Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಫೋಟೋ ವೈರಲ್: ಎಬಿಡಿ ಹೋಮ್‌ವರ್ಕ್ ಮುಗಿಸಿರುವ ಮಗು ಎಂದ ವಿರಾಟ್

Virat Kohli Shares Hilarious Picture On Instagram: Rashid, Chahal Commented

ಅಬುಧಾಬಿಯಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಭರ್ಜರಿ ಗೆಲುವಿನ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಗುರುವಾರ ತಮ್ಮ ತರಬೇತಿಯ ಫೋಟೊವನ್ನು ಹಂಚಿಕೊಂಡಿದ್ದಾರೆ. ಫೋಟೋ ಹಂಚಿಕೊಂಡಿದರ ಜೊತೆಗೆ ಶಾಲೆಯ ಹೋಮ್‌ವರ್ಕ್‌ಗೆ ಸಂಬಂಧಿಸಿದ ಶೀರ್ಷಿಕೆ ಹಂಚಿಕೊಂಡಿದ್ದು, ಈ ಫೋಟೋದಲ್ಲಿ ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್ ಮತ್ತು ಎಬಿ ಡಿವಿಲಿಯರ್ಸ್ ಮುಂತಾದವರು ಇದ್ದಾರೆ.

ಈ ಫೋಟೋ ತನ್ನ ಶಾಲಾ ದಿನಗಳನ್ನು ನೆನಪಿಸುತ್ತಿದೆ ಎಂದು ಹೇಳಿರುವ ಕೊಹ್ಲಿ ''ಈ ಚಿತ್ರವು ನನ್ನನ್ನು ಮತ್ತೆ ಶಾಲಾ ದಿನಗಳಿಗೆ ಕರೆದೊಯ್ಯುತ್ತದೆ. ಒಂದೇ ತರಗತಿಯ 4 ವ್ಯಕ್ತಿಗಳು, ಇದರಲ್ಲಿ ಎಬಿ ಹೋಮ್‌ವರ್ಕ್ ಮುಗಿಸಿದ ಮಗು ಮತ್ತು ಸಿದ್ಧರಾಗಿದ್ದಾರೆ ಮತ್ತು ಇತರ ಮೂವರು ತೊಂದರೆಯಲ್ಲಿ ಸಿಲುಕಿದ್ದೇವೆ ಎಂದು ತಿಳಿದಿದ್ದಾರೆ" ಎಂದು ಆರ್‌ಸಿಬಿ ನಾಯಕ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ವಿರಾಟ್‌ರ ಈ ಫೋಟೋಗೆ ಸಾಕಷ್ಟು ಜನರು ಕಮೆಂಟ್ ಮಾಡಿದ್ದು, ಸನ್‌ರೈಸರ್ಸ್ ಹೈದ್ರಾಬಾದ್ ಸ್ಪಿನ್ನರ್ ರಶೀದ್ ಖಾನ್ ಕೂಡ ಕಮೆಂಟ್ ಮಾಡಿದ್ದಾರೆ. ''ಸಿರಾಜ್‌ಗೆ ಟೀಚರ್‌ಗೆ ಹೋಮ್‌ ವರ್ಕ್‌ ಕೊಟ್ಟಿದ್ದಾರೆ ಅಂತಾನೆ ಗೊತ್ತಿಲ್ಲ'' ಎಂದು ಕಾಲೆಳೆದಿದ್ದಾರೆ.

ಈ ಕಮೆಂಟ್ ಬೆನ್ನಲ್ಲೇ ಎಂಟ್ರಿ ಕೊಟ್ಟಿರುವ ಆರ್‌ಸಿಬಿ ಸ್ಪಿನ್ನರ್ ಯುಜವೇಂದ್ರ ಚಹಾಲ್, ನಾನು ಇವತ್ತು ಹೋಮ್‌ವರ್ಕ್ ಚೆಕ್ ಮಾಡ್ತಾರೆ ಅಂತಾನೆ, ಕ್ಲಾಸ್ ಬಂಕ್ ಮಾಡಿದ್ದೇನೆ'' ಎಂದಿದ್ದಾರೆ. ಜೊತೆಗೆ ರಶೀದ್‌ ಖಾನ್‌ಗೆ ನೀನು ಆಟ ಆಡಲು ಹೋಗು(ಇಂದಿನ ಪಂದ್ಯ) ನಾನು ಇದನ್ನು ನೋಡಿಕೊಳ್ಳುತ್ತೇನೆ ಎಂದು ಚಹಾಲ್, ರಶೀದ್‌ಗೂ ಟಾಂಗ್ ಕೊಟ್ಟಿದ್ದಾರೆ.

ಇನ್ನು ಆರ್‌ಸಿಬಿ ಓಪನರ್ ದೇವದತ್ ಪಡಿಕ್ಕಲ್ ''ನಾನು ಯಾವಾಗಲೂ ಹೋಮ್‌ವರ್ಕ್ ಮಾಡಿದ್ದೇನೆ'' ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ಆಟಗಾರರ ನಡುವಿನ ಕಮೆಂಟ್ಸ್‌ ನೋಡಿ ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ.

Story first published: Thursday, October 22, 2020, 19:11 [IST]
Other articles published on Oct 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+