'ಹಸು ಪ್ರಿಯ' ಫೆಡರರ್ ಬಗ್ಗೆ ಸೆಹ್ವಾಗ್ ಟ್ವೀಟ್
ಬೆಂಗಳೂರು, ಜುಲೈ 19:ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಬಿಸಿಸಿಐ ಆಯ್ಕೆಯ ಹೊಸ ಕೋಚ್ ಬಗ್ಗೆ ಏನು ಹೇಳದೆ ಇರಬಹುದು. ಆದರೆ, ಹಾಲಿ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ಬಗ್ಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಸ್ವಿಸ್ ತಾರೆ ಫೆಡರರ್ ಅವರನ್ನು ಹಸು ಪ್ರಿಯ ಎಂದು ಕರೆದಿದ್ದಾರೆ. ರೋಜರ್ ಫೆಡರರ್ ರ ಮೂರು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಮೂರು ಫೋಟೋಗಳಲ್ಲಿಯೂ ಫೆಡರರ್ ಜೊತೆ ಹಸುವಿದೆ. ಎರಡು ಬಾರಿ ಫೆಡರರ್ ಅವರಿಗೆ ಟೆನಿಸ್ ಪ್ರಶಸ್ತಿ ಜತೆಗೆ ಹಸು ಬಳುವಳಿಯಾಗಿ ಸಿಕ್ಕಿದ್ದು ಎಂಬುದು ವಿಶೇಷ.

ಒಂದು ಫೋಟೋದಲ್ಲಿ ಹಸುವಿನ ಹಾಲು ಕರೆಯುವ ಪ್ರಯತ್ನದಲ್ಲಿದ್ದಾರೆ ಫೆಡರರ್ ಸಕತ್ ಖುಷಿಯಲ್ಲಿದ್ದಾರೆ.
8ನೇ ಬಾರಿ ವಿಂಬಲ್ಡನ್ ಹಾಗೂ 19ನೇ ಗ್ರ್ಯಾನ್ ಸ್ಲಾಮ್ ಗೆದ್ದು ದಾಖಲೆ ಬರೆದ ರೋಜರ್ ಫೆಡರರ್ ಅವರ ಬಗ್ಗೆ ಸೆಹ್ವಾಗ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
2003ರಲ್ಲಿ ಫೆಡರರ್ ಅವರು ಸ್ವಿಸ್ ಓಪನ್ ಟೆನಿಸ್ ಟೂರ್ನಮೆಂಟ್ ಗೆದ್ದಾಗ ಅವರಿಗೆ ಜೂಲಿಯೆಟ್ ಹೆಸರಿನ ಹಸುವನ್ನು ಆಯೋಜಕರು ನೀಡಿದ್ದರು.
2013ರಲ್ಲಿ ಡಿಸೈರೀ ಹೆಸರಿನ ಮತ್ತೊಂದು ಹಸುವನ್ನು ಫೆಡರರ್ ಅವರು ಉಡುಗೊರೆಯಾಗಿ ಪಡೆದುಕೊಂಡಿದ್ದರು.
ಇದೆಲ್ಲವೂ ನೆನಪಿನಲ್ಲಿಟ್ಟುಕೊಂಡು ಸೆಹ್ವಾಗ್ ಅವರು, ಫೆಡರರ್ ಅವರನ್ನು Greatest of All Time (GOAT) ಎಂದು ಕರೆದು, ಜತೆಗೆ ಎರಡು ಹಸುಗಳಿರುವ ಚಿತ್ರಗಳ ಸಮೇತ ಟ್ವೀಟ್ ಮಾಡಿದ್ದಾರೆ
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications