Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಸ್ರಿಕ್‌ ಎಸೆತಕ್ಕೆ ಸಿಕ್ಸ್ ಚಚ್ಚಿ ಅಣಕಿಸಿದ ವಿರಾಟ್ ಕೊಹ್ಲಿ: ವೈರಲ್ ವೀಡಿಯೋ

ವಿಂಡೀಸ್ ಬೌಲರ್ ವಿರುದ್ಧ ಜೊನೆಗೂ ಗೆದ್ದಿದ್ದು ವಿರಾಟ್ ಕೊಹ್ಲಿ | Oneindia Kannada
Virat Kohli smashes Kesrick Williams for six, gives animated reaction

ಮುಂಬೈ, ಡಿಸೆಂಬರ್ 12: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ ಸೋಲಿನ ಸಾಧ್ಯತೆಯ ಸುಳಿವನ್ನು ನೀಡಿತ್ತು. ಆದರೆ ಕನ್ನಡಿಗ ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಅರ್ಧ ಶತಕ ತಂಡವನ್ನು ಸೋಲಿನಿಂದ ಪಾರು ಮಾಡಿತಲ್ಲದೆ, ಸರಣಿ ಗೆಲ್ಲಿಸಿಕೊಟ್ಟಿತ್ತು.

ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ (ಡಿಸೆಂಬರ್ 11) ನಡೆದಿದ್ದ ಪಂದ್ಯಲ್ಲಿ ರೋಹಿತ್ 71 (34 ಎಸೆತ), ಕೆಎಲ್ ರಾಹುಲ್ 91 (56), ವಿರಾಟ್ ಕೊಹ್ಲಿ 70 (29) ರನ್‌ನೊಂದಿಗೆ ಭಾರತ 67 ರನ್‌ ಗೆಲುವನ್ನಾಚರಿಸಿತಲ್ಲದೆ 2-1ರಿಂದ ಸರಣಿ ಗೆದ್ದುಕೊಂಡಿತು. ಭಾರತದ ನಾಯಕ ವಿರಾಟ್ ಕೊಹ್ಲಿಯ ಅಬ್ಬರದಾಟ ಅಕ್ಷರಶಃ ಮನರಂಜಿಸಿತ್ತು.

ಇದೇ ಪಂದ್ಯದಲ್ಲಿ ಕೊಹ್ಲಿ ಮತ್ತು ವೆಸ್ಟ್ ಇಂಡೀಸ್ ಆಟಗಾರ ಕೆಸ್ರಿಕ್ ವಿಲಿಯಮ್ಸ್ ನಡುವೆ ಸಣ್ಣಗಿನ ಅಣಕಾಟವೂ ಕಾಣಸಿಕ್ಕಿತು. ವಿಲಿಯಮ್ಸ್‌ ಎಸೆತಕ್ಕೆ ಬ್ಯಾಟ್‌ ಬೀಸಿದ ಕೊಹ್ಲಿ ವಿಚಿತ್ರ ಮುಖಭಾಗ ಮಾಡಿದ್ದ ದೃಶ್ಯ ಆಟದ ವೇಳೆ ಸೆರೆಯಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ ಕೂಡ.

ಇದಾಗಿದ್ದು 18ನೇ ಓವರ್‌ನ 4ನೇ ಎಸೆತದ ವೇಳೆ. ವಿಲಿಯಮ್ಸ್‌ ಎಸೆತಕ್ಕೆ ಡೀಪ್ ಮಿಡ್‌ ವಿಕೆಟ್‌ನತ್ತ ಕೊಹ್ಲಿ ಚೆಂಡನ್ನು ಅಟ್ಟಿದರು. ಮತ್ತೆ ಚೆಂಡಿನತ್ತಲೂ ಬೌಲರ್‌ನತ್ತಲೂ ಕೊಹ್ಲಿ ವಿಚಿತ್ರವಾಗಿ ದಿಟ್ಟಿಸಿದ್ದರು. ಕೊಹ್ಲಿಯ ಈ ವರ್ತನೆ ಎದುರಾಳಿಗೆ ಎಂತದ್ದೋ ಸಂದೇಶ ರವಾನಿಸಿದಂತಿತ್ತು. ಅದಕ್ಕೂ ಹಿಂದಿನ ಅಂದರೆ, ಮೊದಲ ಟಿ20 ಪಂದ್ಯದಲ್ಲೂ ಕೊಹ್ಲಿ, ಕೆಸ್ರಿಕ್ ಮಧ್ಯೆ ಇಂಥದ್ದೇ ಸಣ್ಣಗಿನ ಜಗ್ಗಾಟ ನಡೆದಿತ್ತು.

Story first published: Thursday, December 12, 2019, 15:57 [IST]
Other articles published on Dec 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+