ಧರ್ಮಶಾಲಾದಂತಹ ಸುಂದರ ಕ್ರೀಡಾಂಗಣ ನಮಗೆ ಕನಸು ಮಾತ್ರ; ಪಾಕ್ ಮಾಜಿ ಕ್ರಿಕೆಟಿಗ
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಪಿಸಿಎ) ಸ್ಟೇಡಿಯಂ ವಿಶ್ವದ ಅತ್ಯಂತ ಸುಂದರ ಮತ್ತು ಎತ್ತರವಾದ ಕ್ರೀಡಾಂಗಣಗಳಲ್ಲಿ ಒಂದಾಗಿದೆ ಎಂದು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಚ್ಚಹಸಿರಿನಿಂದ ಕಂಗೊಳಿಸುವ ಈ ಕ್ರೀಡಾಂಗಣದ ಸುತ್ತಮುತ್ತ ಹಿಮಾಲಯ ಪರ್ವತದ ಸಾಲು ನೋಡುಗರ ಕಣ್ಮನ ಸೆಳೆಯುವಂತಿದೆ.
ಇಲ್ಲಿ ಇತ್ತೀಚಿಗೆ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಐದನೇ ಟೆಸ್ಟ್ ಪಂದ್ಯ ನಡೆಯಿತು ಮತ್ತು ಭರ್ಜರಿ ಗೆಲುವು ಸಾಧಿಸಿ ಸರಣಿಯನ್ನು 4-1 ಅಂತರದಲ್ಲಿ ವಶಪಡಿಸಿಕೊಂಡಿತು.

ಹಿಮಾಲಯದ ನಡುವೆ ಜೋಡಿಸಲಾದ ಕ್ರೀಡಾಂಗಣವು ಆಟಗಾರರು, ವೀಕ್ಷಕರು ಮತ್ತು ಪ್ರೇಕ್ಷಕರಿಗೆ ಪರ್ವತಗಳ ಮನಮೋಹಕ ನೋಟವನ್ನು ಒದಗಿಸುತ್ತದೆ. ಇದು ತನ್ನ ಮೂಲಸೌಕರ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು ಪ್ರವಾಸಿಗರಿಗೆ ಅತ್ಯದ್ಭುತ ಅನುಭವವನ್ನು ನೀಡುತ್ತದೆ.
ಇನ್ನು ಪಾಕಿಸ್ತಾನದ ಗಡಾಫಿ ಸ್ಟೇಡಿಯಂ ಅನ್ನು ಧರ್ಮಶಾಲಾ ಸ್ಟೇಡಿಯಂನೊಂದಿಗೆ ಹೋಲಿಸಿದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್, ಪಾಕಿಸ್ತಾನವು ಅಂತಹ ಕ್ರೀಡಾಂಗಣವನ್ನು ನಿರ್ಮಿಸುವುದು ಕನಸಲ್ಲಿ ಮಾತ್ರ ಎಂದು ಹೇಳಿದ್ದಾರೆ.
"ನಮಗೆ ಮೂರು ಕ್ರೀಡಾಂಗಣಗಳನ್ನು ಸಹ ನಿರ್ವಹಿಸಲು ಸಾಧ್ಯವಿಲ್ಲ, (ಬಾಕಿ ಕಹಾ ನಯಾ ಬನಾ ಲೆಂಗೆ) ನಾವು ಹೊಸದನ್ನು ಹೇಗೆ ಮಾಡಬಹುದು? (ಗಡಾಫಿ ಕಿ ಛತ್ ದೇಖಿ ಹೈ) ಅವರು ಡ್ರೋನ್‌ನೊಂದಿಗೆ ತೋರಿಸುತ್ತಿದ್ದ ಗಡಾಫಿ ಕ್ರೀಡಾಂಗಣದ ಮೇಲ್ಛಾವಣಿ ನೀವು ನೋಡಿದ್ದೀರಾ? ನಾವು ನಮ್ಮಲ್ಲಿರುವ ಮೂರು ಮೈದಾನಗಳನ್ನು ಸಹ ನಿಯಂತ್ರಿಸಲು ಸಾಧ್ಯವಿಲ್ಲ".

"ನಾವು ಹೊಸ ಕ್ರೀಡಾಂಗಣವನ್ನು ನಿರ್ಮಿಸುವುದು ಕನಸು ಮಾತ್ರ. ಹೊಸ ಕ್ರೀಡಾಂಗಣವನ್ನು ನಿರ್ಮಿಸಲು ನಮಗೆ ಸಾಕಷ್ಟು ಪ್ರದೇಶವಿದೆ. ಅಬೋಟಾಬಾದ್ ತುಂಬಾ ಸುಂದರವಾದ ಮೈದಾನವಾಗಿದೆ," ಎಂದು ವಾಸಿಂ ಅಕ್ರಮ್ ಹೇಳಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾರತದ ಧರ್ಮಶಾಲಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಪಂದ್ಯಗಳು ಅದ್ಭುತವಾಗಿವೆ. ಈ ಕ್ರೀಡಾಂಗಣವು ಕೇವಲ ಕ್ರಿಕೆಟ್‌ಗಾಗಿ ಭಾರತಕ್ಕೆ ಪ್ರಯಾಣಿಸುವ ವಿದೇಶಿಯರಿಗೆ ಸೋಲಿನ ಕೂಪವಾಗಿ ಪರಿಣಮಿಸಿದೆ.
ಅಲ್ಲದೆ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2023ರ ಏಕದಿನ ವಿಶ್ವಕಪ್ ಪಂದ್ಯದ ಸಮಯದಲ್ಲಿ ಇಡೀ ಮೈದಾನವನ್ನು ಮಂಜು ಆವರಿಸಿದ್ದರಿಂದ, ಪಂದ್ಯವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು.
ಎಚ್‌ಪಿಸಿಎ ಸ್ಟೇಡಿಯಂ ಸಮುದ್ರ ಮಟ್ಟದಿಂದ 1,457 ಮೀಟರ್ ಎತ್ತರದಲ್ಲಿ ಸ್ಥಾಪಿತಗೊಂಡಿದೆ. ಇತ್ತೀಚಿನ ಭಾರತ ವಿರುದ್ಧದ 5ನೇ ಟೆಸ್ಟ್ ಪಂದ್ಯ ಆರಂಭವಾಗುವ ಮೊದಲು ಇಂಗ್ಲೆಂಡ್ ತಂಡದ ಅಟಗಾರರು ಸ್ಥಳೀಯ ಸ್ಥಳಗಳನ್ನು ಸುತ್ತಾಡಿದರು.
ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಸರಣಿ ವಶಪಡಿಸಿಕೊಂಡ ಭಾರತ
ಧರ್ಮಶಾಲಾ HPCA ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯ ಐದನೇ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ ಮತ್ತು 64 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಸರಣಿ ಭದ್ರಪಡಿಸಿಕೊಂಡಿತು.
ಇದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡು ತಿಂಗಳ ಸುದೀರ್ಘ ಐದು ಪಂದ್ಯಗಳ ಸರಣಿಯು ಅತ್ಯುತ್ತಮವಾಗಿ ಕೊನೆಗೊಂಡಿತು. ತನ್ನ 100ನೇ ಟೆಸ್ಟ್ ಪಂದ್ಯ ಆಡಿದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದರು.
ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಲೆಜೆಂಡ್‌ಗಳಾದ ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ಅವರಂತಹ 100ನೇ ಟೆಸ್ಟ್ ಪಂದ್ಯನಲ್ಲಿ ಇದೇ ರೀತಿಯ ಸಾಧನೆಯನ್ನು ಮಾಡಿದಂತಹ ದಿಗ್ಗಜರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications