ಐಪಿಎಲ್ 2019: ಕೊಹ್ಲಿ vs ಬೂಮ್ರಾ ಕುತೂಹಲಕಾರಿ ಅಂಕಿ-ಅಂಶಗಳು!


ಬೆಂಗಳೂರು, ಮಾರ್ಚ್ 28: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕ್ರಮವಾಗಿ ಚೆನ್ನೈ ಮತ್ತು ಡೆಲ್ಲಿ ವಿರುದ್ಧ ಸೋಲಿನ ಕಹಿ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಇಂದು (ಮಾರ್ಚ್ 28) ಮೈದಾನಕ್ಕಿಳಿಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ತಂಡಗಳಲ್ಲಿ ಟೀಮ್ ಇಂಡಿಯಾದ ನಂಬರ್ ವನ್ ಬೌಲರ್ ಮತ್ತು ನಂಬರ್ ವನ್ ಬ್ಯಾಟ್ಸ್ಮನ್ ಇರುವುದು ವಿಶೇಷ. ಹೀಗಾಗಿ ಐಪಿಎಲ್‌ನಲ್ಲಿ ಮೊದಲ ಮುಖಾಮುಖಿಯಾಗುತ್ತಿರುವ ಈ ತಂಡಗಳ ನಡುವಿನ ಪಂದ್ಯ ಒಂದರ್ಥದಲ್ಲಿ ವಿರಾಟ್ ಕೊಹ್ಲಿ-ಜಸ್‌ಪ್ರೀತ್ ಬೂಮ್ರಾ ನಡುವಿನ ಪಂದ್ಯವೂ ಹೌದು.
ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, Live ಸ್ಕೋರ್‌ಕಾರ್ಡ್
ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಮತ್ತು ಭಾರತದ ವೇಗಿ ಬೂಮ್ರಾ ಅಥವಾ ಆರ್‌ಸಿಬಿ vs ಎಂಐಗೆ ಸಂಬಂಧಿಸಿ ಐಪಿಎಲ್‌ನ ಕೆಲ ಕುತೂಹಲಕಾರಿ ಅಂಕಿ-ಅಂಶಗಳು ಇಲ್ಲಿವೆ.

ಎಸೆತಕ್ಕೆ ಬೌಂಡರಿಗಳು
ಮುಂಬೈ ಇಂಡಿಯನ್ಸ್ ವಿರುದ್ಧ ಅಧಿಕ ಎಸೆತಗಳನ್ನು ಎದುರಿಸಿ ಹೆಚ್ಚು ಬೌಂಡರಿ ಬಾರಿಸಿದ ಆಟಗಾರರಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. 23 ಪಂದ್ಯಗಳಲ್ಲಿ ಕೊಹ್ಲಿ 439 ಎಸೆತಗಳನ್ನು ಎದುರಿಸಿದ್ದಾರೆ. ಇದರಲ್ಲಿ 45 ಫೋರ್ಸ್, 24 ಸಿಕ್ಸ್ ಗಳು ಸೇರಿವೆ. ಎದುರಿಸಿದ ಎಸೆತ ಮತ್ತು ಬೌಂಡರಿಗಳಲ್ಲಿ 6.36 ಸರಾಸರಿ ಹೊಂದಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಅಜಿಂಕ್ಯ ರಹಾನೆ 18 ಪಂದ್ಯಗಳಲ್ಲಿ 426 ಎಸೆತ 56 ಫೋರ್-11 ಸಿಕ್ಸ್‌ಗಳನ್ನು ಬಾರಿಸಿದ್ದಾರೆ. ತೃತೀಯ ಸ್ಥಾನದಲ್ಲಿರುವ ಎಂಎಸ್ ಧೋನಿ 30 ಪಂದ್ಯಗಳಲ್ಲಿ 449 ಎಸೆತ ಎದುರಿಸಿ 48 ಫೋರ್, 27 ಸಿಕ್ಸ್‌ಗಳ ದಾಖಲೆ ಮಾಡಿದ್ದಾರೆ.

ಕೊಹ್ಲಿಯೇ ಮೊದಲ ಬಲಿ
ಕ್ರಿಕೆಟ್ ಅಂಕಿ-ಅಂಶಗಳ ಬಗ್ಗೆ ಅರಿವಿರುವ ಕ್ರಿಕೆಟ್ ಅಭಿಮಾನಿಗಳಲ್ಲಿ ಕೊಹ್ಲಿ-ಬೂಮ್ರಾ ಮುಖಾಮುಖಿಯಾಗುತ್ತಿರುವ ಈ ಬಾರಿಯ ಪಂದ್ಯದ ಸಾಕಷ್ಟು ಕುತೂಹಲ ಮೂಡಿಸಿದೆ. ಕಾರಣ, ಬೂಮ್ರಾ ಐಪಿಎಲ್‌ನಲ್ಲಿ ಮೊದಲ ವಿಕೆಟ್ ಮುರಿದಿದ್ದು ಕೊಹ್ಲಿಯದ್ದೇ.

ಅತ್ಯಧಿಕ ಬ್ಯಾಟಿಂಗ್ ಸ್ಟ್ರೈಕ್ ರೇಟ್
ಬೂಮ್ರಾ ವಿರುದ್ಧ ಐಪಿಎಲ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಹೊಂದಿದವರಲ್ಲಿ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಬೂಮ್ರಾ ಅವರ 66 ಎಸೆತಗಳನ್ನು ಎದುರಿಸಿ ಕೊಹ್ಲಿ 99 ರನ್ ಬಾರಿಸಿದ್ದಾರೆ. ಒಂದೇ ಸಾರಿ ಔಟ್ ಆಗಿದ್ದಾರೆ. 150.00 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಪ್ರಥಮ ಸ್ಥಾನದಲ್ಲಿರುವ ಜೆಪಿ ಡುಮಿನಿ, ಬೂಬ್ರಾ ಅವರ 33 ಎಸೆತಗಳನ್ನು ಎದುರಿಸಿ 70 ರನ್ ಕಲೆ ಹಾಕಿದ್ದಾರೆ, ಒಂದು ಸಾರಿ ಔಟ್ ಆಗಿದ್ದಾರೆ, 212.12 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಮತ್ತೆ ವಿಕೆಟ್ ಲಭಿಸಿಲ್ಲ
ಐಪಿಎಲ್ ಹಣಾಹಣಿಗಳಲ್ಲಿ ವೇಗಿ ಬೂಮ್ರಾ ಮೊದಲ ವಿಕೆಟ್ ಪಡೆದಿದ್ದು ಕೊಹ್ಲಿಯದ್ದು ಅನ್ನುವ ವಿಚಾರವನ್ನು ಮೇಲೆಯೇ ಹೇಳಿದ್ದೇವೆ. ಮತ್ತೊಂದು ಅಚ್ಚರಿಯ ಸಂಗತಿಯಿದೆ, ಅದೇನೆಂದರೆ ಐಪಿಎಲ್‌ನಲ್ಲಿ ಮೊದಲ ವಿಕೆಟ್ ಆಗಿ ಕೊಹ್ಲಿಯನ್ನು ಔಟ್ ಮಾಡಿದ್ದ ಬೂಮ್ರಾ ಅನಂತರ ಯಾವತ್ತೂ ಕೊಹ್ಲಿಯ ವಿಕೆಟ್ ಪಡೆಯಲಾಗಿಲ್ಲ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications