ವಿಡಿಯೋ: ಕೌಂಟಿ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ ಅಮೀರ್
ಲಂಡನ್, ಆಗಸ್ಟ್ ೧೦: ಪಾಕಿಸ್ತಾನದ ಮೊಹಮ್ಮದ್ ಅಮೀರ್ ಅವರು ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ್ದಾರೆ.
ಎಸ್ಸೆಕ್ಸ್ ತಂಡದ ಪರವಾಗಿ ಆಡುತ್ತಿರುವ ಅಮೀರ್, ಪಂದ್ಯವೊಂದರಲ್ಲಿ 10 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಎಸ್ಸೆಕ್ಸ್ ತಂಡ ಮೊಟ್ಟ ಮೊದಲ ಬಾರಿಗೆ ಕೌಂಟಿ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ.
ಸ್ಕಾರ್ಬರೋನಲ್ಲಿ ಎಸ್ಸೆಕ್ಸ್ ಹಾಗೂ ಯಾರ್ಕ್ ಶೈರ್ ಮಧ್ಯೆ ನಡೆದ ಪಂದ್ಯದಲ್ಲಿ ಅಮೀರ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಎಸ್ಸೆಕ್ಸ್ ತಂಡವು 8 ವಿಕೆಟ್ ಗಳ ಜಯ ಸಾಧಿಸಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 11.2 ಓವರ್ ಬೌಲಿಂಗ್ ಮಾಡಿದ್ದ ಅಮೀರ್ 18 ರನ್ ನೀಡಿ 5 ವಿಕೆಟ್ ಪಡೆದಿದ್ದರು.
2ನೇ ಇನ್ನಿಂಗ್ಸ್ ನಲ್ಲಿ ಅಮೀರ್ 54 ರನ್ ನೀಡಿ 5 ವಿಕೆಟ್ ಗಳಿಸಿದರು.
ಅಮೀರ್ ದಾಳಿಗೆ ನಲುಗಿದ ಯಾರ್ಕ್ ಶೈರ್ ಮೊದಲ ಇನ್ನಿಂಗ್ಸ್ ನಲ್ಲಿ 113 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 150 ರನ್ ಗಳಿಗೆ ಆಲೌಟ್ ಆಯಿತು. ಕೇವಲ 32 ರನ್ ಗಳ ಗುರಿ ಪಡೆದ ಎಸ್ಸೆಕ್ಸ್ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications