For Quick Alerts
ALLOW NOTIFICATIONS  
For Daily Alerts
 

ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ಹೆಸರಿಸಿದ ವಾಸಿಂ ಜಾಫರ್: ಸಚಿನ್, ಸೆಹ್ವಾಗ್‌ಗೆ ಸ್ಥಾನವಿಲ್ಲ!

Wasim jaffer

ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ತಂಡವನ್ನ ಹೆಸರಿಸಿದ್ದಾರೆ. ಭಾರತದ ಪರ ಅನೇಕ ಅಂತರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಜಾಫರ್, ಟೀಂ ಇಂಡಿಯಾದ ಲೆಜೆಂಡ್ ಕ್ರಿಕೆಟಿಗರನ್ನ ಆಯ್ಕೆ ಮಾಡದೇ ಇರುವುದು ಅಭಿಮಾನಿಗಳಿಗೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ.

ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11ನಲ್ಲಿ ಟೀಂ ಇಂಡಿಯಾಕ್ಕೆ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದುಕೊಟ್ಟು ಮಹೇಂದ್ರ ಸಿಂಗ್ ಧೋನಿ ಆಗಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಆಗಲಿ, ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್‌ ಇರಲಿ, ಮಾಡ್ರನ್ ಡೇ ಕ್ರಿಕೆಟ್ ಲೆಜೆಂಡ್ ವಿರಾಟ್‌ ಕೊಹ್ಲಿಗಾಗಲಿ ಸ್ಥಾನ ಒದಗಿಸಿಲ್ಲ.

ವಾಸಿಂ ಜಾಫರ್ ಅವರು ತಮ್ಮ ಸಾರ್ವಕಾಲಿಕ 'ಸೊಗಸಾದ ಮತ್ತು ಆಕರ್ಷಕ ಪ್ಲೇಯಿಂಗ್ 11 ಅನ್ನು ಆಯ್ಕೆ ಮಾಡಿದ್ದು, ಕ್ರಿಕ್‌ಟ್ರಾಕರ್‌ನಲ್ಲಿ ಸ್ಕೈ247 ಪ್ರೆಸೆಂಟ್ಸ್ 'ನಾಟ್ ಜಸ್ಟ್ ಕ್ರಿಕೆಟ್' ಜೊತೆಗಿನ ಸಂಭಾಷಣೆಯಲ್ಲಿ, ಲೆಜೆಂಡ್‌ಗಳನ್ನ ಆಯ್ಕೆ ಮಾಡಿದ್ದಾರೆ. ಇತ್ತೀಚೆಗಷ್ಟೇ ನಿಧನರಾದ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್‌ ವಾರ್ನ್‌ಗೆ ನಾಯಕತ್ವ ನೀಡಿದ್ದಾರೆ.

ಓಪನಿಂಗ್ ಸ್ಲಾಟ್‌ನಲ್ಲಿ ಜಾಫರ್ ಬ್ಯಾರಿ ರಿಚರ್ಡ್ಸ್ ಮತ್ತು ಆಸ್ಟ್ರೇಲಿಯಾದ ಲೆಜೆಂಡ್ ಮಾರ್ಕ್ ವ್ಹಾ ಅವರನ್ನು ಹೆಸರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟರ್ ರಿಚರ್ಡ್ಸ್ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 72.57 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದರು. ಇತರ ಆರಂಭಿಕ ಆಟಗಾರ ಮಾರ್ಕ್ ವಾ ಆಸೀಸ್ ಪರ 370ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

ಹೀಗೆ ವಾಸಿಂ ಜಾಫರ್ ಸಾರ್ವಕಾಲಿಕ 'ಸೊಗಸಾದ ಮತ್ತು ಆಕರ್ಷಕ ಪ್ಲೇಯಿಂಗ್ 11' ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಯುವರಾಜ್ ಸಿಂಗ್ ಆಗಿದ್ದು, ಉಳಿದ ಯಾವೆಲ್ಲಾ ಆಟಗಾರರಿದ್ದಾರೆ ಎಂಬುದನ್ನ ಈ ಕೆಳಗೆ ತಿಳಿಯಿರಿ

ಬ್ಯಾರಿ ರಿಚರ್ಡ್ಸ್, ಮಾರ್ಕ್ ವಾ, ವಿವ್ ರಿಚರ್ಡ್ಸ್, ಯುವರಾಜ್ ಸಿಂಗ್, ಗ್ರೆಗ್ ಚಾಪೆಲ್, ಗ್ಯಾರಿ ಸೋಬರ್ಸ್, ಆ್ಯಡಂ ಗಿಲ್‌ಕ್ರಿಸ್ಟ್ (ವಿಕೆಟ್ ಕೀಪರ್), ಇಮ್ರಾನ್ ಖಾನ್, ಶೇನ್ ವಾರ್ನ್ (ನಾಯಕ), ವಾಸಿಮ್ ಅಕ್ರಂ, ಮಾಲ್ಕಮ್ ಮಾರ್ಷಲ್

Story first published: Thursday, April 14, 2022, 10:07 [IST]
Other articles published on Apr 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+