Virat Kohli: ವಿರಾಟ್ ಕೊಹ್ಲಿಯ ಹಿಂದಿರುವ ಆ ದೈವಿ ಶಕ್ತಿ ಯಾವುದು?
ಟೀಮ್ ಇಂಡಿಯಾದ ಅಭಿಮಾನಿಗಳ 466 ದಿನಗಳ ಕಾಯುವಿಕೆಗೆ ಅಂತೂ ದುಬೈನಲ್ಲಿ ಪ್ರತಿಫಲ ಸಿಕ್ಕಿದೆ. ಕಂಡ ಕಂಡ ದೇವರಿಗೆಲ್ಲಾ ಹರಿಕೆ ಹೊತ್ತ ಪರಿಣಾಮ, ಮಾರ್ಡನ್ ಡೇ ಲೆಜೆಂಡ್ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಲಯಕ್ಕೆ ಮರಳಿದ್ದಾರೆ. ಇವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ಅಬ್ಬರಿಸಿದರು. ಈ ಮೂಲಕ ಫಾರ್ಮ್ ಇಲ್ಲದೇ ಪರದಾಡುತ್ತಿದ್ದ ವಿರಾಟ್, ಲಯ ಎಂಬುವ ಮಾಯಾ ಜಿಂಕೆಯನ್ನು ಕಟ್ಟಿ ಹಾಕಿದ್ದಾರೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಬೆನ್ನ ಹಿಂದೆ ಆ ಒಂದು ಶಕ್ತಿ ಇದೆ.
ವಿರಾಟ್ ಕೊಹ್ಲಿ ಅವರು ಅಪ್ಪಟ ದೈವ ಭಕ್ತ. ಇವರು ತಮ್ಮ ಮನಸ್ಸಿನ ಶಾಂತಿಗಾಗಿ ಆಗಾಗ ಅವರ ನೆಚ್ಚಿನ ದೇವರ ಮೊರೆ ಹೋಗುತ್ತಾರೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿರಾಟ್ ಕಷ್ಟ ಎಂದು ದೇವರ ಬಳಿ ಹೋದ್ರೆ ಅಲ್ಲಿ ಅವರಿಗೆ ವರ ಫಿಕ್ಸ್ ಎಂಬಂತೆ ಆಗಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ.

ವಿರಾಟ್ ಹಿಂದಿದೆ ದೈವಿ ಶಕ್ತಿ
ವಿರಾಟ್ ದೇವರ ದರ್ಶನ ಮಾಡಿ ಬಂದ ಮೇಲೆ ದೊಡ್ಡ ಇನಿಂಗ್ಸ್ ಫಿಕ್ಸ್ ಎನ್ನುಂವತೆ ಆಗಿದೆ. ಇದಕ್ಕೆ ಪೂರಕ ಎಂಬಂತೆ ವಿರಾಟ್ ರೂಪದರ್ಶನ ನೀಡ್ತಾ ಇದ್ದಾರೆ. 2022ರಲ್ಲಿ ನಡೆದಿದ್ದ ಟಿ20 ಏಷ್ಯಾ ಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ವಿರಾಟ್ ಶತಕ ಬಾರಿಸಿದ್ದರು. ಈ ಪ್ರವಾಸದ ಮುನ್ನ ಇವರು ತಮ್ಮ ಇಷ್ಟದ ದೇವರ ದರ್ಶನ ಮಾಡಿದ್ದರು. ಇನ್ನು ವಿರಾಟ್ ಕೊಹ್ಲಿT20 ವಿಶ್ವಕಪ್ ನಂತರ ನವೆಂಬರ್ 2022 ರಲ್ಲಿ ಉತ್ತರಾಖಂಡ್‌ನ ಕುಮಾನ್‌ನಲ್ಲಿರುವ ಕೈಂಚಿ ಧಾಮ್ ಹೋಗಿದ್ದರು. ಇಲ್ಲಿ ಅವರು ಬಾಬಾ ನೀಮ್ ಕರೌಲಿ ಮಹಾರಾಜರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಕೈ ಗೊಂಡಿದ್ದ ಬಾಂಗ್ಲಾದೇಶದ ಪ್ರವಾಸದಲ್ಲಿ ವಿರಾಟ್ ಏಕದಿನ ಕ್ರಿಕೆಟ್ನಲ್ಲಿ ಶತಕ ಬಾರಿಸಿದ್ದರು.
ದೇವರ ದರ್ಶನ ಪಡೆದಾಗಲೆಲ್ಲಾ ಯಶಸ್ಸು
ಈ ಪಂದ್ಯಗಳ ಬಳಿಕ 2022ರಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳಿಗೂ ಮುನ್ನ ವಿರಾಟ್ ಶ್ರೀಕೃಷ್ಣನ ನಗರವಾದ ವೃಂದಾವನಕ್ಕೆ ತೆರಳಿ, ಬಾಬಾ ನೀಮ್ ಕರೌಲಿಯ ಸಮಾಧಿಯ ದರ್ಶನ ಪಡೆದಿದ್ದರು. ಇದಾದ ಬಳಿಕ ತವರಿನಲ್ಲಿ ಶತಕ ಬಾರಿಸಿದ್ದರು. ಇನ್ನು ಆಸ್ಟ್ರೇಲಿಯಾ ಭಾರತ ಪ್ರವಾಸ ಬೆಳೆಸುವುದಕ್ಕು ಮುನ್ನ ವಿರಾಟ್ 2022ರಲ್ಲಿ ರಿಷಿಕೇಶ ಭೇಟಿ ನೀಡಿದ್ದರು. ಇಬ್ಬರೂ ಅಲ್ಲಿನ ದಯಾನಂದ ಗಿರಿ ಆಶ್ರಮದಲ್ಲಿರುವ ಅವರ ಸಮಾಧಿಗೆ ಭೇಟಿ ನೀಡಿದ್ದರು.
2023ರಲ್ಲಿ ವಿರಾಟ್ ಆಸ್ಟ್ರೇಲಿಯಾ ವಿರುದ್ಧವೂ ರನ್ ಬರ ಅನುಭವಿಸಿದ್ದರು. ಆಗ ಅವರು ಉಜ್ಜೈಯಿನ ಮಹಾಕಾಲನ ಸನ್ನಿಧಿಯಲ್ಲಿ ಬ್ರಾಹ್ಮಿ ಮೂರ್ಹತದಲ್ಲಿ ಪೂಜೆಯಲ್ಲಿ ಭಾಗವಹಿಸಿದರು. ಅದಾದ ಬಳಿಕ ಮೈದಾನಕ್ಕೆ ಇಳಿಯುತ್ತಿದ್ದಂತೆ ಆರ್ಭಟ ಜೋರಾಗಿತ್ತು.
ಇನ್ನು ವಿರಾಟ್ ಕಳೆದ ಒಂದು ತಿಂಗಳ ಹಿಂದೆ ವೃಂದಾವನಕ್ಕೆ ಭೇಟಿ ನೀಡಿದ್ದರು. ಆಗ ಪ್ರೇಮಾನಂದ ಜಿ ಮಹರಾಜಾರನ್ನು ಭೇಟಿ ಆಗಿದ್ದರು. ಇವರು ಮಹರಾಜಾರನ್ನು ಭೇಟಿಯಾದ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದವು. ಇವರ ದರ್ಶನ ಪಡೆದು, ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿದ್ದಂತೆ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications