ವಾಸಿಮ್ ಜಾಫರ್ ವಿಶ್ವಶ್ರೇಷ್ಠ ಏಕದಿನ ತಂಡದಲ್ಲಿ ನಾಲ್ವರು ಭಾರತೀಯರು

ನವದೆಹಲಿ, ಏಪ್ರಿಲ್ 4: ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ತನ್ನ ನೆಚ್ಚಿನ ಸಾರ್ವಕಾಲಿಕ ಏಕದಿನ ತಂಡವನ್ನು ಪ್ರಕಟಿಸಿದ್ದಾರೆ. ಜಾಫರ್ ಆಯ್ಕೆಯ ಏಕದಿನ ಕ್ರಿಕೆಟ್ ವಿಶ್ವ ತಂಡದಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಜಾಫರ್ ನೆಚ್ಚಿನ ತಂಡದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳ ಆಟಗಾರರೂ ಜಾಫರ್ ತಂಡದಲ್ಲಿದ್ದಾರೆ.
ಏಪ್ರಿಲ್ 4ರ ಶನಿವಾರ ವಾಸಿಮ್ ಜಾಫರ್ ತನ್ನ ನೆಚ್ಚಿನ ಆಲ್ ಟೈಮ್ ಒಡಿಐ ಟೀಮ್ ಪ್ರಕಟಿಸಿದ್ದಾರೆ. ಇದರಲ್ಲಿ ಒಬ್ಬ ಎಕ್ಸ್‌ಟ್ರಾ ಪ್ಲೇಯರ್ ಸೇರಿ ಒಟ್ಟು 12 ಆಟಗಾರರಿದ್ದಾರೆ. ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ಆಟಗಾರರೂ ತಂಡದಲ್ಲಿದ್ದಾರೆ.
ವಾಸಿಮ್ ಜಾಫರ್ ನೆಚ್ಚಿನ ಸಾರ್ವಕಾಲಿಕ ಏಕದಿನ ಕ್ರಿಕೆಟ್ ತಂಡದಲ್ಲಿ ಯಾರೆಲ್ಲ ಇದ್ದಾರೆ ನೋಡಿ.

ಆರಂಭಿಕ ಬ್ಯಾಟ್ಸ್‌ಮನ್‌ಗಳು
ವಾಸಿಮ್ ಜಾಫರ್ ಆಲ್ ಟೈಮ್ ಒಡಿಐ ಟೀಮ್‌ನಲ್ಲಿ ಭಾರತದ ಬಲಿಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಓಪನಿಂಗ್ ಜೋಡಿಯಾಗಿದ್ದಾರೆ. ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ 12ನೇ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.

ಎಂಎಸ್ ಧೋನಿ ನಾಯಕ
ಟೀಮ್ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ನಾಯಕನಾಗಿದ್ದಾರೆ. ಭಾರತದ ಈಗಿನ ನಾಯಕ ವಿರಾಟ್ ಕೊಹ್ಲಿ ನಿರ್ಣಾಯಕ ಬ್ಯಾಟಿಂಗ್ ಕ್ರಮಾಂಕ 4ರಲ್ಲಿ ಕಾಣಿಸಿಕೊಂಡಿದ್ದಾರೆ. ಜಾಫರ್ ತಂಡದಲ್ಲಿರುವ ಭಾರತದ ನಾಲ್ವರು ಆಟಗಾರರು ಇವರೇ.

ಆಲ್ ರೌಂಡರ್‌ಗಳು
ಜಾಫರ್ ನೆಚ್ಚಿನ ತಂಡದಲ್ಲಿ ಆಲ್ ರೌಂಡರ್‌ಗಳಾಗಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ಪಾಕಿಸ್ತಾನ ಬೌಲಿಂಗ್ ಆಲ್ ರೌಂಡರ್ ವಾಸಿಮ್ ಅಕ್ರಮ್ ಇದ್ದಾರೆ. ಇನ್ನು ವೆಸ್ಟ್ ಇಂಡೀಸ್ ದಿಗ್ಗಜ ಸರ್ ವಿವಿಯನ್ ರಿಚರ್ಡ್ಸ್, ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟ್ಸ್‌ಮನ್ ಎಬಿಡಿವಿಲಿಯರ್ಸ್ ಕೂಡ ಇದ್ದಾರೆ.

ಜಾಫರ್ ನೆಚ್ಚಿನ ಏಕದಿನ ತಂಡ
1. ಸಚಿನ್ ತೆಂಡೂಲ್ಕರ್ (ಭಾರತ), 2. ರೋಹಿತ್ ಶರ್ಮಾ (ಭಾರತ), 3. ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್), 4. ವಿರಾಟ್ ಕೊಹ್ಲಿ (ಭಾರತ), 5. ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), 6. ಬೆನ್ ಸ್ಟೋಕ್ಸ್ (ಇಂಗ್ಲೆಂಡ್), 7. ಎಂ.ಎಸ್.ಧೋನಿ (ಭಾರತ-ಸಿ & ವಿಕೆ), 8. ವಾಸಿಮ್ ಅಕ್ರಮ್ (ಪಾಕಿಸ್ತಾನ), 9. ಶೇನ್ ವಾರ್ನ್ (ಆಸ್ಟ್ರೇಲಿಯಾ)/ ಸಕ್ಲೈನ್ ಮುಷ್ತಾಕ್ (ಪಾಕಿಸ್ತಾನ), 10. ಜೋಯಲ್ ಗಾರ್ನರ್ (ವೆಸ್ಟ್ ಇಂಡೀಸ್), 11. ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ), 12. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications