ಧೋನಿಗೆ ಉತ್ತರಾಧಿಕಾರಿ ಎಂದು ಸೆಹ್ವಾಗ್ ಹೆಸರಿಸಿದ್ದು ಯಾರನ್ನು ಗೊತ್ತಾ!

ಐಪಿಎಲ್ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದೆ. ಆಡಿದ ಆರು ಪಂದ್ಯಗಳಲ್ಲಿ ಧೋನಿ ಪಡೆ ಐದು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಮಧ್ಯೆ ನಿವೃತ್ತಿಯ ಅಂಚಿನಲ್ಲಿರುವ ಧೋನಿಗೆ ಉತ್ತರಾಧಿಕಾರಿ ಯಾರು ಎಂಬ ಚರ್ಚೆಗಳು ಕೂಡ ನಡೆಯುತ್ತಿದೆ. ಇದಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಚ್ಚರಿಯ ಹೆಸರನ್ನು ಸೂಚಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲಿ ತಂಡದ ಆರಂಭಿಕರ ಕೊಡುಗೆ ಅತ್ಯುತ್ತಮವಾಗಿದೆ. ಫಾಫ್ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಜೋಡಿ ಸತತವಾಗಿ ಉತ್ತಮ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದಾರೆ. ಈ ಪ್ರದರ್ಶನವನ್ನು ಆಧಾರವಾಗಿಟ್ಟುಕೊಂಡು ಸೆಹ್ವಾಗ್ ಧೋನಿಗೆ ಉತ್ತರಾಧಿಕಾರಿಯನ್ನು ಸೂಚಿಸಿದ್ದಾರೆ.
ಹಾಗಾದರೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೆಸರಿಸಿದ ಆ ಆಟಗಾರ ಯಾರು? ಮುಂದೆ ಓದಿ..

ನಿವೃತ್ತಿಯಂಚಿನಲ್ಲಿ ಧೋನಿ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಳೆದ ವರ್ಷ ನಿವೃತ್ತಿಯನ್ನು ಘೋಷಿಸಿರುವ ಎಂಎಸ್ ಧೋನಿ ಐಪಿಎಲ್‌ಗೂ ನಿವೃತ್ತಿ ಹೇಳುವ ಅಂಚಿನಲ್ಲಿದ್ದಾರೆ. ಕಳೆದ ಬಾರಿಯ ಆವೃತ್ತಿಯ ನಂತರ ಈ ಬಾರಿಯ ಐಪಿಎಲ್ ಆವೃತ್ತಿಗೆ ಧೋನಿ ಆಡುವುದು ಅನುಮಾನ ಎಂಬ ಮಾತುಗಳು ವ್ಯಕ್ತವಾಗಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಧೋನಿ ತಾನು ಮುಂದಿನ ಪಂದ್ಯದಲ್ಲಿ ಆಡುವುದು ಖಚಿತ ಎಂದಿದ್ದರು. ಈಗ ಮುಂದಿನ ಆವೃತ್ತಿಯಲ್ಲಿ ಧೋನಿ ಪಾಲ್ಗೊಳ್ಳುತ್ತಾರಾ ಎಂಬುದು ಅನುಮಾನವಾಗುಳಿದಿದೆ.

ಜಡೇಜಾ ಹೆಸರು ಚಾಲ್ತಿಯಲ್ಲಿ
ಧೋನಿ ನಾಯಕತ್ವದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಸುಲಭವಾಗು ಕೇಳಿ ಬರುವ ಹೆಸರು ರವೀಂದ್ರ ಜಡೇಜಾ. ಅನುಭವ ಹಾಗೂ ಪ್ರದರ್ಶನ ಜೊತೆಗೆ ಆಟಗಾರರ ಜೊತೆಗಿನ ಹೊಂದಾಣಿಕೆಯ ಕಾರಣದಿಂದಾಗಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿದೆ.

ಸೆಹ್ವಾಗ್ ಹೆಸರಿಸಿದ್ದು ಯಾರನ್ನು
ಆದರೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೆಸರಿಸಿದ್ದು ಜಡೇಜಾ, ರೈನಾ ಯಾರನ್ನೂ ಅಲ್ಲ. ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿರುವ ಋತುರಾಜ್ ಗಾಯಕ್ವಾಡ್ ಅವರನ್ನು. ಧೋನಿಯ ನಂತರ ಗಾಯಕ್ವಾಡ್ ನಾಯಕತ್ವಕ್ಕೆ ಸೂಕ್ತ ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

ನಾಯಕನಾಗುವ ಅರ್ಹತೆಯಿದೆ
ನಾನು ಆತನನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಆತನ ಆಟನ್ನು ಹತ್ತಿರದಿಂದ ನೋಡಿಲ್ಲ. ಆದರೆ ಮುಮದಿನ ಕೆಲ ವರ್ಷಗಳ ಕಾಲ ಆತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದರೆ ನಾಯಕನಾಗುವ ಸಾಮರ್ಥ್ಯವನ್ನು ಪಡೆಯುತ್ತಾರೆ" ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications