'ಮಂಕಡಿಂಗ್' ಅಶ್ವಿನ್‌ನ ವಿಭಿನ್ನವಾಗಿ ಅಣಕಿಸಿದ ವಾರ್ನರ್: ವಿಡಿಯೋ

ನವದೆಹಲಿ, ಏಪ್ರಿಲ್ 9: ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ವಿಧಾನದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್ ಔಟ್ ಮಾಡಿದ್ದು ವಿವಾದಕ್ಕೀಡಾಗಿತ್ತು. ಅದೇ ಅಶ್ವಿನ್ ಅವರನ್ನು ವಿಭಿನ್ನ ರೀತಿಯಲ್ಲಿ ಅಣಕಿಸಿ ಡೇವಿಡ್ ವಾರ್ನರ್ ಗಮನ ಸೆಳೆದಿದ್ದಾರೆ.
ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ
ಮೊಹಾಲಿಯಲ್ಲಿ ಸೋಮವಾರ (ಏಪ್ರಿಲ್ 8) ನಡೆದ ಐಪಿಎಲ್ 22 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ ವಾರ್ನರ್ ಚಾಲಾಕಿತನ ಪ್ರದರ್ಶಿಸಿದ್ದು ಕಂಡುಬಂತು. 6.1ನೇ ಓವರ್‌ನಲ್ಲಿ ಅಶ್ವಿನ್ ಚೆಂಡು ಎಸೆಯುವಾಗ ಸ್ಟ್ರೈಕ್‌ನಲ್ಲಿ ವಿಜಯ್ ಶಂಕರ್ ಇದ್ದರು. ಆಗ ವಾರ್ನರ್, ಅಶ್ವಿನ್ ಎದುರು 'ನೀನು ಚಾಪೆ ಕೆಳಗೆ ನುಗ್ಗಿದ್ರೆ ನಾನು ರಂಗೋಲಿ ಕೆಳಗೆ ನುಗ್ತೀನಿ' ಅನ್ನೋ ಹಾಗೆ ನಡಕೊಂಡಿದ್ದರು.
ಅಶ್ವಿನ್ ಚೆಂಡು ಎಸೆಯುವಾಗ ಡೇವಿಡ್ ಕ್ರೀಸ್ ದಾಟದೆ ಅಶ್ವಿನ್ ಅವರನ್ನು ಅಣಕಿಸಿದರೋ ಎಂಬಂತ ದೃಶ್ಯ ಸೆರೆಯಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಟ್ವಿಟರ್ ಅಕೌಂಟ್‌ನಲ್ಲಿ ಈ ವಿಡಿಯೋವನ್ನು ಹಾಕಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬಿರುಸಾರಿ ಓಡಾಡುತ್ತಿದೆ.
ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಜೇಯ 70 ರನ್ ನೆರವಿನೊಂದಿಗೆ ಹೈದರಾಬಾದ್ 20 ಓವರ್‌ಗೆ 4 ವಿಕೆಟ್ ಕಳೆದು 150 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಪಂಜಾಬ್ ಕೆಎಲ್ ರಾಹುಲ್ ಅಜೇಯ 71 ರನ್, ಮಾಯಾಂಕ್ ಅಗರ್ವಾಲ್ 55 ರನ್ ಬೆಂಬಲದೊಂದಿಗೆ 19.5 ಓವರ್‌ಗೆ 4 ವಿಕೆಟ್ ಕಳೆದು 151 ರನ್ ಬಾರಿಸುವುದರೊಂದಿಗೆ 6 ವಿಕೆಟ್ ಗೆಲುವನ್ನಾಚರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications