ಆಯ್ಕೆಗಾರರು ಬಾಗಿಲು ತೆರೆಯದಿದ್ದರೆ ಮುರಿದು ತೆರೆಯಿರಿ: ಸೂರ್ಯ ಯುವಕರಿಗೆ ಮಾದರಿ ಎಂದ ಲಕ್ಷ್ಮಣ್

ಮಾಜಿ ಟೀಮ್ ಇಂಡಿಯಾ ಆಟಗಾರ ವಿವಿಎಸ್ ಲಕ್ಷ್ಮಣ್ ಮುಂಬೈ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರನ್ನು ಪ್ರಶಂಸಿಸಿದ್ದಾರೆ. ಆತ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಸ್ಥಾನವನ್ನು ಪಡೆಯಲು ಅರ್ಹ ಆಟಗಾರ ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್. ಕಳೆದ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದರು.
ಸೂರ್ಯಕುಮಾರ್ ಯಾದವ್ ದೇಶೀಯ ಕ್ರಿಕೆಟ್‌ನಲ್ಲೂ ಮುಂಬೈ ತಂಡದ ಪರವಾಗಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಈ ಎಲ್ಲಾ ಪ್ರದರ್ಶನಗಳ ಕಾರಣದಿಂದಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಸ್ಟಾರ್‌ಸ್ಪೋರ್ಟ್ಸ್‌ನ ಗೇಮ್ ಪ್ಲಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ 30ರ ಹರೆಯದ ಸೂರ್ಯಕುಮಾರ್ ಯಾದವ್ ಯುವ ಆಟಗಾರರಿಗೆ ಮಾದರಿ ಎಂದು ಹೇಳಿದ್ದಾರೆ.

ಎಲ್ಲರೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ನಿರೀಕ್ಷೆಯಲ್ಲಿರುತ್ತಾರೆ
"ಆತ ಭಾರತ ತಂಡಕ್ಕೆ ಆಯ್ಕೆಯಾಗಲು ಅರ್ಹವಾದ ಆಟಗಾರ. ನನ್ನ ಪ್ರಕಾರ ಆತ ಯುವ ಆಟಗಾರರಿಗೆ ಶ್ರೇಷ್ಠವಾದ ಮಾದರಿಯಾಗಿದ್ದಾರೆ. ವಿಶೇಷವಾಗಿ ಭಾರತದಲ್ಲಿ. ಯಾಕೆಂದರೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ರನ್‌ಗಳಿಸುವ ಎಲ್ಲಾ ಆಟಗಾರರು ಕೂಡ ಟೀಮ್ ಇಂಡಿಯಾದಲ್ಲಿ ಸ್ಥಾನಪಡೆಯುವ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಅದು ಕಷ್ಟ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.

ಉತ್ತಮ ಪ್ರದರ್ಶನದ ಮೂಲಕ ಸ್ಥಾನ
"ಸಾಕಷ್ಟು ಉತ್ಕೃಷ್ಟದರ್ಜೆಯ ಗುಣಮಟ್ಟ, ಉತ್ತಮ ಪ್ರತಿಭೆ, ಉತ್ತಮವಾದ ಸ್ಪರ್ಧೆಗಳು ಇದೆ. ಆದರೆ ಸೂರ್ಯಕುಮಾರ್ ಯಾದವ್ ಏನು ಮಾಡಿದರು? ಪ್ರಥಮದರ್ಜೆ ಕ್ರಿಕೆಟ್‌ಗೆ ಮರಳಿದರು, ಮುಂಬೈ ಪರವಾಗಿ ರನ್‌ಗಳಿಸಲು ಆರಂಭಿಸಿದರು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಯಾವಾಗೆಲ್ಲಾ ಅವಕಾಶಗಳು ದೊರೆಯಿತೋ ಆಗೆಲ್ಲಾ ಅವರು ಅತ್ಯುತ್ತಮ ರನ್‌ಗಳಿಸಿದರು. ಕಠಿಣ ಸಂದರ್ಭಗಳಲ್ಲಿ ಪ್ರದರ್ಶನವನ್ನು ನೀಡಿ ತಂಡವನ್ನು ಗೆಲ್ಲಿಸಿದ್ದಾರೆ. ಇದನ್ನೇ ಆಟಗಾರರಿಂದ ನಿರೀಕ್ಷಿಸಲಾಗುತ್ತಿದೆ" ಎಂದಿದ್ದಾರೆ.

ಬಾಗಿಲು ಮುರಿದು ಸ್ಥಾನ ಪಡೆಯಿರಿ
"ಈ ರೀತಿಯ ಸಂದರ್ಭಕ್ಕಾಗಿ ನನ್ನ ಕೋಚ್ ಹಿಂದೆಯೇ ಮಾತೊಂದನ್ನು ಹೇಳಿದ್ದರು. 'ಆಯ್ಕೆಗಾರರು ಬಾಗಿಲು ತೆರೆಯದಿದ್ದರೆ ಮುರಿದು ತೆರೆಯಿರಿ' ಅದನ್ನು ನೀಡು ನಿಮ್ಮ ಪ್ರದರ್ಶನದ ಮೂಲಕ ಮಾತ್ರವೇ ಮಾಡಲು ಸಾಧ್ಯ. ಆತ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುತ್ತಾರೋ ಗೊತ್ತಿಲ್ಲ. ಆದರೆ ಆತ ಆ ಸ್ಥಾನಕ್ಕೆ ಅತ್ಯಂತ ಅರ್ಹವಾದ ಆಟಗಾರ" ಎಂದು ಸೂರ್ಯಕುಮಾರ್ ಯಾದವ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications