WTC finalನ ವಿಜೇತರ ಹೆಸರಿಸಿದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಮುಂಬರಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿನ ವಿಜೇತರನ್ನು ಹೆಸರಿಸಿದ್ದಾರೆ. ಫೈನಲ್ ಟೆಸ್ಟ್‌ನ ಆರಂಭದಲ್ಲೇ ವಿರಾಟ್ ಕೊಹ್ಲಿ ಪಡೆ ಗೆಲ್ಲುವ ಫೇವರಿಟ್ ತಂಡವಾಗಿ ಗಮನ ಸೆಳೆಯಲಿದೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ತಂಡ ಸುದೀರ್ಘ ಕಾಲದಿಂದ ಗುಣಮಟ್ಟದ ಕ್ರಿಕೆಟ್ ಆಡುತ್ತಿದೆ. ಹೀಗಾಗಿ ಎಂಥಾ ಕಷ್ಟದ ಸಂದರ್ಭದಲ್ಲೂ ವಿರಾಟ್ ಕೊಹ್ಲಿ ಪಡೆದ ಟಾಪ್ ತಂಡವಾಗಿ ಮಿನುಗಲಿದೆ ಎಂದಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಜೂನ್ 18-22ರ ವರೆಗೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸ್ಪರ್ಧಿಸಲಿದೆ.
'ಎರಡೂ ತಂಡಗಳೂ ಬಲಿಷ್ಠವಾದುವೆ. ಆದರೆ ಭಾರತೀಯ ತಂಡ ಪಂದ್ಯದ ಆರಂಭದಿಂದಲೂ ಫೇವರಿಟ್ ತಂಡವಾಗಿ ಕಾಣಿಸಲಿದೆ. ಯಾಕೆಂದರೆ ತಂಡ ಆಡಿರುವ ರೀತಿಯಿಂದ. ಇದು ಕೆಲ ವರ್ಷಗಳ ಹಿಂದಿನ ಪಂದ್ಯದ ಬಗ್ಗೆ ನಾನು ಹೇಳುತ್ತಿಲ್ಲ, ಬಹಳಷ್ಟು ಕಾಲದ ಕತೆ ಹೇಳುತ್ತಿದ್ದೇನೆ,' ಎಂದು ಲಕ್ಷ್ಮಣ್ ಹೇಳಿದ್ದಾರೆ.
'ಹಿಂದಿನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗೆದ್ದು ಬಂದಂತೆ ಎಂಥಾ ಕಷ್ಟದ ಸನ್ನಿವೇಶವಿದ್ದರೂ ಅದನ್ನು ಭಾರತ ದಾಟಿ ಬರುತ್ತಾರೆ,' ಎಂದು ಭಾರತ ತಂಡದ ಬಗ್ಗೆ ಲಕ್ಷ್ಮಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಳಿಕ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications