ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಆಟಗಾರರು ತಮ್ಮ ತಮ್ಮ ತಂಡಗಳ ಕ್ಯಾಂಪ್ ಸೆರಿಕೊಂಡಿದ್ದಾರೆ. ಮಾರ್ಚ್ 22 ರಿಂದ ಆರಂಭವಾಗುವ ಐಪಿಎಲ್, 2 ತಿಂಗಳುಗಳ ಕಾಲ ನಡೆಯಲಿದೆ. ಈ ವೇಳೆ ಎಲ್ಲ ತಂಡಗಳ ಆಟಗಾರರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಆರ್‌ಸಿಬಿ ತಂಡದ ಮಾಜಿ ಆಲ್‌ರೌಂಡರ್ ಒಬ್ಬ ತನ್ನ ತಾಯಿಗೆ ಪ್ರೀತಿಯ ಉಡುಗೊರೆ ನೀಡಿದ್ದಾರೆ. ಈ ಉಡುಗೊರೆ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹಾಗಿದ್ರೆ ಆ ಪ್ಲೇಯರ್? ಅವರ ತಾಯಿಗೆ ನೀಡಿದ ಉಡುಗೊರೆ ಏನು ಎಂಬ ಬಗ್ಗೆ ವಿವರ ಇಲ್ಲಿದೆ.
ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೀಮ್ ಇಂಡಿಯಾದ ಆಟಗಾರರು ಈಗಾಗಲೇ ತಮ್ಮ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ಇದೇ ವೇಳೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಸಾಮಾಜಿಕ ತಾಣದಲ್ಲಿ ಒಂದು ಫೋಟೋ ಹಾಕಿಕೊಂಡಿದ್ದಾರೆ. ಈ ಪೋಟೋ ಈಗ ಸಖತ್ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಸ್ಟಾರ್ ಆಲ್‌ರೌಂಡರ್ ತನ್ನ ತಾಯಿಗೆ ನೀಡಿರುವ ಪ್ರಿತಿಯ ಗಿಫ್ಟ್ ಏನು ಎಂಬುದು ತಿಳಿಯುತ್ತದೆ.

ತಮ್ಮ ತಾಯಿಗೆ ಪ್ರೀತಿಯ ಉಡುಗೊರೆ ನೀಡಿದ ಆಟಗಾರ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್. ಇವರು ತಮ್ಮ ಸಾಮಾಜಿಕ ಖಾತೆಯಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಹಾಕಿರುವ ಹಲವು ಫೋಟೋಗಳಲ್ಲಿ ಆ ಒಂದು ಫೋಟೋ ನಿಜಕ್ಕೂ ಅಭಿಮಾನಿಗಳ ಮನ ಗೆದ್ದಿದೆ. ಈ ಫೋಟದಲ್ಲಿ ಅವರು, ತಮ್ಮ ಎದೆಯ ಮೇಲೆ ತಮ್ಮ ತಾಯಿಯ ಟ್ಯಾಟೋ ಹಾಕಿಸಿಕೊಂಡಿದ್ದು ಕಂಡು ಬಂದಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಕುಟುಂಬ ಕಾರ್ಯಕ್ರಮವೊಂದರಲ್ಲಿ ತೆಗೆದ ಈ ಫೋಟೋದಲ್ಲಿ ವಾಷಿಂಗ್ಟನ್ ಸುಂದರ್ ಸಂಪ್ರದಾಯಿಕ ಉಡುಗೆ ಧರಿಸಿದ್ದಾರೆ. ಈ ವೇಳೆ ಅವರ ಎದೆಯ ಮೇಲೆ ಅವರ ತಾಯಿಯ ಹಚ್ಚೆ ಕಾಣಿಸಿಕೊಂಡಿತು, ಇದು ಅವರ ಜೀವನದಲ್ಲಿ ಕುಟುಂಬದ ಮಹತ್ವವನ್ನು ತೋರಿಸುತ್ತದೆ.
ವಾಶಿಂಗ್ಟನ್ ಸುಂದರ್ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕೆ ಇಳಿಯಲಿದ್ದಾರೆ. ಇವರನ್ನು ಜಿಟಿ 3.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಇವರ ಮೂಲ ಬೆಲೆ 2 ಕೋಟಿ ಆಗಿತ್ತು. ಈಗಾಗಲೇ ಇವುರ ಐಪಿಎಲ್‌ನ 60 ಪಂದ್ಯಗಳನ್ನು ಆಡಿದ್ದು 378 ರನ್ ಸಿಡಿಸಿದ್ದಾರೆ. ಅಲ್ಲದೆ 37 ವಿಕೆಟ್ ಕಬಳಿಸಿದ್ದಾರೆ.
ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ಕುಮಾರ್ ಕುಶಾಗ್ರ, ಅನುಜ್ ರಾವತ್, ಜೋಸ್ ಬಟ್ಲರ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ನಿಶಾಂತ್ ಸಿಂಧು, ರವಿಶ್ರೀನಿವಾಸನ್ ಸಾಯಿ ಕಿಶೋರ್, ಗೆರಾಲ್ಡ್ ಕೋಟ್ಜೀ, ಜಯಂತ್ ಯಾದವ್, ಅರ್ಷದ್ ಖಾನ್, ಕರೀಮ್ ಜನತ್, ಶೆರ್ಫೇನ್ ರುದರ್ಫೋರ್ಡ್, ಮಹಿಪಾಲ್ ಲೊಮ್ರೋರ್, ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಇಶಾಂತ್ ಶರ್ಮಾ, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ಕುಲ್ವಂತ್ ಖೇಜ್ರೋಲಿಯಾ, ಮೊಹಮ್ಮದ್ ಸಿರಾಜ್.