ಆತ ಬ್ಯಾಟಿಂಗ್‌ಗೆ ಹೋಗೋದು ನೋಡಲು ಭಯಾನಕವಾಗಿರುತ್ತೆ: ಡಿಕೆ

ಅಬುಧಾಬಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಶುಭಾರಂಭ ಕಂಡಿಲ್ಲ. ಹಾಲಿ ಚಾಂಪಿಯನ್ಸ್ ವಿರುದ್ಧ ಕೆಕೆಆರ್ ಸೋಲನುಭವಿಸಿತ್ತು. ಆದರೆ ಆ್ಯಂಡ್ರೆ ರಸೆಲ್ ತಂಡದಲ್ಲಿರುವುದರಿಂದ ನಮ್ಮ ತಂಡವನ್ನು ಯಾರೂ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಅತೀ ಅಪಾಯಕಾರಿ ಬ್ಯಾಟ್ಸ್‌ಮನ್ ಎನಿಸಿರುವ ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್ 2018 ಮತ್ತು 2019ರ ಎರಡು ಸೀಸನ್‌ಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಹೀರೋ ಆಗಿ ಮಿನುಗಿದ್ದರು. ಆ ಎರಡೂ ಸೀಸನ್‌ಗಳಲ್ಲೂ ರಸೆಲ್ ಪ್ರತೀ ಪಂದ್ಯವನ್ನೂ 180 ರ ಸ್ಟ್ರೈಕ್‌ರೇಟ್‌ನಂತೆ ಆಡಿದ್ದರು.
ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಡಿಕೆ ಜೊತೆಗೆ ಆ್ಯಂಡ್ರೆ ರಸೆಲ್ ಬಗ್ಗೆ ಪ್ರಶ್ನಿಸಿದ್ದಾರೆ. 'ಹೇಗೆ ಒಬ್ಬ ಎದುರಾಳಿ ಬೌಲರ್ ರಸೆಲ್‌ಗೆ ಬೌಲ್ ಮಾಡಲು ಸಾಧ್ಯ. ಆತ ಹೇಗೆ ಆಡುತ್ತಾರೆ?' ಎಂದು ಪ್ರಶ್ನಿಸಿದ್ದಾರೆ. 2018ರಿಂದಲೂ ರಸೆಲ್ ಇರುವ ತಂಡಕ್ಕೆ ನಾಯಕನಾಗಿರುವ ಡಿಕೆ ಇದಕ್ಕೆ ತಮಾಷೆಯ ಉತ್ತರ ನೀಡಿದ್ದಾರೆ.
'ಆತ ಬ್ಯಾಟಿಂಗ್‌ಗಾಗಿ ನಡೆದುಕೊಂಡು ಹೋಗೋದು ನೋಡೋದೇ ಭಯಾನಕವಾಗಿತ್ತೆ. ಆತ ರಸ್ಲರ್‌ನಂತೆ ಆಡುತ್ತಿದೆ. ಆತನದ್ದು ಅದ್ಭುತ ನಡೆ. ಎಲ್ಲಾ ಆತನ ತೋಳಿನಲ್ಲಿದೆ. ಆತ ನೋಡೋಕೆ ಥೇಟ್ ಎಂಎಂಎ ಫೈಟರ್‌ನಂತೆ ಕಾಣುತ್ತಾರೆ,' ಎಂದು ಅಶ್ವಿನ್ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಉತ್ತರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications