋದು ಯಾಕೆ ಎಂದ ಆಕಾಶ್ ಚೋಪ್ರಾ | Oneindia Kannada

ಪ್ರಸ್ತುತ ಐಪಿಎಲ್ ಟೂರ್ನಿಯು ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದು ಸೆಪ್ಟೆಂಬರ್ ಮೂರನೇ ವಾರದಿಂದ ಮತ್ತೆ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಈ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಇದರ ಜೊತೆಗೆ ಮುಂಬರುವ ಐಪಿಎಲ್ ಟೂರ್ನಿ ಮತ್ತು ಮೆಗಾ ಹರಾಜಿನ ಕುರಿತು ಸಹ ಚರ್ಚೆಗಳು ಆರಂಭವಾಗಿವೆ.

ರೋಹಿತ್, ರಾಹುಲ್ ಅಲ್ಲ ಈತನೇ ಕೊಹ್ಲಿ ನಂತರ ಭಾರತದ ನಾಯಕ ಎಂದ ಸಲ್ಮಾನ್ ಬಟ್

ಹೌದು 2022ರ ಐಪಿಎಲ್ ಟೂರ್ನಿಗೆ ಎರಡು ಹೊಸ ತಂಡಗಳ ಸೇರ್ಪಡೆಯಾಗಲಿದೆ ಎಂಬ ಸುದ್ದಿ ಇದ್ದು ಮೆಗಾ ಹರಾಜು ಕೂಡ ನಡೆಯಲಿದೆ. ಹೀಗಾಗಿ ಎಲ್ಲಾ ತಂಡಗಳ ಮಾಲೀಕರು ಯಾವ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದ್ದಾರೆ ಎನ್ನುವುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಇದೀಗ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಪ್ರತಿಕ್ರಿಯಿಸಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾವ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎನ್ನುವುದರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಎಂಎಸ್ ಧೋನಿ ಹೆಸರನ್ನು ತೆಗೆದುಕೊಂಡಿದ್ದಾರೆ.

ಇಂಗ್ಲೆಂಡ್, ಪಾಕಿಸ್ತಾನ ಅಲ್ಲ ಈ ತಂಡ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಲಿದೆ ಎಂದ ವಾಸಿಮ್ ಅಕ್ರಮ್

ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಎಂ ಎಸ್ ಧೋನಿ ಕುರಿತು ಮಾತನಾಡಿರುವ ಆಕಾಶ್ ಚೋಪ್ರಾ ಈ ಕೆಳಕಂಡಂತೆ ಹೇಳಿದ್ದಾರೆ

ಧೋನಿಗೆ 15 ಕೋಟಿ ನೀಡುವುದು ವ್ಯರ್ಥ

ಧೋನಿಗೆ 15 ಕೋಟಿ ನೀಡುವುದು ವ್ಯರ್ಥ

ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂಎಸ್ ಧೋನಿಯನ್ನು ಉಳಿಸಿಕೊಳ್ಳುವುದಾದರೆ ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ನೀಡಬೇಕು. ಆದರೆ ಧೋನಿ 15 ಕೋಟಿ ರೂಪಾಯಿಗಳಿಗೆ ತಕ್ಕಂಥ ಪ್ರದರ್ಶನವನ್ನೇನೂ ನೀಡುವುದಿಲ್ಲ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಯಾಕೆ ಉಳಿಸಿಕೊಳ್ಳುತ್ತೀರಾ ಎಂದು ಎಂಎಸ್ ಧೋನಿಯೇ ಪ್ರಶ್ನಿಸಬಹುದು

ಯಾಕೆ ಉಳಿಸಿಕೊಳ್ಳುತ್ತೀರಾ ಎಂದು ಎಂಎಸ್ ಧೋನಿಯೇ ಪ್ರಶ್ನಿಸಬಹುದು

ಇನ್ನೂ ಮುಂದುವರೆದು ಮಾತನಾಡಿರುವ ಆಕಾಶ್ ಚೋಪ್ರಾ ಸ್ವತಃ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರಿಗೆ ತನ್ನನ್ನು ಯಾಕೆ ಉಳಿಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಹಾಕಬಹುದು ಎಂದಿದ್ದಾರೆ. ಹೇಗಿದ್ದರೂ ಎಂಎಸ್ ಧೋನಿ 3 ವರ್ಷಗಳಿಗಿಂತ ಹೆಚ್ಚು ಕಾಲ ತಂಡದಲ್ಲಿ ಉಳಿಯುವುದಿಲ್ಲ ಹೀಗಾಗಿ ತನ್ನನ್ನು ಯಾಕೆ ಉಳಿಸಿಕೊಳ್ಳುತ್ತಿದ್ದೀರಿ ಎಂದು ಸ್ವತಃ ಧೋನಿ ಪ್ರಶ್ನಿಸಬಹುದು ಎಂದಿದ್ದಾರೆ.

15 ಕೋಟಿ ಪಡೆದುಕೊಳ್ಳುವಂತಹ ಆಟಗಾರ ಚೆನ್ನೈ ತಂಡದಲ್ಲಿ ಯಾರೂ ಇಲ್ಲ

15 ಕೋಟಿ ಪಡೆದುಕೊಳ್ಳುವಂತಹ ಆಟಗಾರ ಚೆನ್ನೈ ತಂಡದಲ್ಲಿ ಯಾರೂ ಇಲ್ಲ

ಒಂದುವೇಳೆ ಯಾವ ಆಟಗಾರನನ್ನು ಉಳಿಸಿಕೊಳ್ಳುವಂತಿಲ್ಲ, ಎಲ್ಲಾ ತಂಡಗಳು ಸಹ ಎಲ್ಲಾ ಆಟಗಾರರನ್ನು ಹರಾಜಿಗೆ ಬಿಡಬೇಕು ಎಂಬ ನಿಯಮವನ್ನು ಜಾರಿಗೆ ತಂದರೂ ಸಹ ಚೆನ್ನೈ ಸೂಪರ್ ಕಿಂಗ್ಸ್ ತಲೆಕೆಡಿಸಿಕೊಳ್ಳುವುದಿಲ್ಲ, ಏಕೆಂದರೆ 15 ಕೋಟಿ ಕೊಟ್ಟು ಉಳಿಸಿಕೊಳ್ಳುವಂತಹ ಆಟಗಾರರು ಚೆನ್ನೈ ತಂಡದಲ್ಲಿ ಇಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, May 28, 2021, 14:49 [IST]
Other articles published on May 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X