Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದಿಂದ ಡಿಜಿಟಲ್‌ ಸ್ಟ್ರೈಕ್‌: ಶೋಯೆಬ್ ಅಖ್ತರ್ ಚಾನೆಲ್‌ ಬ್ಯಾನ್‌

ಪಾಕಿಸ್ತಾನದ ಮಾಜಿ ಬೌಲರ್‌ ಶೋಯಿಬ್ ಅಕ್ತರ್‌ ಅವರ ಯೂಟ್ಯೂಬ್ ಚಾನೆಲ್‌ ಸೋಮವಾರ ಮುಂಜಾನೆಯಿಂದ ಓಪನ್ ಆಗುತ್ತಿಲ್ಲ. ಭಾರತವು ಹಲವಾರು ಪಾಕಿಸ್ತಾನಿ ಯೂಟ್ಯೂಬ್‌ ಖಾತೆಗಳನ್ನು ನಿಷೇಧಿಸಿದೆ. ಅಭಿಮಾನಿಗಳು ಈ ಯೂಟ್ಯೂಬ್‌ ಹಾಗೂ ವೆಬ್‌ಸೈಟ್‌ ಹುಡುಕಿದಾಗ ಸಿಗುತ್ತಿಲ್ಲ. ಅಭಿಮಾನಿಗಳ ಪಾಕಿಸ್ತಾನದ ಯೂಟ್ಯೂಬ್‌ ಚಾನೆಲ್‌ಗಳ ಹಳೆಯ ವಿಡಿಯೋಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿವೆ. ಆದರೆ ಯಾವುದೇ ಹೊಸ ವಿಡಿಯೋಗಳು ಕಾಣುತ್ತಿಲ್ಲ.

ಶೋಯಿಬ್ ಅಖ್ತರ್‌ ಅವರನ್ನು ಭಾರತದಲ್ಲಿ ಹೆಚ್ಚು ಹಿಂಬಾಲಿಸುವ ಆಟಗಾರ. ಭಾರತೀಯರು ಪಾಕ್‌ ಸೆಲೆಬ್ರಿಟಿಗಳನ್ನು ಹಿಂಬಾಲಿಸುತ್ತಾರೆ. ಈ ಪಟ್ಟಿಯಲ್ಲಿ ಶೋಯೆಬ್‌ಗೂ ಸ್ಥಾನ. ಇವರು ತಮ್ಮ ಕ್ರೀಡಾ ಅನುಭವವನ್ನು ವಿವಿಧ ಮಾಧ್ಯಮಗಳಲ್ಲಿ ಭಾಗವಹಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಬರೀ ಶೋಯೆಬ್‌ ಅಖ್ತರ್ ಅಷ್ಟೇ ಅಲ್ಲ ಇನ್ನು ಹಲವು ಮಾಜಿ ಆಟಗಾರರ ಚಾನೆಲ್‌ಗಳನ್ನು ಬಂದಲಾಗಿದೆ.

Was Shoaib Akhtar s YouTube Channel Banned in India After the Pahalgam Attack

ಶೋಯೆಬ್‌ ಬಿಟ್ಟಂತೆ ಮಾಜಿ ಕ್ರಿಕೆಟಿಗರಾದ ರಶೀದ್ ಲತೀಫ್ ಮತ್ತು ಬಸಿತ್ ಅಲಿಯಂತಹವರ ಯೂಟ್ಯೂಬ್ ಚಾನೆಲ್‌ಗಳನ್ನು ಅಭಿಮಾನಿಗಳು ಓಪನ್‌ ಮಾಡಲು ಆಗುತ್ತಿಲ್ಲ. ಭಾರತ ಸರ್ಕಾರ ಬಿಡುಗಡೆ ಮಾಡಿದ ನಿಷೇಧಿತ ಚಾನೆಲ್‌ ಪಟ್ಟಿಯಲ್ಲಿ ಪಾಕ್‌ ಮಾಜಿ ಆಟಗಾರರ ಯೂಟ್ಯೂಬ್ ಚಾನೆಲ್‌ಗಳು ಸಹ ಸೇರಿವೆ. ಇನ್ನು ಈ ಮಾಜಿ ಆಟಗಾರರ ಕೆಲವು ಹಿಂದಿನ ವಿಡಿಯೋಗಳು ಮಾತ್ರ ಪ್ಲೇ ಆಗುತ್ತಿವೆ. ಇನ್ನು ಶೋಯೆಬ್‌ ಅಖ್ತರ್ ಅವರ ಚಾನೆಲ್‌ ಕಾಣಿಸುತ್ತಿಲ್ಲವೋ, ಅಥವಾ ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿದೆಯೋ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.

ಎಷ್ಟು ಯೂಟ್ಯೂಬ್‌ ಚಾನೆಲ್ ಬ್ಯಾನ್‌?

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಗೃಹಸಚಿವಾಲಯ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಗೃಹ ಸಚಿವಾಲಯದ ಅನುಸಾರ ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಹೇಳಿದೆ. ಪಾಕ್‌ನ ಯೂಟ್ಯೂಬ್‌ ಚಾನೆಲ್‌ಗಳ ಮೇಲೆ ಬ್ಯಾನ್‌ ಅಸ್ತ್ರವನ್ನು ಪ್ರಯೋಗಿಸಿದೆ. ದ್ವೇಷ ಮತ್ತು ಪ್ರಚಾರ ಹರಡುತ್ತಿದ್ದ 16 ಯೂಟ್ಯೂಬರ್‌ಗಳನ್ನು ಸರ್ಕಾರ ನಿಷೇಧಿಸಿದೆ. ಪಟ್ಟಿಯಲ್ಲಿ 3 ಪಾಕಿಸ್ತಾನಿ ಕ್ರಿಕೆಟಿಗರ ಹೆಸರುಗಳೂ ಸೇರಿವೆ. ಡಾನ್ ನ್ಯೂಸ್, ಎಆರ್‌ವೈ ನ್ಯೂಸ್, ಸಮಾ ಟಿವಿ ಮತ್ತು ಜಿಯೋ ನ್ಯೂಸ್‌ನಂತಹ ಹಲವು ಸುದ್ದಿ ವಾಹಿನಿಗಳ ಆನ್‌ಲೈನ್ ಸ್ಟ್ರೀಮಿಂಗ್ ಅನ್ನು ಸಹ ನಿಷೇಧಿಸಲಾಗಿದೆ.

ಏನೆಲ್ಲಾ ಕ್ರಮಗಳನ್ನು ಕೈಗೊಂಡಿದೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವು ಶಿಸ್ತಿನ ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ಆರಂಭದಲ್ಲಿ ಸರ್ಕಾರ ಎದುರಾಳಿಗೆ ಪೆಟ್ಟು ನೀಡುವ ಕಾರ್ಯವನ್ನು ಮಾಡುತ್ತಿದೆ. ಪಹಲ್ಗಾಮ್ ಅಟ್ಯಾಕ್‌ ಹಿನ್ನೆಲೆ, ಸರ್ಕಾರ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಭಾರತದಲ್ಲಿರುವ ಎಲ್ಲ ಪಾಕ್‌ ನಾಗರಿಕರ ವೀಸಾಗಳನ್ನು ರದ್ದುಗೊಳಿಸಿದೆ.

ಎಲ್ಲಾ ಪಾಕಿಸ್ತಾನಿ ನಾಗರಿಕರ ವೀಸಾಗಳನ್ನು ರದ್ದುಪಡಿಸಲಾಗಿದೆ. ಅಟ್ಟಾರಿ ಗಡಿಯನ್ನು ತಕ್ಷಣವೇ ಮುಚ್ಚಲಾಗಿದೆ. ದಾಳಿಯ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಈ ನಿರ್ಧಾರವನ್ನು ತೆಗೆದುಕೊಂಡಿತು.

Story first published: Monday, April 28, 2025, 17:28 [IST]
Other articles published on Apr 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+