Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಸುರೇಶ್ ಬಾತ್ರಾ ಅಚಾನಕ್ ಸಾವು!

Virat Kohli’s childhood coach Suresh Batra passes away
Virat Kohli ಕ್ರಿಕೆಟ್ ಗುರು ಸುರೇಶ್ ಬಾತ್ರ ಇನ್ನಿಲ್ಲ | Oneindia Kannada

ನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ಸುರೇಶ್ ಬಾತ್ರಾ ಅವರು ಅಚಾನಕ್ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೇ 20ರ ಗುರುವಾರ ಬೆಳಗ್ಗೆ ಸಾವನ್ನಪ್ಪಿರುವ ಸುರೇಶ್‌ಗೆ 53 ವರ್ಷ ವಯಸ್ಸಾಗಿತ್ತು. ಬಾತ್ರಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ.

ಪಶ್ಚಿಮ ದೆಹಲಿ ಕ್ರಿಕೆಟ್ ಅಕಾಡೆಮಿಯಲ್ಲಿ ವಿರಾಟ್ ಕೊಹ್ಲಿ ಮೊದ ಮೊದಲು ಕ್ರಿಕೆಟ್ ಅಭ್ಯಾಸ ಮಾಡುವಾಗ ಮುಖ್ಯ ಕೋಚ್ ಆಗಿದ್ದ ರಾಜ್‌ ಕುಮಾರ್ ಶರ್ಮಾಗೆ ಸಹಾಯಕ ಕೋಚ್ ಆಗಿ ಸುರೇಶ್ ಬಾತ್ರಾ ಇದ್ದರು. ಚೆನ್ನಾಗೇ ಇದ್ದ ಬಾತ್ರಾ, ಗುರುವಾರ ಬೆಳಗ್ಗಿನ ಪ್ರಾರ್ಥನೆ ಮುಗಿಸಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪತ್ರಕರ್ತ ವಿಜಯ್ ಲೋಕಪಲ್ಲಿ ಮಾಹಿತಿ ನೀಡಿದ್ದಾರೆ.

ಕೊಹ್ಲಿ ವೃತ್ತಿ ಬದುಕಿಗೆ ರೂಪ ನೀಡಿದವರಲ್ಲಿ ಬಾತ್ರಾ ಕೊಡುಗೆಯೂ ಇದೆ. ಬಾತ್ರಾ ಮತ್ತು ರಾಜ್‌ ಕುಮಾರ್ ಇಬ್ಬರೂ ಕೊಹ್ಲಿಗೆ ಪರಿಶ್ರಮದೊಂದಿಗೆ ಗುರಿ ತಲುಪುವುದನ್ನು ಕಲಿಸಿಕೊಟ್ಟಿದ್ದರು. 31ರ ಹರೆಯದ ಕೊಹ್ಲಿ ಕೂಡ ಆಗಾಗ ತನ್ನ ಸಾಧನೆಯ ಹಿಂದೆ ಬಾಲ್ಯದ ಕೋಚ್‌ಗಳ ಶ್ರಮ ಇದೆ ಎಂದು ಹೇಳಿಕೊಂಡಿದ್ದರು.

'ವಿರಾಟ್ ಕೊಹ್ಲಿಗೆ ಬಾಲ್ಯದಲ್ಲಿ ಕೋಚಿಂಗ್ ನೀಡಿದ್ದ ಸುರೇಶ್ ಬಾತ್ರಾ (ಗೆರೆಯ ಟಿ ಶರ್ಟ್ ಬಟ್ಟೆ ಧರಿಸಿದವರು) ಗುರುವಾರ ಸಾವನ್ನಪ್ಪಿದ್ದಾರೆ. ಬೆಳಗಿನ ಪೂಜೆ ಮುಗಿಸಿದ ಬಳಿಕ ಬಾತ್ರಾ ಕುಸಿದು ಬಿದ್ದಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು' ಎಂದು ವಿಜಯ್ ಲೋಕಪಲ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Saturday, May 22, 2021, 13:47 [IST]
Other articles published on May 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+