ಕೊಹ್ಲಿ vs ರೋಹಿತ್: 2022ರಲ್ಲಿ ಹೆಚ್ಚು ರನ್ ಮತ್ತು ಅರ್ಧಶತಕಗಳು ಗಳಿಸಿರುವವರು ಯಾರು?

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಈ ಇಬ್ಬರೂ ಸಹ ವಿಶ್ವ ಕ್ರಿಕೆಟ್‍ನಲ್ಲಿ ತಮ್ಮ ಸಾಮರ್ಥ್ಯವೇನು ಎಂಬುದನ್ನು ಈಗಾಗಲೇ ಸಾಬೀತುಪಡಿಸಿಕೊಂಡು ಮಾಡರ್ನ್ ಡೇಸ್ ಲೆಜೆಂಡ್ಸ್ ಎನಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ನಾಯಕ ಸ್ಥಾನದಿಂದ ಕೆಳಗಿಳಿದಿದ್ದು, ಸದ್ಯ ಓರ್ವ ಆಟಗಾರನಾಗಿ ಮಾತ್ರ ತಂಡದಲ್ಲಿ ಮುಂದುವರಿಯುತ್ತಿದ್ದಾರೆ. ಅತ್ತ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದ ನಂತರ ಎಲ್ಲಾ ಮಾದರಿಯಲ್ಲಿಯೂ ಟೀಮ್ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಗೊಂಡಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದ ಜವಾಬ್ದಾರಿಯಿಂದ ಹೊರಬಂದ ನಂತರವೂ ಕೂಡ ದೊಡ್ಡ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಫಾರ್ಮ್ ಕಂಡುಕೊಳ್ಳಲಾಗದೇ ಪರದಾಡುತ್ತಿದ್ದಾರೆ. ಹೌದು, ವಿರಾಟ್ ಕೊಹ್ಲಿ ಶತಕ ಬಾರಿಸಿ 3 ವರ್ಷಗಳು ಸಮೀಪಿಸುತ್ತಿದ್ದು, ನಾಯಕತ್ವವನ್ನು ತ್ಯಜಿಸಿದ ನಂತರವೂ ಸಹ ದೊಡ್ಡ ಇನ್ನಿಂಗ್ಸ್ ಆಡದೇ ಮಂಕಾಗಿದ್ದಾರೆ. ಇನ್ನು ಟೀಮ್ ಇಂಡಿಯಾದ ನೂತನ ನಾಯಕ ರೋಹಿತ್ ಶರ್ಮಾ ಫಾರ್ಮ್ ವಿರಾಟ್ ಕೊಹ್ಲಿಗಿಂತ ತುಂಬಾ ದೊಡ್ಡ ಮಟ್ಟದ ವಿಭಿನ್ನತೆಯನ್ನೇನೂ ಹೊಂದಿಲ್ಲ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಅಜೇಯ 76 ರನ್ ಗಳಿಸಿದ್ದು ಬಿಟ್ಟರೆ ರೋಹಿತ್ ಶರ್ಮಾ ಇನ್ಯಾವುದೇ ಪಂದ್ಯದಲ್ಲಿಯೂ ಈ ರೀತಿಯ ಉತ್ತಮ ಆಟವನ್ನಾಡಿಲ್ಲ. ಹೀಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಸಹ ಸದ್ಯ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ ಎಂದೇ ಹೇಳಬಹುದು. ಹಾಗಿದ್ದರೆ ಈ ಇಬ್ಬರು 2022ರಲ್ಲಿ ಇಲ್ಲಿಯವರೆಗೆ ಆಡಿರುವ ಒಟ್ಟು ಪಂದ್ಯಗಳ ಸಂಖ್ಯೆ ಮತ್ತು ಆ ಪೈಕಿ ಕಲೆಹಾಕಿರುವ ರನ್ ಹಾಗೂ ಅಂಕಿ ಅಂಶಗಳ ಕುರಿತಾದ ವಿವರ ಮುಂದಿದೆ ಓದಿ.

ರೋಹಿತ್ ಶರ್ಮಾ ಅಂಕಿ ಅಂಶ
2022ರಲ್ಲಿ ಇಲ್ಲಿಯವರೆಗೂ ( ಇಂಗ್ಲೆಂಡ್ ಪ್ರವಾಸದ ಮುಕ್ತಾಯದವರೆಗೆ ) ರೋಹಿತ್ ಶರ್ಮಾ ಎಲ್ಲಾ ಮಾದರಿಯ ಒಟ್ಟು 18 ಅಂತರರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿದ್ದು, 443 ರನ್ ಕಲೆಹಾಕಿದ್ದಾರೆ. ರೋಹಿತ್ ಶರ್ಮಾ ಈ ಪೈಕಿ ಗಳಿಸಿರುವ ಗರಿಷ್ಠ ರನ್ ಇಂಗ್ಲೆಂಡ್ ವಿರುದ್ಧ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಕಲೆಹಾಕಿದ ಅಜೇಯ 76 ರನ್ ಮತ್ತು ಗಳಿಸಿದ ಅರ್ಧ ಶತಕಗಳ ಸಂಖ್ಯೆ 2. ರೋಹಿತ್ ಶರ್ಮಾ 26.05ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.

ವಿರಾಟ್ ಕೊಹ್ಲಿ ಅಂಕಿ ಅಂಶ
2022ರಲ್ಲಿ ವಿರಾಟ್ ಕೊಹ್ಲಿ ಇಲ್ಲಿಯವರೆಗೂ ( ಇಂಗ್ಲೆಂಡ್ ಪ್ರವಾಸದ ಮುಕ್ತಾಯದವರೆಗೆ ) ಎಲ್ಲಾ ಮಾದರಿಯ ಒಟ್ಟು 19 ಅಂತರರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿದ್ದು 476 ರನ್ ಕಲೆಹಾಕಿದ್ದಾರೆ. 25.05ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ ಕಲೆಹಾಕಿರುವ ಗರಿಷ್ಠ ರನ್ 79. ಇನ್ನು ವಿರಾಟ್ ಕೊಹ್ಲಿ ಈ ವರ್ಷ ಒಟ್ಟು 4 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಕೊಹ್ಲಿಯದ್ದೇ ಹೆಚ್ಚು ರನ್, ಅರ್ಧಶತಕ
ಇನ್ನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹೋಲಿಕೆಗಳು ನಡೆಯುತ್ತಲೇ ಇರುತ್ತವೆ. ಅದರಂತೆ ಈ ವರ್ಷದ ಪ್ರದರ್ಶನಗಳಲ್ಲಿಯೂ ಇಬ್ಬರ ನಡುವೆ ಹೋಲಿಕೆಗಳನ್ನು ಇಬ್ಬರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿದ್ದು, ಈ ಪೈಕಿ ರನ್ ಮತ್ತು ಅರ್ಧಶತಕಗಳನ್ನು ಗಣನೆಗೆ ತೆಗೆದುಕೊಂಡರೆ ರೋಹಿತ್ ಶರ್ಮಾಗಿಂತ ವಿರಾಟ್ ಕೊಹ್ಲಿಯೇ ಮುಂಚೂಣಿಯಲ್ಲಿದ್ದಾರೆ. ರೋಹಿತ್ ಶರ್ಮಾಗಿಂತ ವಿರಾಟ್ ಕೊಹ್ಲಿ ಒಂದು ಇನ್ನಿಂಗ್ಸ್ ಹೆಚ್ಚಾಗಿ ಆಡಿದ್ದು, 33 ರನ್ ಹೆಚ್ಚಾಗಿ ಬಾರಿಸಿದ್ದಾರೆ ಹಾಗೂ ರೋಹಿತ್ ಶರ್ಮಾ ಈ ವರ್ಷ ಒಂದು ಅರ್ಧಶತಕ ಬಾರಿಸಿದ್ದರೆ, ವಿರಾಟ್ ಕೊಹ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications