ಝಿಂಟಾ ಜೊತೆ ಭಾಂಗ್ರಾ ಸ್ಟೆಪ್ ಹಾಕಿದ ಹ್ಯಾಟ್ರಿಕ್ ಹೀರೋ ಕರನ್: ವಿಡಿಯೋ

ನವದೆಹಲಿ, ಏಪ್ರಿಲ್ 2: ಅಂತಿಮ ಓವರ್‌ನಲ್ಲಿ ಸ್ಯಾಮ್ ಕರನ್ ಅವರ ಮಾಂತ್ರಿಕ ಬೌಲಿಂಗ್‌ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಮುಂದೆ ತಲೆಬಾಗುವಂತಾಗಿತ್ತು. ಪಂಜಾಬ್ ಸೋಲಲಿದ್ದ ಪಂದ್ಯವನ್ನು ಗೆಲ್ಲಿಸಿದ ಕರನ್ ಜೊತೆ ಕೆXIಪಿ ಸಹಮಾಲಕಿ, ಬಾಲಿವುಡ್ ನಟಿ ಪ್ರೀತಿ ಝಿಂಟಾ ಸ್ಟೆಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೋಮವಾರ (ಏಪ್ರಿಲ್ 1) ನಡೆದ ಐಪಿಎಲ್ 13ನೇ ಪಂದ್ಯದಲ್ಲಿ ಪಂಜಾಬ್ ಮತ್ತು ಡೆಲ್ಲಿ ಕಾದಾಡಿದ್ದವು. ಈ ಪಂದ್ಯದಲ್ಲಿ ಕರನ್ ಕೇವಲ 11 ರನ್‌ಗೆ ಡೆಲ್ಲಿಯ 4 ವಿಕೆಟ್ ಮುರಿದು ಪಂಜಾಬ್ ಗೆಲುವಿನ ರುವಾರಿಯೆನಿಸಿದ್ದರು. ಯಾಕೆಂದರೆ ಈ ಪಂದ್ಯವನ್ನು ಡಿಸಿಯೇ ಗೆದ್ದುಕೊಳ್ಳುವುದರಲ್ಲಿತ್ತು. ಆದರೆ ಕೊನೆಗೆ 14 ರನ್‌ಗಳ ಸೋಲಿನೊಂದಿಗೆ ಡೆಲ್ಲಿ ಆಘಾತ ಅನುಭವಿಸಿತ್ತು.
ತಂಡದ ಗೆಲುವಿಗೆ ಕಾರಣವಾದ, ಹ್ಯಾಟ್ರಿಕ್ ವಿಕೆಟ್‌ಗಳನ್ನೂ ಪಡೆದ ಸ್ಯಾಮ್ ಕರನ್, ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜೊತೆ ಭಾಂಗ್ರಾ ಸ್ಟೆಪ್ ಹಾಕಿದ್ದಾರೆ. ಪಂಜಾಬ್ ಬಳಿಕ ಸೆರೆಸಿಕ್ಕ ಈ ವಿಡಿಯೋವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications