Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ ದಿವ್ಯಾಂಗ ಅಭಿಮಾನಿ ಪ್ರೀತಿಗೆ ವಿರಾಟ್ ಕೊಹ್ಲಿ ಬೋಲ್ಡ್‌

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ದೇಶ ಹಾಗೂ ವಿದೇಶದಲ್ಲಿ ಅಭಿಮಾನಿಗಳು ಇದ್ದಾರೆ. ಇವರ ಜೊತೆಗೆ ಒಂದು ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬೀಳುತ್ತಾರೆ. ಅವಕಾಶ ಸಿಕ್ಕಾಗಲೆಲ್ಲಾ ವಿರಾಟ್‌ ಸಹ ಇಂತಹ ಅಭಿಮಾನಿಗಳಿಗೆ ವಿಡಿಯೋ, ಫೋಟೋ, ಆಟೋಗ್ರಾಫ್‌ ನೀಡುತ್ತಲೇ ಇರುತ್ತಾರೆ. ಆದರೆ ಇತ್ತೀಚಿಗೆ ಸಾಮಾಜಿಕ ತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಶನಿವಾರ (ಜೂನ್ 28) ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದ ಹೊರಗೆ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನದ ದಿವ್ಯಾಂಗ ಅಭಿಮಾನಿ ಜೊತೆ ನಡೆಸಿದ ಆತ್ಮೀಯ ಸಂಭಾಷಣೆಯ ವಿಡಿಯೋ ಹಾಗೂ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Virat Kohli

ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಮಹಿಳಾ ಟಿ20 ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದಿದೆ. ಇದೇ ಪಂದ್ಯವನ್ನು ನೋಡಲು ಟೀಮ್ ಇಂಡಿಯಾದ ಮಾಜಿ ಆಟಗಾರ ರವಿ ಶಾಸ್ತ್ರಿ, ಶಿಖರ್ ಧವನ್ ಹಾಗೂ ವಿರಾಟ್‌ ಕೊಹ್ಲಿ ಅವರು ಇದ್ದರು.

ವಿಡಿಯೋ ವೈರಲ್‌

ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ ಅವರು ಕ್ರೀಡಾಂಗಣದಿಂದ ಹೊರಬರುತ್ತಿದ್ದಾಗ, ಗಾಲಿಕುರ್ಚಿಯಲ್ಲಿದ್ದ ಪಾಕಿಸ್ತಾನದ ದಿವ್ಯಾಂಗ ಅಭಿಮಾನಿಯೊಬ್ಬರು ಕೊಹ್ಲಿ ಅವರನ್ನು ಮಾತನಾಡಿಸಲು ಮುಂದಾದರು. ಇದನ್ನು ಗಮನಿಸಿದ ಕೊಹ್ಲಿ ತಕ್ಷಣವೇ ಅಭಿಮಾನಿಯ ಬಳಿ ತೆರಳಿ ಅವರನ್ನು ಪ್ರೀತಿಯಿಂದ ಮಾತನಾಡಿಸಿದರು. ವಿರಾಟ್‌ ಅವರನ್ನು ಭೇಟಿಯಾಗುವುದೇ ನನ್ನ ಜೀವನದ ಅತಿ ದೊಡ್ಡ ಕನಸುಗಳಲ್ಲಿ ಒಂದಾಗಿತ್ತು. ಇಂದು ಆ ಕನಸು ನನಸಾಗಿದೆ ಎಂದು ಅಭಿಮಾನಿ ಅತ್ಯಂತ ಭಾವುಕರಾಗಿ ನುಡಿದರು.

ಭಾರತ ಮತ್ತು ಪಾಕಿಸ್ತಾನ ನಡುವೆ ಎಷ್ಟೇ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳಿದ್ದರೂ, ಕ್ರೀಡೆ ಮತ್ತು ಅಭಿಮಾನಕ್ಕೆ ಯಾವುದೇ ಗಡಿಗಳಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಕೊಹ್ಲಿ ಅವರ ಈ ಸರಳತೆ ಮತ್ತು ಅಭಿಮಾನಿಗಳಿಗೆ ನೀಡುವ ಗೌರವಕ್ಕೆ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿದೆ.

ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಮೊದಲು ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಬಳಿಕ ಏಕದಿನ ಸರಣಿ ನಡೆಯಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 14 ರಂದು ನಡೆಯಲಿದೆ. ಈ ಸರಣಿಯಲ್ಲಿ ವಿರಾಟ್‌ ಕಣಕ್ಕೆ ಇಳಿಯಲಿದ್ದಾರೆ. ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಈಗ ತಯಾರಿ ನಡೆಸಿದ್ದು, ಈ ವೇಳೆ ಎಲ್ಲರ ಕಣ್ಣುಗಳು ಇವರ ಬ್ಯಾಟಿಂಗ್‌ ಮೇಲೆ ನೆಟ್ಟಿರಲಿವೆ.

Story first published: Wednesday, July 1, 2026, 14:03 [IST]
Other articles published on Jul 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+