ಸೋಮವಾರ, ಫೆಬ್ರವರಿ 19ರಂದು ಶ್ರೀಲಂಕಾ ತಂಡದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಅವರು ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್ ಎನಿಸಿಕೊಂಡರು.
ವನಿಂದು ಹಸರಂಗ ಅವರು ದಂಬುಲ್ಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ನಜಿಬುಲ್ಲಾ ಜದ್ರಾನ್ ಅವರನ್ನು 9 ರನ್‌ಗಳಿಗೆ ಔಟ್ ಮಾಡಿದಾಗ ಈ ಸಾಧನೆ ಮಾಡಿದರು.

ವನಿಂದು ಹಸರಂಗ ತನ್ನ 63ನೇ ಟಿ20 ಪಂದ್ಯದಲ್ಲಿ 100 ವಿಕೆಟ್‌ಗಳ ದಾಖಲೆಯನ್ನು ತಲುಪಿದರು. ಅಫ್ಘಾನಿಸ್ತಾನದ ರಶೀದ್ ಖಾನ್ ಮಾತ್ರ ಶ್ರೇಷ್ಠ ಪಟ್ಟಿಯಲ್ಲಿ ಶ್ರೀಲಂಕಾ ಸ್ಪಿನ್ನರ್‌ಗಿಂತ ಅಗ್ರಸ್ಥಾನದಲ್ಲಿದ್ದಾರೆ.
ರಶೀದ್ ಖಾನ್ 2021ರಲ್ಲಿ 53 ಪಂದ್ಯಗಳಲ್ಲಿ 100 ಟಿ20 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಟಿ20 ಸ್ವರೂಪದಲ್ಲಿ 100 ವಿಕೆಟ್‌ಗಳನ್ನು ಪಡೆದ ಶ್ರೀಲಂಕಾದ ಎರಡನೇ ಆಟಗಾರ ವನಿಂದು ಹಸರಂಗ.

ಈ ಮೊದಲು ಶ್ರೀಲಂಕಾ ತಂಡದ ಮಾಜಿ ನಾಯಕ ಲಸಿತ್ ಮಾಲಿಂಗ ಈ ಸಾಧನೆ ಮಾಡಿದ ಮೊದಲ ಲಂಕಾ ಆಟಗಾರ. ಅವರು 76 ಟಿ20 ಪಂದ್ಯಗಳಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಿದ್ದರು.
ಮಾರ್ಕ್ ಅಡೈರ್ (72 ಪಂದ್ಯ) ಮತ್ತು ಇಶ್ ಸೋಧಿ (78 ಪಂದ್ಯ) 80ಕ್ಕಿಂತ ಕಡಿಮೆ ಪಂದ್ಯಗಳಲ್ಲಿ 100 ಟಿ20 ವಿಕೆಟ್‌ಗಳನ್ನು ಕಬಳಿಸಿದ ಇತರ ಬೌಲರ್‌ಗಳಾಗಿದ್ದಾರೆ.
ದಂಬುಲ್ಲಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ತಂಡವನ್ನು ಮುನ್ನಡೆಸುತ್ತಿರುವಾಗ ವನಿಂದು ಹಸರಂಗ ಅವರಿಂದ ಈ ಸಾಧನೆ ಬಂದಿದೆ. ಈ ಪಂದ್ಯವನ್ನು ಆತಿಥೇಯ ಶ್ರೀಲಂಕಾ ತಂಡ 72 ರನ್‌ಗಳಿಂದ ಗೆದ್ದಿತು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಸದೀರ ಸಮರವಿಕ್ರಮ 42 ಎಸೆತಗಳಲ್ಲಿ 51 ರನ್ ಗಳಿಸಿದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 187 ರನ್ ಕಲೆಹಾಕಿತು. ಕೊನೆಯಲ್ಲಿ ಏಂಜೆಲೊ ಮ್ಯಾಥ್ಯೂಸ್ 22 ಎಸೆತಗಳಲ್ಲಿ ಅಜೇಯ 42 ರನ್ ಬಾರಿಸಿದರು. ವನಿಂದು ಹಸರಂಗ ಕೂಡ 9 ಎಸೆತಗಳಲ್ಲಿ 22 ರನ್ ಗಳಿಸಿದರು.
ಪ್ರತ್ಯುತ್ತರವಾಗಿ ಅಫ್ಘಾನಿಸ್ತಾನ 17 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲೌಟ್ ಆಯಿತು. ಏಂಜೆಲೋ ಮ್ಯಾಥ್ಯೂಸ್, ಬಿನೂರ ಫೆರ್ನಾಂಡೋ, ಮಥೀಶ ಪತಿರಾನ ಮತ್ತು ತಲಾ ಎರಡು ವಿಕೆಟ್ ಪಡೆದರು.
14ನೇ ಓವರ್‌ನಲ್ಲಿ ನಜಿಬುಲ್ಲಾ ಝದ್ರಾನ್ ಅವರನ್ನು ಬೌಲ್ಡ್ ಮಾಡುವ ಮೂಲಕ ವನಿಂದು ಹಸರಂಗ ತಮ್ಮ 63ನೇ ಪಂದ್ಯದಲ್ಲಿ 100 ಟಿ20 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು.
ದಂಬುಲ್ಲಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 72 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಶ್ರೀಲಂಕಾ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಮೂರನೇ ಟಿ20 ಪಂದ್ಯವು ಬುಧವಾರ, ಫೆಬ್ರವರಿ 21ರಂದು ದಂಬುಲ್ಲಾದಲ್ಲಿ ನಡೆಯಲಿದೆ.