Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy 2025: ಮೈದಾನಕ್ಕೆ ಇಳಿಯುತ್ತಿದ್ದಂತೆ ದಾಖಲೆ ಬರೆಯಲಿರುವ ವಿರಾಟ್ ಕೊಹ್ಲಿ

ಚಾಂಪಿಯನ್ಸ್ ಟ್ರೋಫಿ ಲೀಗ್ ಹಂತದ ಪಂದ್ಯಗಳಿಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 19 ರಿಂದ ಆರಂಭವಾಗಲಿರುವ ಟೂರ್ನಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಫೆಬ್ರವರಿ 20 ರಿಂದ ಆರಂಭಿಸಲಿದೆ. ಈ ಟೂರ್ನಿಯಲ್ಲಿ ವಿಶ್ವ ಮಟ್ಟದ ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿಯಲಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಪರ ಸೂಪರ್ ಸ್ಟಾರ್ ಆಟಗಾರರು ಸಹ ಕಣಕ್ಕೆ ಇಳಿಯಲಿದ್ದಾರೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಟೀಮ್ ಇಂಡಿಯಾ ಈ ಟೂರ್ನಿಗೆ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಸ್ಟಾರ್ ಆಟಗಾರರು ಸಹ ಸ್ಥಾನ ಪಡೆದಿದ್ದಾರೆ. ಲಯಕ್ಕಾಗಿ ಪರದಾಡುತ್ತಿದ್ದ ಆಟಗಾರರು ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದೇ ವೇಳೆ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮೊದಲ ಪಂದ್ಯದಲ್ಲಿ ಆಡಲು ಮೈದಾನಕ್ಕೆ ಇಳಿಯುತ್ತಿದ್ದಂತೆ ದಾಖಲೆ ಬರೆಯಲಿದ್ದಾರೆ.

Virat Kohli Set to Break Major Record in Champions Trophy 2025 Opener Against Bangladesh

ಈಗಾಗಲೇ ವಿರಾಟ್‌ ಕೊಹ್ಲಿ ಟೀಮ್ ಇಂಡಿಯಾದ ಪರ ಮೂರು ಚಾಂಪಿಯನ್ಸ್‌ ಟ್ರೋಫಿಗಳನ್ನು ಆಡಿದ್ದಾರೆ. ಇನ್ನು ಫೆಬ್ರವಾರಿ 20 ರಂದು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಅಂಗಳಕ್ಕೆ ಇಳಿಯುತ್ತಿದ್ದಂತೆ, ದಾಖಲೆಯ ಪುಟಕ್ಕೆ ಸ್ಥಾನಕ್ಕೆ ಪಡೆಯಲಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ವಿರಾಟ್ ಈ ಮೊದಲು 2009ರಲ್ಲಿ ಮೊದಲ ಬಾರಿಗೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿದ್ದರು. ಆಗ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ ಮೂರು ಪಂದ್ಯಗಳಲ್ಲಿ ಇವರು 95 ರನ್‌ ಸಿಡಿಸಿದ್ದರು.

ಯಾವ ದಾಖಲೆಯ ಮೇಲೆ ಕೊಹ್ಲಿ ಕಣ್ಣು?

2013ರಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲೂ ವಿರಾಟ್ ಸ್ಥಾನ ಪಡೆದಿದ್ದರು. 2013ರ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಮಳೆ ಕಾಟ ನೀಡಿದ್ದ ಫೈನಲ್ ಪಂದ್ಯದಲ್ಲಿ ವಿರಾಟ್‌ 43 ರನ್‌ ಸಿಡಿಸಿ ಅಬ್ಬರಿಸಿದ್ದರು. ಈ ಟೂರ್ನಿಯಲ್ಲಿ ವಿರಾಟ್‌ 58ರ ಸರಾಸರಿಯಲ್ಲಿ 176 ರನ್ ಗಳಿಸಿದರು. ವಿರಾಟ್ ಕೊನೆಯ ಬಾರಿಗೆ 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕೀರ್ತಿ ತಮ್ಮದಾಗಿಸಿಕೊಂಡರು. ಈ ವೇಳೆ ತಂಡ ಫೈನಲ್‌ಗೆ ಅರ್ಹತೆ ಪಡೆದಿತ್ತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಪಾಕ್‌ ವಿರುದ್ಧ ಟೀಮ್ ಇಂಡಿಯಾ ಸೋಲು ಕಾಣಬೇಕಾಯಿತು.

Virat Kohli Set to Break Major Record in Champions Trophy 2025 Opener Against Bangladesh

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೊಹ್ಲಿ ಒಟ್ಟಾರೆ 13 ಪಂದ್ಯಗಳಲ್ಲಿ ಬ್ಯಾಟ್ ಮಾಡಿದ್ದಾರೆ. ಇದರಲ್ಲಿ ಆಡಿದ 12 ಇನಿಂಗ್ಸ್‌ಗಳಲ್ಲಿ 529 ರನ್‌ ಸಿಡಿಸಿದ್ದಾರೆ. ಈ ವೇಳೆ 5 ಅರ್ಧಶತಕಗಳು ಸಹ ಸೇರಿವೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ವಿರಾಟ್ ಒಂದೇ ಒಂದು ಶತಕವನ್ನು ಬಾರಿಸಿಲ್ಲ. ಈ ಬಾರಿ ಆ ಆತಕದ ಬರ ಕೊನೆಗೊಳ್ಳುತ್ತದಾ ಕಾದು ನೋಡಬೇಕಿದೆ.

Story first published: Saturday, February 15, 2025, 12:34 [IST]
Other articles published on Feb 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+