ಮಾವಿಗೂ ಮೆತ್ತಿದ ಕ್ರಿಕೆಟ್ ಕ್ರೇಝ್, ಕೊಹ್ಲಿ-ಧವನ್ ಹೆಸರಿನಲ್ಲಿ ಮ್ಯಾಂಗೋಸ್!

ನವದೆಹಲಿ, ಜುಲೈ 4: ದೇಶದಾದ್ಯಂತ ಇರುವ ಮಾವಿನಹಣ್ಣು ಮಾರಾಟಗಾರರು ನವದೆಹಲಿಯಲ್ಲಿ ಜುಲೈ 5ರಂದು ಒಟ್ಟು ಸೇರಲಿದ್ದಾರೆ. ಆವತ್ತು ವೈವಿಧ್ಯಮಯ ಮಾವಿನ ಹಣ್ಣುಗಳು ಗ್ರಾಹಕರರನ್ನು ಸೆಳೆಯಲಿವೆ, ಬಾಯಿ ಸಿಹಿಗೊಳಿಸಲಿದೆ. ಇದರ ಜೊತೆ ಮಾವಿನ ಹಣ್ಣುಗಳು ಗ್ರಾಹಕರನ್ನು ಕ್ರಿಕೆಟ್ ಗುಂಗಿನತ್ತವೂ ಕೊಂಡೊಯ್ಯಲಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಜುಲೈ 5ರಂದು ಜಾನಕಿ ಪುರಿಯ ದಿಲ್ಲಿ ಹಾತ್‌ನಲ್ಲಿ ಆರಂಭಗೊಳ್ಳುವ ಮಾವಿನ ಮೇಳದಲ್ಲಿ ನೀವು ವಿರಾಟ್ ಕೊಹ್ಲಿ ಹೆಸರಿನ ಮಾವಿನ ಹಣ್ಣುಗಳನ್ನು ಸವಿಯಬಹುದು. ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಹೆಸರಿನ ಮಾವನ್ನೂ ಆಸ್ವಾದಿಸಬಹುದು.
ವಿಶ್ವಕಪ್ ಹೊತ್ತಲ್ಲಿ ನಾವೆಲ್ಲ ಕ್ರಿಕೆಟ್ ಗುಂಗಿನಲ್ಲಿರುವಾಗ ಇತ್ತ ದಿಲ್ಲಿಯಲ್ಲಿನ ಮಾವು ಮೇಳ ಕ್ರಿಕೆಟಿಗರ ಹೆಸರಿನ ಮಾವುಗಳೊಂದಿಗೆ ಕ್ರಿಕೆಟ್ ಕ್ರೇಸ್ ಇನ್ನಷ್ಟು ಹೆಚ್ಚಿಸುತ್ತಿದೆ.

ಬಗೆ ಬಗೆ ಮಾವಿಗೆ ವಿಭಿನ್ನ ಹೆಸರು
ದಿಲ್ಲಿಯಲ್ಲಿ ನಡೆಯುವ ಈ ಬಹು ಆಕರ್ಷಣೀಯ ಮಾವು ಮೇಳದಲ್ಲಿ ಪ್ರತೀ ವರ್ಷವೂ ನೂರಾರು ಮಾವು ಮಾರಾಟಗಾರರು ಪಾಲ್ಗೊಳ್ಳುತ್ತಾರೆ. ಮಾವು ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಬೆಳೆಗಾರರು ಪ್ರತೀಸಾರಿಯೂ ನೂರಾರು ಬಗೆಯ ಮಾವುಗಳನ್ನು ತರುತ್ತಾರೆ. ಈ ಬಾರಿ ವೈವಿಧ್ಯ ಮಾವುಗಳಿಗೆ ಕೊಹ್ಲಿ ಮತ್ತು ಧವನ್ ಹೆಸರನ್ನಿಡಲಾಗಿದೆ.

300 ವೈವಿಧ್ಯ ಮಾವುಗಳು
ಈ ಬಗ್ಗೆ ಯುಪಿಯ ಮುಝಾಫರ್‌ನಗರ್‌ನ ಮಾವು ಬೆಳೆಗಾರ ತಾರಿಫ್ ಮುಸ್ತಫಾ ಮಾತನಾಡಿ, 'ಈ ಮಾವು ಮೇಳದಲ್ಲಿ ನಾನು ಕಳೆದ ಸುಮಾರು 16-17 ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದೇನೆ. ಸುಮಾರು 300 ವೈವಿಧ್ಯ ಮಾವುಗಳನ್ನು ಮಾರಾಟಕ್ಕೆ ತರುತ್ತಿದ್ದೇನೆ' ಎಂದಿದ್ದಾರೆ. ಅಂದ್ಹಾಗೆ ಹೊಸ ಬಗೆಯ ಮಾವಿಗೆ ಇಲ್ಲಿ ವಿಭಿನ್ನ ಹೆಸರುಗಳನ್ನು ಇಡುತ್ತಿರೋದು ಹೊಸದೇನಲ್ಲ. ಈ ಹಿಂದೆ ಇಲ್ಲಿ ಯೋಗಿ (ಆದಿತ್ಯನಾಥ್), (ನರೇಂದ್ರ) ಮೋದಿ ಹೆಸರಿನ ಮಾವುಗಳು ಮಾರಾಟವಾಗಿದ್ದವು.

ನೋಟ, ರುಚಿಗೆ ತಕ್ಕಂತ ಹೆಸರು
'ನಾವು ಪ್ರತೀಸಾರಿಯೂ ಹೊಸ ಬಗೆಯ ಮಾವನ್ನು ಬೆಳೆಸುತ್ತೇವೆ. ಆ ಹೊಸ ಬಗೆಯ ಮಾವು ನೋಡೋಕೆ ಹೇಗೆ ಕಾಣಿಸುತ್ತೋ ಅದನ್ನೇ ಹೆಸರಿಡುತ್ತೇವೆ. ಈ ಬಾರಿ ಹೊಸ ವಿಧದ ಮಾವಿಗೆ ವಿರಾಟ್ ಕೊಹ್ಲಿ ಹೆಸರಿಟ್ಟಿದ್ದೇವೆ. ವಿರಾಟ್ ಹೆಸರಿನ ಮಾವು ಉಳಿದ ಮಾವಿಗಿಂತ ಕೊಂಚ ಬಿಳಿ ಬಣ್ಣದಲ್ಲಿದೆ. ಸುಮಾರು 6 ಇಂಚಿಗಿಂತಲೂ ಉದ್ದವಿದೆ. ಇದನ್ನು ಆಸ್ವಾದಿಸುವಾಗ ಟಿಮ್ ಇಂಡಿಯಾ ಕ್ಯಾಪ್ಟನ್ ಸಿಕ್ಸ್ ಬಾರಿಸುವಾಗ ಆಗುವ ಖುಷಿಗಿಂತಲೂ ಹೆಚ್ಚು ರುಚಿಯೆನಿಸುತ್ತೆ' ಎಂದು ಮುಸ್ತಫಾ ಹೆಮ್ಮೆಯಿಂದ ಹೇಳಿಕೊಂಡರು.

ಧವನ್ ಕೂಡ ಸವಿಯಲು ಸಿದ್ಧ
ಮತ್ತೊಬ್ಬ ಮಾವು ಬೆಳೆಗಾರ, ಯುಪಿಯ ಸಹರಣ್‌ಪುರ್‌ನ ರಾಮ್‌ವೀರ್ ಸಿಂಗ್ ಚೌಹಾಣ್ ತಾವು ಬೆಳೆದ ಮಾವಿನ ಹೊಸ ಬಗೆಗೆ ಶಿಖರ್ ಧವನ್ ಹೆಸರಿಟ್ಟಿದ್ದಾರೆ. ಅವರು ಮಾತನಾಡುತ್ತ, 'ಈ ವರ್ಷ ಇಲ್ಲಿನ ಮಾವಿನ ಮೇಳಕ್ಕೆ ಬರೋ ಗ್ರಾಹಕರು ಶಿಖರ್ ಧವನ್ ಮಾವಿನ ಹಣ್ಣು ಸವಿಯಬಹುದು. ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆರಂಭಿಕ ಬ್ಯಾಟ್ಸ್ಮನ್‌ನ ಹೆಸರನ್ನು ಹೊಸ ಬಗೆಯ ಮಾವಿಗೆ ಇಟ್ಟಿದ್ದೇವೆ' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications