Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನಿಸ್ತಾನ ಆಟಗಾರರ ಫಿಟ್‌ನೆಸ್‌ಗೆ ಪ್ರೇರಣೆ ಭಾರತದ ಈ ಆಟಗಾರ!

Virat Kohlis fitness is Inspiration for Afghanistan cricket team

ಬೆಂಗಳೂರು, ಸೆಪ್ಟೆಂಬರ್ 22: ಪ್ರಸ್ತುತ ಏಷ್ಯಾಕಪ್‌ ಸರಣಿಯಲ್ಲಿ ಭಾರತ ಏಕಮೇವಾಧಿಪತ್ಯ ಮೆರೆಯುತ್ತಿದೆ. ಆದರೆ ಅದರ ಜೊತೆಗೆ ಅಫ್ಘಾನಿಸ್ತಾನ ಸಹ ತನ್ನ ಅದ್ಭುತ ಆಟದಿಂದ ಗಮನ ಸೆಳೆಯುತ್ತಿದೆ.

ಹೌದು, ಅಫ್ಘಾನಿಸ್ತಾನವು ಬಾಂಗ್ಲಾ, ಶ್ರೀಲಂಕಾ ತಂಡಗಳನ್ನು ಸೋಲಿಸಿ ಭಾರಿ ವೇಗದಲ್ಲಿ ಮುನ್ನುಗ್ಗುತ್ತಿದೆ. ಅಫ್ಘಾನ್‌ ಆಟಗಾರರ ಫಿಟ್‌ನೆಸ್‌ ಲೆವೆಲ್‌ ಸಹ ಅದ್ಭುತವಾಗಿದೆ. ಆದರೆ ಆ ಪ್ರತಿಭಾನ್ವಿತರ ಪಡೆಯ ಫಿಟ್‌ನೆಸ್‌ಗೆ ಸ್ಪೂರ್ತಿ ನಮ್ಮ ಭಾರತೀಯ ಕ್ರಿಕೆಟಿಗ ಎಂದರೆ ನಂಬಲೇ ಬೇಕು.

ಅಫ್ಘಾನ್ ಆಟಗಾರರ ಪಿಟ್‌ನೆಸ್‌ಗೆ ಭಾರತದ ವಿರಾಟ್ ಕೊಹ್ಲಿಯನ್ನು ಸ್ಪೂರ್ತಿಯಾಗಿ ಇರಿಸಿಕೊಂಡಿದ್ದಾರೆ. ಕೊಹ್ಲಿಯನ್ನು ಆದರ್ಶವಾಗಿಟ್ಟುಕೊಂಡು ಅಫ್ಘಾನ್ ಆಟಗಾರರೂ ಸಹ ಫಿಟ್‌ನೆಸ್‌ ಕಡೆ ಗಮನಕೊಟ್ಟಿದ್ದಾರಂತೆ.

Virat Kohlis fitness is Inspiration for Afghanistan cricket team

ಕಳೆದ ಆರು ತಿಂಗಳಿಂದಲೂ ಅಫ್ಘಾನ್ ತಂಡದ ಫಿಸಿಯೋ ಮತ್ತು ಕಂಡಿಶನಿಂಗ್ ಕೋಚ್‌ಗಳು ಸಹ ಕೊಹ್ಲಿ ಅನುಸರಿಸುವ ಫಿಟ್‌ನೆಸ್‌ ತಂತ್ರಗಳನ್ನೇ ಆಟಗಾರರ ಮೇಲೂ ಪ್ರಯೋಗಿಸಿದ್ದಾರೆ ಹಾಗಾಗಿ ಎಲ್ಲ ಆಟಗಾರ ಫಿಟ್‌ನೆಸ್‌ನಲ್ಲೂ ಸಾಕಷ್ಟು ಪ್ರಗತಿ ಕಂಡಿದೆ ಎನ್ನುತ್ತಾರೆ ಅಫ್ಘಾನ್ ತಂಡದ ವ್ಯವಸ್ಥಾಪಕ.

ಕಳೆದ ಆರು ತಿಂಗಳಿನಿಂದ ಅಫ್ಘಾನಿಸ್ತಾನ ತಂಡವು ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಜಿಂಬಾಬ್ವಯನ್ನು 4-1 ರಿಂದ ಸೋಲಿಸಿತು. ಬಾಂಗ್ಲಾ ವಿರುದ್ಧ ಸರಣಿ ಗೆದ್ದಿತು. ವಿಶ್ವಕಪ್ ಕ್ವಾಲಿಫೈಯರ್ ಸರಣಿಯಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿತು.

ಏಷ್ಯಾಕಪ್‌ನಲ್ಲಿ ಈ ವರೆಗೆ ಪ್ರಬಲ ತಂಡಗಳಾದ ಶ್ರೀಲಂಕಾ ಮತ್ತು ಬಾಂಗ್ಲಾವನ್ನು ಸೋಲಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ಹೋರಾಟ ನೀಡಿ ಸೋಲು ಕಂಡಿದೆ. ಅಫ್ಘಾನಿಸ್ತಾನವು ಭಾರತದ ವಿರುದ್ಧ ಸೆಪ್ಟೆಂಬರ್ 25 ರಂದು ಆಡಲಿದೆ.

Story first published: Saturday, September 22, 2018, 17:11 [IST]
Other articles published on Sep 22, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+