Wasim Akram: ಸ್ವಿಂಗ್ ಸುಲ್ತಾನ್‌ನಿಗೆ ತಮ್ಮ ದೇಶಕ್ಕಿಂತ, ಭಾರತದ ಈ ಬೌಲರ್ ಇಷ್ಟ
ಆಗಸ್ಟ್ 16 ಶುಕ್ರವಾರ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಮ್ ತಮ್ಮ ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ವೇಗದ ಬೌಲರ್ ಬಗ್ಗೆ ಹೇಳಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ಬ್ಯಾಟರ್ ಬಗ್ಗೆಯೂ ಮಾತನಾಡಿದ್ದಾರೆ.
ವಾಸಿಂ ಅಕ್ರಮ್ ಅವರು ತಮ್ಮದೇ ದೇಶದ ವೇಗದ ಬೌಲರ್ ಅನ್ನು ಆಯ್ಕೆ ಮಾಡದಿರುವುದು ಅಚ್ಚರಿ ಮೂಡಿಸಿದೆ. ಶಾಹೀನ್ ಶಾ ಆಫ್ರಿದಿ ಅಥವಾ ನಸೀಮ್ ಶಾ ಅವರಂತಹ ಯುವ ವೇಗಿಗಳನ್ನು ತಮ್ಮ ನೆಚ್ಚಿನ ವೇಗದ ಬೌಲರ್ ಆಗಿ ವಾಸಿಂ ಅಕ್ರಮ್ ಆಯ್ಕೆ ಮಾಡಬಹುದೆಂದು ಕ್ರೀಡಾಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅವರು ಭಾರತದ ವೇಗದ ಬೌಲರ್‌ನನ್ನು ಆಯ್ಕೆ ಮಾಡಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಸ್ವಿಂಗ್ ಸುಲ್ತಾನ್ ವಾಸಿಂ ಅಕ್ರಮ್, 'ನಾನು ಯಾರನ್ನಾದರೂ ಆಯ್ಕೆ ಮಾಡಬೇಕಾದರೆ, ನನ್ನ ದೇಶದ ಜನರು ಬಹುಶಃ ನನ್ನ ಉತ್ತರವನ್ನು ಇಷ್ಟಪಡುವುದಿಲ್ಲ.
ಏಕೆಂದರೆ ನನ್ನ ನೆಚ್ಚಿನ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ. ಅವರು ಎಲ್ಲಾ ಮೂರು ಮಾದರಿಗಳಲ್ಲಿ ಶ್ರೇಷ್ಠ ಬೌಲರ್. ಈ ಕಾರಣದಿಂದಲೇ ನಾನು ಅವರಿಂದ ತುಂಬಾ ಪ್ರಭಾವಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಬುಮ್ರಾ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ಪ್ರಮುಖ ಭಾಗವಾಗಿದ್ದಾರೆ. ಟಿ20 ವಿಶ್ವಕಪ್ ಗೆಲ್ಲುವಲ್ಲಿ ಬುಮ್ರಾ ಮಹತ್ವದ ಪಾತ್ರವಹಿಸಿದ್ದರು. ಟೀಮ್ ಇಂಡಿಯಾಕ್ಕೆ ಈ ಹಿಂದೆಯೂ ಹಲವು ಪಂದ್ಯಗಳನ್ನು ಬುಮ್ರಾ ತಮ್ಮ ಬೌಲಿಂಗ್ ಬಲದಿಂದ ಗೆಲ್ಲಿಸಿಕೊಟ್ಟಿದ್ದಾರೆ.
ಶಾಹೀನ್ ಶಾ ಆಫ್ರಿದಿ ಮತ್ತು ನಸೀಮ್ ಶಾ ಉತ್ತಮ ವೇಗದ ಬೌಲರ್‌ಗಳಾಗಿರಬಹುದು, ಆದರೆ ಜಸ್ಪ್ರೀತ್ ಬುಮ್ರಾ ಎದುರು ಶಾಹೀನ್ ಶಾ ಆಫ್ರಿದಿ ಮತ್ತು ನಸೀಮ್ ಶಾ ಬೌಲಿಂಗ್ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ.
ಅಕ್ರಮ್ ನೆಚ್ಚಿನ ಬ್ಯಾಟರ್ ಯಾರು?
ವಾಸಿಂ ಅಕ್ರಮ್ ಅವರು ತಮ್ಮ ನೆಚ್ಚಿನ ಬ್ಯಾಟರ್ ಹೆಸರನ್ನೂ ತಿಳಿಸಿದ್ದಾರೆ. ನಾನು ಭಾರತದ ಸುನಿಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್, ನ್ಯೂಜಿಲೆಂಡ್‌ನ ಮಾರ್ಟಿನ್ ಕ್ರೋವ್, ಆಸ್ಟ್ರೇಲಿಯಾದ ಅಲನ್ ಬಾರ್ಡರ್ ಮತ್ತು ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಅವರೊಂದಿಗೆ ಆಡಿದ್ದೇನೆ. ಆದರೆ ವೆಸ್ಟ್ ಇಂಡೀಸ್‌ನ ಶ್ರೇಷ್ಠ ಸರ್ ವಿವಿಯನ್ ರಿಚರ್ಡ್ಸ್ ನನ್ನ ನೆಚ್ಚಿನ ಬ್ಯಾಟರ್ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications