ಕುಂಬ್ಳೆಗೆ 'ಹತ್ತು ವಿಕೆಟ್' ದಾಖಲೆ ತಪ್ಪಿಸಲು ಮಾಡಿದ ತಂತ್ರ ಬಹಿರಂಗ ಪಡಿಸಿದ ವಾಸಿಮ್ ಅಕ್ರಮ್

ಟೀಮ್ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಅಪರೂಪದ ದಾಖಲೆಯೊಂದನ್ನು ಮಾಡಿದ್ದರು. ಟೆಸ್ಟ್ ಇನ್ನಿಂಗ್ಸ್‌ವೊಂದರ ಎಲ್ಲಾ ಹತ್ತು ವಿಕೆಟ್‌ಗಳನ್ನು ಅನಿಲ್ ಕುಂಬ್ಳೆ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಅದು ಕೂಡ ಭಾರತದ ಸಾಂಪ್ರದಾಯಿಕ ಎದುರಾಳಿಯ ಪಾಕಿಸ್ತಾನದ ವಿರುದ್ಧ ಈ ಸಾಧನೆಯನ್ನು ಮಾಡಿದ್ದರು ಅನಿಲ್ ಕುಂಬ್ಳೆ.
1999ರಲ್ಲಿ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಈ ದಾಖಲೆಯನ್ನು ಮಾಡಲು ಸಾಧ್ಯವಾಗದಂತೆ ಪಾಕಿಸ್ತಾನ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಅನಿಲ್ ಕುಂಬ್ಳೆಗೆ ವಿಕೆಟ್ ನೀಡದಂತೆ ಪಾಕಿಸ್ತಾನದ ದಿಗ್ಗಜ ಬೌಲರ್ ವಾಸಿಮ್ ಅಕ್ರಮ್ ಮತ್ತು ಯೂನಿಸ್ ಖಾನ್ ಅಂತಿಮ ಹಂತದಲ್ಲಿ ಹರಸಾಹಸ ಪಟ್ಟಿದ್ದರು. ಆದರೆ ಅದೆಲ್ಲವನ್ನೂ ಮೀರಿ ಕುಂಬ್ಳೆ ಈ ದಾಖಲೆ ಮಾಡಿ ವಿಶ್ವ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದರು.
ಈಗ ಈ ಬಗ್ಗೆ ಸ್ವತಃ ಪಾಕಿಸ್ತಾನದ ದಿಗ್ಗಜ ಬೌಲರ್ ವಾಸಿಮ್ ಅಕ್ರಮ್ ಪ್ರತಿಕ್ರಿಯಿಸಿದ್ದಾರೆ. ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರಾ ಅವರೊಂದಿಗೆ ಯೂಟ್ಯೂಬ್ ಸಂವಾದದಲ್ಲಿ ಅನಿಲ್ ಕುಂಬ್ಳೆಗೆ ವಿಕೆಟ್ ನೀಡದಂತೆ ಹೇಗೆಲ್ಲಾ ಪ್ರಯತ್ನಗಳನ್ನು ನಡೆಸಲಾಯಿತು ಎಂಬುದನ್ನು ಅಕ್ರಮ್ ವಿವರಿಸಿದ್ದಾರೆ

ಕಠಿಣ ಗುರಿಯನ್ನು ಬೆನ್ನತ್ತಿತ್ತು ಪಾಕಿಸ್ತಾನ
ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 420 ರನ್‌ಗಳ ಬೃಹತ್ ಗುರಿಯನ್ನು ಭಾರತ ನೀಡಿತ್ತು. ಇದನ್ನು ಪಾಕಿಸ್ತಾನ ದಿಟ್ಟವಾಗಿ ಬೆನ್ನತ್ತುವ ಸೂಚನೆಯನ್ನು ನಿಡಿತ್ತು. ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವೂ ಬಂದಿತ್ತು. ಆದರೆ ಬಳಿಕ ಅನಿಲ್ ಕುಂಬ್ಳೆ ಅದಕ್ಕೆ ಆಸ್ಪದನ್ನು ನೀಡಲು ಬಿಡಲೇ ಇಲ್ಲ. ಒಬ್ಬರ ಹಿಂದೊಬ್ಬರಂತೆ ಕುಂಬ್ಳೆ ಪಾಕ್ ಬ್ಯಾಟ್ಸ್‌ಮನ್‌ಗಳನ್ನು ಫೆವಿಲಿಯ್‌ನ್‌ಗೆ ಅಟ್ಟಿದ್ದರು.

ಕುಂಬ್ಳೆಗೆ ವಿಕೆಟ್ ಒಪ್ಪಿಸಬಾರದು
198 ರನ್ ಗಳಿಸುವಷ್ಟರಲ್ಲಿ ಪಾಕಿಸ್ತಾನದ 8 ವಿಕೆಟ್‌ಗಳನ್ನು ಕುಂಬ್ಳೆ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದರು. ಆ ಸಂದರ್ಭದಲ್ಲಿ ಕ್ರೀಸ್‌ನಲ್ಲಿ ವಾಸಿಮ್ ಅಕ್ರಮ್ ಮತ್ತು ಯೂನಿಸ್ ಖಾನ್ ಇದ್ದರು. ಯಾವುದೇ ಕಾರಣಕ್ಕೂ ಅನಿಲ್ ಕುಂಬ್ಳೆಗೆ ವಿಕೆಟ್ ಒಪ್ಪಿಸಬಾರದು ಎಂದು ಅಕ್ರಮ್‌ಗೆ ಯೋಚನೆ ಬಂದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಕ್ರೀಡಾ ಸ್ಪೂರ್ತಿ ಬಿಟ್ಟು ಆಡುವುದು ಬೇಡ
ಆದರೆ ಬೇಕೆಂದೆ ಇನ್ನೋರ್ವ ಆಟಗಾರನಿಗೆ ವಿಕೆಟ್ ಒಪ್ಪಿಸುವುದು ಕ್ರೀಡಾಸ್ಪೂರ್ತಿ ಅಲ್ಲ, ಹಾಗಾಗಿ ಅಂತಾ ಪ್ರಯತ್ನಕ್ಕೆ ಮುಂದಾಗಬಾರದು ಎಂದು ತೀರ್ಮಾನವನ್ನು ಮಾಡಿದ್ದೆ ಎಂದು ವಾಸಿಮ್ ಅಕ್ರಮ್ ಹೇಳಿಕೊಂಡಿದ್ದಾರೆ. ಆಗ ಸಹ ಆಟಗಾರ ವಾಕರ್ ಯೂನಿಸ್ ಬಳಿ ಬಂದು ನಾನು ನೀನು ನಿನ್ನ ಸಹಜ ಆಟವನ್ನು ಆಡು. ನಾನು ಕುಂಬ್ಳೆಗೆ ಔಟ್ ಆಗುವುದಿಲ್ಲ ಎಂದು ಹೇಳಿದೆ ಎಂದು ಎರಡು ದಶಕದ ಹಿಂದಿನ ಸಂದರ್ಭದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ನಾಯಕನಾಗಿ ವಾಕರ್ ಯೂನಿಸ್‌ಗೆ ಸಲಹೆ
ಈ ಸಂದರ್ಭದಲ್ಲಿ ನಾಯಕನಾಗಿ ನಾನು ವಾಕರ್ ಯೂನಿಸ್‌ಗೆ ಸಲಹೆಯೊಂದನ್ನು ನೀಡಿದ್ದೆ. ಸಹಜ ಆಟವನ್ನು ನೀನು ಆಡು. ಜಾವಗಲ್ ಶ್ರೀನಾಥ್ ಬೌಲಿಂಗ್‌ನಲ್ಲಿ ಒಳ್ಳೆಯ ಹೊಡೆತಕ್ಕೆ ಪ್ರಯತ್ನಿಸು ಎಂಬ ಸಲಹೆಯನ್ನು ನೀಡಿದ್ದೆ ಎಂದಿದ್ದಾರೆ ವಾಸಿಮ್ ಅಕ್ರಮ್.

ಕುಂಬ್ಳೆ ಎಸೆದ ಎಸೆತಕ್ಕೆ ಅಕ್ರಮ್ ಔಟ್
ಆದರೆ ಮೇಲಿನ ಈ ಮಾತುಕತೆಯ ಬಳಿಕ ಅನಿಲ್ ಕುಂಬ್ಳೆ ಮತ್ತೆ ಬೌಲಿಂಗ್ ದಾಳಿಗೆ ಇಳಿದರು. ಆದರೆ ಈ ಸಂದರ್ಭದಲ್ಲಿ ನನ್ನ ಬ್ಯಾಟ್ಸ್‌ನ ಇನ್‌ಸೈಡ್ ಎಡ್ಜ್ ಆದ ಚೆಂಡು ಫೀಲ್ಡರ್ ಕೈಗೆ ಸೇರಿತ್ತು. ನಾನು ಔಟಾಗಿದ್ದೆ. ಭಾರತದ ಪಾಲಿಗೆ ಮತ್ತು ಅನಿಲ್ ಕುಂಬ್ಳೆ ಪಾಲಿಗೆ ಅದೊಂದು ಸ್ಮರಣೀಯ ದಿನವಾಗಿತ್ತು ಎಂದು ವಾಸಿಮ್ ಅಕ್ರಮ್ ಹೇಳಿದ್ದಾರೆ.

ಈ ದಾಖಲೆ ಮಾಡಿದ ಕೇವಲ ಎರಡನೇ ಕ್ರಿಕೆಟಿಗ
ಇನ್ನಿಂಗ್ಸ್‌ವೊಂದರ ಎಲ್ಲಾ ಹತ್ತು ವಿಕೆಟ್ ಪಡೆದ ಸಾಧನೆ ಮಾಡಿದ ವಿಶ್ವದ ಕೇವಲ ಎರಡನೇ ಕ್ರಿಕೆಟಿಗ ಎಂಬ ಸಾಧನೆಗೆ ಈ ಮೂಲಕ ಅನಿಲ್ ಕುಂಬ್ಳೆ ಪಾತ್ರರಾದರು. ಅದಕ್ಕೂ ಮುನ್ನ 1956ರಲ್ಲಿ ಇಂಗ್ಲೆಂಡ್‌ನ ಜಿಮ್ ಲೇಕರ್ ಈ ಸಾಧನೆಯನ್ನು ಮಾಡಿದ್ದರು. ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಲೇಕರ್ ಒಂದು ಇನ್ನಿಂಗ್ಸ್‌ನ ಎಲ್ಲಾ ವಿಕೆಟ್‌ಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications