ICC T20I rankingನಲ್ಲಿ ಜಿಗಿತ ಕಂಡ ವಿರಾಟ್ ಕೊಹ್ಲಿ, ಶಿಖರ್ ಧವನ್

ನವದೆಹಲಿ, ಸೆಪ್ಟೆಂಬರ್ 25: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಬುಧವಾರ (ಸೆಪ್ಟೆಂಬರ್ 25) ಪ್ರಕಟಿತ ನೂತನ ಐಸಿಸಿ ರ್ಯಾಂಕಿಂಗ್‌ನಲ್ಲಿ ಜಿಗಿತ ಕಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ 9 ವಿಕೆಟ್ ಸೋಲನುಭವಿಸಿದ ಹೊರತಾಗಿಯೂ ಕೊಹ್ಲಿ, ಧವನ್ ಶ್ರೇಯಾಂಕದಲ್ಲಿ ಚೇತರಿಕೆಯಾಗಿದೆ.
ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ರದ್ದು ಸೇರಿ ಇತ್ತಂಡಗಳು 1-1ರ ಸಮಬಲ ಸಾಧಿಸಿದ್ದವು. ಸರಣಿಯ 2ನೇ ಪಂದ್ಯದಲ್ಲಿ ಭಾರತ 7 ವಿಕೆಟ್ ಸುಲಭ ಗೆಲುವನ್ನಾಚರಿಸಿದ್ದರೆ, ತೃತೀಯ ಪಂದ್ಯದಲ್ಲಿ ಆಫ್ರಿಕಾ ಮೇಲುಗೈ ಸಾಧಿಸಿತ್ತು.
ನೂತನ ಟಿ20ಐ ರ್ಯಾಂಕಿಂಗ್‌ನಲ್ಲಿ ತಂಡಗಳ, ಆಟಗಾರರ ಶ್ರೇಯಾಂಕದಲ್ಲಿನ ಏರಿಳಿತಗಳು ಇಂತಿವೆ.

2ನೇ ಪಂದ್ಯದ ಬ್ಯಾಟಿಂಗ್ ಪರಿಣಾಮ
ವಿರಾಟ್ ಮತ್ತು ಧವನ್ ಟಿ20ಐ ಶ್ರೇಯಾಂಕದಲ್ಲಿ ಜಿಗಿತ ಕಾಣಲು ಮುಖ್ಯ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯ. ದ್ವಿತೀಯ ಪಂದ್ಯದಲ್ಲಿ ಧವನ್ 31 ಎಸೆತಗಳಿಗೆ 40, ಕೊಹ್ಲಿ 52 ಎಸೆತಗಳಿಗೆ 72 ರನ್ ಬಾರಿಸಿದ್ದರು. ತೃತೀಯ ಪಂದ್ಯದಲ್ಲಿ ಧವನ್ 25ಕ್ಕೆ 36 ರನ್, ಕೊಹ್ಲಿ 15ಕ್ಕೆ 9 ರನ್ ಗಳಿಸಿದ್ದರು.

ಧವನ್ 3 ಸ್ಥಾನ ಜಿಗಿತ
ಹಿಂದಿನ ರ್ಯಾಂಕಿಂಗ್‌ನಲ್ಲಿ 16 ಸ್ಥಾನದಲ್ಲಿದ್ದ ಗಬ್ಬರ್ ಧವನ್, ಸದ್ಯ 3 ಸ್ಥಾನ ಜಿಗಿತದೊಂದಿಗೆ 13ನೇ ಶ್ರೇಯಾಂಕಕ್ಕೇರಿದ್ದಾರೆ. 12 ಸ್ಥಾನದಲ್ಲಿದ್ದ ಕಿಂಗ್ ಕೊಹ್ಲಿ 1 ಸ್ಥಾನ ಚೇತರಿಕೆಯೊಂದಿಗೆ ಸದ್ಯ 11ನೇ ಸ್ಥಾನದಲ್ಲಿದ್ದಾರೆ. ಇನ್ನು 10ನೇ ಸ್ಥಾನದಲ್ಲಿ ಕೆಎಲ್ ರಾಹುಲ್, 9ನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ.

ಅಗ್ರ ಸ್ಥಾನದಲ್ಲಿ ಬಾಬರ್
ಟೆಸ್ಟ್ ಮತ್ತು ಏಕದಿನದಲ್ಲಿ ಅಪಾಯಕಾರಿ ತಂಡವಾಗಿ ಭಾರತ ಕಾಣಿಸಿದರೆ, ಟಿ20ಯಲ್ಲಿ ಪಾಕಿಸ್ತಾನ ಅಗ್ರಸ್ಥಾನ ಆವರಿಸಿಕೊಂಡಿದೆ. ಪಾಕ್ ಸ್ಫೋಟಕ ಬ್ಯಾಟ್ಸ್‌ಮನ್ ಬಾಬರ್ ಅಝಾಮ್ ಈಗ ನಂ.1 ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ನ್ಯೂಜಿಲೆಂಡ್‌ನ ಕಾಲಿನ್ ಮುನ್ರೋ, ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಅಫ್ಘಾನಿಸ್ತಾನದ ಅಝರತುಲ್ಲ ಅನಂತರದ ಸ್ಥಾನ ಪಡೆದಿದ್ದಾರೆ.

4ನೇ ಶ್ರೇಯಾಂಕದಲ್ಲಿ ಭಾರತ
ಪುರುಷರ ಟಿ20 ವಿಶ್ವ ರ್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ನಂ.1 ಸ್ಥಾನದಲ್ಲಿದೆ. ಇಂಗ್ಲೆಂಡ್ 2ನೇ, ದಕ್ಷಿಣ ಆಫ್ರಿಕಾ 3ನೇ, ಭಾರತ 4ನೇ, ಆಸ್ಟ್ರೇಲಿಯಾ 5ನೇ ಶ್ರೇಯಾಂಕದಲ್ಲಿದೆ. ಇನ್ನು ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ರಶೀದ್ ಖಾನ್ (ಅಫ್ಘಾನಿಸ್ತಾನ), ಪಾಕಿಸ್ತಾನದ ಇಮಾದ್ ವಾಸಿಮ್, ಶದಾಬ್ ಖಾನ್ ಆರಂಭಿಕ 3 ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್‌ಗಳಲ್ಲಿ ಆಸೀಸ್‌ನ ಗ್ಲೆನ್ ಮ್ಯಾಕ್ಸ್‌ವೆಲ್, ಬಾಂಗ್ಲಾದ ಶಕೀಬ್ ಅಲ್ ಹಸನ್, ಅಫ್ಘಾನ್‌ನ ಮೊಹಮ್ಮದ್ ನಬಿ ಮೊದಲ 3 ಶ್ರೇಯಾಂಕದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications