ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ನಡುವಣ ಟೆಸ್ಟ್ ಸರಣಿ ಗುರುವಾರದಿಂದ ಆರಂಭವಾಗಲಿದೆ. ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಬ್ಯಾಟ್ ಮಾಡಲಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಶ್ವದಲ್ಲೇ ಚೇಸಿಂಗ್ ಸ್ಟಾರ್‌ಗೆ ಅಪಾರ ಅಭಿಮಾನಿಗಳ ಬಳಗವಿದೆ.
ವಿರಾಟ್ ಕೊಹ್ಲಿ ತಮ್ಮ ಸ್ಟೈಲ್ ಹಾಗೂ ಫಿಟ್ನೆಸ್, ಆಟದ ಶೈಲಿಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಪಾಕಿಸ್ತಾನದಲ್ಲೂ ಚಿಕು ಅವರ ಅಪಾರ ಅಭಿಮಾನಿಗಳ ಬಳಗವಿದೆ. ಹೀಗೆ ಹೇಳಿದರೆ ನೀವು ನಂಬುವುದು ಕೊಂಚ ಕಷ್ಟ ಕಾಣುತ್ತದೆ. ಆದರೆ ಈ ವಿಡಿಯೋವನ್ನು ನೋಡಿದರೆ, ಪಾಕ್‌ನಲ್ಲೂ ವಿರಾಟ್ ಕೊಹ್ಲಿ ಕ್ರೇಜ್ ಎಂತಹದ್ದು ಎಂದು ತಿಳಿಯುತ್ತದೆ.

ಸದ್ಯ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಏಕದಿನ ಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಕಾಣಿಸಿಕೊಂಡಿದ್ದಾರೆ. ಈ ಮೂಲಕ ಪಾಕ್‌ನಲ್ಲಿ ವಿರಾಟ್ ಕೊಹ್ಲಿ ಅವರ ಕ್ರೇಜ್ ಅನಾವರಣ ಆಗಿದೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕ್‌ನಲ್ಲೂ ವಿರಾಟ್ ಕೊಹ್ಲಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಫೈಸಲಾಬಾದ್‌ನಲ್ಲಿ ನಡೆದ ಚಾಂಪಿಯನ್ಸ್ ಕಪ್ ವೇಳೆ ವಿರಾಟ್ ಕೊಹ್ಲಿಯ ಮೇಲೆ ಪಾಕ್‌ನಲ್ಲಿ ಎಂತಹ ಅಭಿಮಾನಿಗಳು ಇದ್ದಾರೆ ಎಂಬುದು ಸಾಬೀತಾಗಿದೆ. ಇಕ್ಬಾಲ್ ಸ್ಟೇಡಿಯಂನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಜೆರ್ಸಿಯನ್ನು ಅಭಿಮಾನಿಯೊಬ್ಬರು ಬೀಸುತ್ತಿರುವುದು ಕಂಡುಬಂದಿದೆ.
ಭಾನುವಾರದ ಪಂದ್ಯದ ವೇಳೆ ಈ ದೃಷ್ಯ ಕಂಡು ಬಂದಿದೆ. ಕ್ರಿಕೆಟ್ ನೇರ ಪ್ರಸಾರ ನಡೆಸುತ್ತಿದ್ದ ಕ್ಯಾಮರಾ ಮೆನ್ ನೇರವಾಗಿ ಅಭಿಮಾನಿಯ ಕೈಯಲ್ಲಿದ ಜೆರ್ಸಿಯನ್ನು ಪೋಕಸ್ ಮಾಡಿದ್ದಾರೆ. ಆ ವೇಳೆ ಅಭಿಮಾನಿ ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18 ಹೊಂದಿರುವ ಟಿ ಶರ್ಟ್ ಹಿಡಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದಲೂ ಈ ವರೆಗೆ ಭಾರತ ತಂಡ, ಪಾಕಿಸ್ತಾನ ಪ್ರವಾಸವನ್ನು ಬೆಳೆಸಿಲ್ಲ. ಅಂದರೆ ವಿರಾಟ್ ಕೊಹ್ಲಿ ಒಮ್ಮೆಯೂ ಪಾಕ್‌ನಲ್ಲಿ ಬ್ಯಾಟಿಂಗ್ ಮಾಡಿಲ್ಲ. ಚಾಂಪಿಯನ್ಸ್ ಟ್ರೋಫಿ ಪಾಕ್‌ನಲ್ಲಿ ನಡೆಯುವ ಚರ್ಚೆಗಳು ನಡೆದಿವೆ. ಆದರೆ ಬಿಸಿಸಿಐ ಇದಕ್ಕೆ ತಕರಾರು ತೆಗೆದಿದ್ದು ತಟಸ್ಥ ಸ್ಥಳದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸುವಂತೆ ಕೇಳಿಕೊಂಡಿದೆ.
ಇನ್ನು ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸಲು ಭಾರತ ಸರ್ಕಾರದ ಅನುಮತಿ ಅನಿವಾರ್ಯ. ತಂಡವು ಪಾಕಿಸ್ತಾನಕ್ಕೆ ಹೋದರೆ, ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಅನೇಕ ಆಟಗಾರರು ಮೊದಲ ಬಾರಿಗೆ ಆಡುವ ಅವಕಾಶವನ್ನು ಪಡೆಯಲಿದ್ದಾರೆ.