ಸೀಟ್ ಬೆಲ್ಟ್ ಧರಿಸದೆ ಪೊಲೀಸರಿಗೆ ಸಿಕ್ಕಿಬಿದ್ದ ಪಾಕ್ ಕ್ರಿಕೆಟಿಗ: ವಿಡಿಯೋ ವೈರಲ್
ಪಾಕಿಸ್ತಾನ ಆಟಗಾರರು ಈಗ ಸಂಚಾರ ನಿಯಮ ಪಾಲಿಸದೆ ಸುದ್ದಿಯಲ್ಲಿದ್ದಾರೆ. ಪಾಕ್‌ನ ಬ್ಯಾಟಿಂಗ್ ಆಲ್‌ರೌಂಡರ್ ಇರ್ಫಾನ್ ಖಾನ್ ಟ್ರಾಫಿಕ್ ರೂಲ್ಸ್ ಪಾಲಿಸದೆ ಸಿಕ್ಕಿ ಬಿದ್ದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇರ್ಫಾನ್ ಖಾನ್ ಅವರು ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿದರು. ಇವರು ಚಾಲಕನ ಪಕ್ಕದಲ್ಲಿರುವ ಸೀಟ್‌ನಲ್ಲಿ ಕುಳಿತಿದ್ದಾಗ ಪೊಲೀಸರು ಅವರನ್ನು ತಡೆಯುತ್ತಾರೆ. ಈ ವೇಳೆ ಇರ್ಫಾನ್ ಸೀಟ್ ಬೆಲ್ಟ್ ಹಾಕದೇ ಇರುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿ ಅವರಿಗೆ ಸೀಟ್ ಬೆಲ್ಟ್ ಹಾಕಿಕೊಳ್ಳುವಂತೆ ಸೂಚಿಸುತ್ತಾರೆ. ಅಲ್ಲದೆ ಸೀಟ್ ಬೆಲ್ಟ್ ಧರಿಸದೇ ಇರುವುದಕ್ಕೆ ದಂಡ ಹಾಕಬೇಕೆ ಎಂದು ಪೊಲೀಸರು ಎಚ್ಚರಿಸುತ್ತಾರೆ.

ಇರ್ಫಾನ್ ಖಾನ್ ಪಾಕಿಸ್ತಾನ ತಂಡದ ಆಟಗಾರ ಎಂದು ತಿಳಿದ ಬಳಿಕ, ಪೊಲೀಸ್ ಅಧಿಕಾರಿ ನಗುತ್ತಾ ಮಾತನಾಡುತ್ತಾರೆ. ಇದೇ ವೇಳೆ ಪೊಲೀಸ್ ಅಧಿಕಾರಿ ಇರ್ಫಾನ್ ಖಾನ್ ಅವರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಹೈದರಾಬಾದ್ ಕಿಂಗ್ಸ್ ಮೆನ್ ನೀಡಿದ ಪ್ರದರ್ಶನದ ಬಗ್ಗೆಯೂ ಅಧಿಕಾರಿಗಳು ಕೇಳಿದರು.
ಪೇಶಾವರ್‌ಗೆ ಜಯ
ಪಿಎಸ್‌ಎಲ್ 2026 ರ ಫೈನಲ್‌ನಲ್ಲಿ, ಆರನ್ ಹಾರ್ಡಿ ಅವರ ಅದ್ಭುತ ಆಲ್‌ರೌಂಡ್ ಪ್ರದರ್ಶನವು ಪೇಶಾವರ್ ಝಲ್ಮಿ ತಂಡವನ್ನು 2017 ರ ನಂತರ ಮೊದಲ ಬಾರಿಗೆ ಪ್ರಶಸ್ತಿ ಪಡೆದು ಸಂಭ್ರಮಿಸಿತು. ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡ 129 ರನ್‌ಗಳಿಗೆ ಆಲೌಟ್ ಆಗುವಲ್ಲಿ ಹಾರ್ಡಿ ಪ್ರಮುಖ ಪಾತ್ರ ವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಇವರು 27 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಅಲ್ಲದೆ ಗುರಿಯನ್ನು ಬೆನ್ನಟಿದಾಗ ಹಾರ್ಡಿ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 39 ಎಸೆತಗಳಲ್ಲಿ 56 ರನ್ ಸಿಡಿಸಿ ಪೇಶಾವರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಪರಿಣಾಮ ಬಾಬರ್ ಅಜಮ್ ಮುಂದಾಳತ್ವದ ತಂಡ 15.2 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡದ ಪರ ಸೈಮ್ ಅಯೂಬ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿ ಅಬ್ಬರಿಸಿದರು. ಈ ಪಂದ್ಯದಲ್ಲಿ ಬ್ಯಾಟ್ ಮಾಡಿದ್ದ ಇರ್ಫಾನ್ ಕೇವಲ 1 ರನ್ ಬಾರಿಸಿ ರನ್‌ಔಟ್ ಆದರು. ಗುರಿಯನ್ನು ಬೆನ್ನಟ್ಟಿದ ಪೇಶಾವರ್ ತಂಡದ ಪರ ಆರನ್ ಹಾರ್ಡಿ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರೆ, ಅಬ್ದುಲ್ ಸಮದ್ 48 ರನ್ ಬಾರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications