Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡ ಚಿತ್ರದ ಟೀಸರ್ ಮೆಚ್ಚಿ ತನ್ನ ನೆಚ್ಚಿನ ಸ್ನೇಹಿತನನ್ನು ಹೊಗಳಿದ ವಿರೇಂದ್ರ ಸೆಹ್ವಾಗ್

Virender Sehwag released the english teaser of Sudeeps Vikrant Rona movie

ಕ್ರಿಕೆಟಿಗರಿಗೂ ಸಿನಿಮಾರಂಗಕ್ಕೂ ಅದೇನೋ ಬಿಡಿಸಲಾರದ ನಂಟಿದೆ. ಕೆಲ ಕ್ರಿಕೆಟಿಗರು ನಟಿಯರನ್ನು ಮದುವೆಯಾಗಿರುವ ಹಾಗೂ ಪ್ರೀತಿಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಇನ್ನು ಕೆಲ ಕ್ರಿಕೆಟಿಗರು ಸಿನಿಮಾರಂಗದ ನಟಿ ಮತ್ತು ನಟರ ಜೊತೆ ಸ್ನೇಹವನ್ನು ಹೊಂದಿದ್ದು, ಆಗಾಗ ಒಟ್ಟಿಗೆ ಕಾಣಿಸಿಕೊಂಡದ್ದೂ ಇದೆ. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕೆಲ ಮಾಜಿ ಕ್ರಿಕೆಟಿಗರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನ ಮುಗಿದ ನಂತರ ಸಿನಿಮಾಗಳಲ್ಲಿ ಹಚ್ಚಿ ಅಭಿನಯಿಸಿದ್ದೂ ಸಹ ಇದೆ. ಇನ್ನು ನೆಚ್ಚಿನ ಸ್ನೇಹಿತರ ಚಲನಚಿತ್ರಗಳಿಗೆ ಕ್ರಿಕೆಟಿಗರು ಶುಭ ಕೋರುವುದು ಹಾಗೂ ಆ ಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಪ್ರಚಾರ ಮಾಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ.

ಇನ್ನು ಈ ರೀತಿಯ ಚಟುವಟಿಕೆಗಳು ಕೇವಲ ಬಾಲಿವುಡ್‌ಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ದಕ್ಷಿಣ ಭಾರತ ಚಿತ್ರರಂಗ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿಯೂ ಸದ್ದು ಮಾಡುತ್ತಿದ್ದು, ಉತ್ತರ ಭಾರತದ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳನ್ನು ನೋಡಿ, ಗುರುತಿಸಿ ಹೊಗಳಲು ಆರಂಭಿಸಿದ್ದಾರೆ. ಈ ಸಾಲಿಗೆ ಇದೀಗ ಭಾರತದ ಮಾಜಿ ಕ್ರಿಕೆಟಿಗ, ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಕೂಡ ಸೇರಿಕೊಂಡಿದ್ದು, ಕನ್ನಡ ಚಲನಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಕುರಿತಾಗಿ ಟ್ವೀಟ್ ಮಾಡಿದ್ದಾರೆ.

ಹೌದು, ಇಂದು ( ಏಪ್ರಿಲ್ 2 ) ಯುಗಾದಿ ಹಬ್ಬದ ಪ್ರಯುಕ ಕನ್ನಡ ನಟ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಲನಚಿತ್ರ ಬಿಡುಗಡೆಯ ದಿನಾಂಕದ ಘೋಷಣೆಯ ವಿಶೇಷವಾದ ಟೀಸರ್‌ವೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಈ ಚಿತ್ರದ ಇಂಗ್ಲಿಷ್ ಟೀಸರ್ ನೋಡಿ ಟೀಸರ್‌ಗೆ ಮನಸೋತ ಸೆಹ್ವಾಗ್ ಟೀಸರ್‌ನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ಬ್ಲಾಕ್‌ಬಸ್ಟರ್ ಬರ್ತಾ ಇದೆ, ವಾಹ್ ವಿಕ್ರಾಂತ್ ರೋಣ ವಾಹ್, ನನ್ನ ಗೆಳೆಯ ಕಿಚ್ಚ ಸುದೀಪ್ ಅವರನ್ನು ಬೆಳ್ಳಿತೆರೆಯ ಮೇಲೆ ಕಾಣಲು ಸಿದ್ಧರಾಗಿ, ಚಿತ್ರ ಜುಲೈ 28ರಂದು ವಿಶ್ವದಾದ್ಯಂತ 3ಡಿಯಲ್ಲಿ ಬಿಡುಗಡೆಯಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಇನ್ನು ವಿರೇಂದ್ರ ಸೆಹ್ವಾಗ್ ಮಾಡಿರುವ ಈ ಟ್ವೀಟನ್ನು ಕಿಚ್ಚ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

Story first published: Saturday, April 2, 2022, 20:14 [IST]
Other articles published on Apr 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+