Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬುಕ್ಕಿಗಳ ಭವಿಷ್ಯ : ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲುವ ಕುದುರೆ

ಅಡಿಲೇಡ್, ಮಾ.24: ವಿಶ್ವಕಪ್ ನಾಲ್ಕರ ಘಟ್ಟದಲ್ಲಿ ನಿಂತು ನೋಡಿದಾಗ ಟೀಂ ಇಂಡಿಯಾ ಗೆಲ್ಲುವ ಫೇವರೀಟ್ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ. ಅದರೆ, ಭಾರತದ ಬುಕ್ಕಿಗಳ ಲೆಕ್ಕಾಚಾರವೇ ಬೇರೆ ಇದೆ. ದೆಹಲಿ ಮೂಲದ ಬುಕ್ಕಿಗಳು ಭಾರತದ ಬದಲಿಗೆ ಆಸ್ಟ್ರೇಲಿಯಾಕ್ಕೆ ಹಣ ಹೂಡುವಂತೆ ಸೂಚಿಸಿದ್ದಾರೆ.

ಆತಿಥೇಯ ತಂಡ ಆಸ್ಟ್ರೇಲಿಯಾ ಪರ ಕಡಿಮೆ ಬೆಟ್ಟಿಂಗ್ ನಡೆದಿದೆ. ಭಾರತದ ಪರ ಹೆಚ್ಚು ಬೆಟ್ಟಿಂಗ್ ಮಾಡಲಾಗಿದೆ. ಬುಕ್ಕಿಗಳ ಪ್ರಕಾರ ಆಸ್ಟ್ರೇಲಿಯಾ ಫೇವರೀಟ್ ಆಗಿದ್ದು, ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಇದೆ. ದುಬೈನಿಂದ ಅಂತಾರಾಷ್ಟ್ರೀಯ ಬೆಟ್ಟಿಂಗ್ ದರ ನಿಗದಿಯಾಗುತ್ತಿದ್ದು, ಪಂಟರ್ ಗಳು ಐಎಸ್ ಡಿ ಫೋನ್ ಬಳಸಿ ಜೂಜುಕೋರರನ್ನು ಸಂಪರ್ಕಿಸುತ್ತಿದ್ದಾರೆ.

ಬೆಟ್ಟಿಂಗ್ ನಡೆಯುವುದು ಹೇಗೆ?: ಯಾವುದಾದರೂ ತಂಡದ ಪರ ಕಡಿಮೆ ಮೊತ್ತ ನಿಗದಿಪಡಿಸಿದ್ದರೆ ಆ ತಂಡ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ.ಆಸೀಸ್‌ ಪರ ಕಡಿಮೆ ಮೊತ್ತವನ್ನು ಬುಕಿಗಳು ಬೆಟ್‌ ಮಾಡಲಾಗಿದೆ. ಫೈನಲ್ ಮುಂಚಿತವಾಗಿ ಸಾವಿರಾರು ಕೋಟಿ ರೂ.ಗಳಿಗೂ ಹೆಚ್ಚು ವ್ಯವಹಾರ ಬೆಟ್ಟಿಂಗ್ ನಲ್ಲಿ ನಡೆದು ಬಿಡುತ್ತದೆ.[ ಫೈನಲ್ ಪಂದ್ಯಗಳ ಮೆಲುಕು]

WC 2015, Australia is Bookies favourite team now

ಸೋಮವಾರದ ದರ: ಆಸ್ಟ್ರೇಲಿಯಾ ಪರ ಪ್ರತಿ ರೂಪಾಯಿಗೆ 1.34 ರು. ಮೊತ್ತವಿದ್ದರೆ, ಭಾರತದ ಪರ ರೂಪಾಯಿಗೆ 5.50 ರು. ಬೆಟ್ಟಿಂಗ್‌ ಮಾಡಲಾಗುತ್ತಿದೆ. ಆಫ್ರಿಕಾ ಪರ 3 ರು, ನ್ಯೂಜಿಲೆಂಡ್‌ ಪರ 4.40 ರು. ಬೆಟ್ಟಿಂಗ್‌ ನಡೆಸಲಾಗಿದೆ. [ಹನಿ ಟ್ರ್ಯಾಪ್ 'ಫಿಕ್ಸಿಂಗ್' ಭೀತಿ]

ಮಾ.26ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆಲುವುದು ಕಷ್ಟ ಎಂದಿರುವ ಬುಕ್ಕಿಗಳು ಆಸ್ಟ್ರೇಲಿಯಾ ಪರ ಪ್ರತಿ ರುಪಾಯಿಗೆ 50ಪೈಸೆಯಂತೆ ದರ ನಿಗದಿ ಪಡಿಸಿದ್ದರೆ, ಭಾರತಕ್ಕೆ 1.50ರಿಂದ 2 ರು ನಷ್ಟು ಮೊತ್ತ ನೀಡಲಾಗಿದೆ. ಬುಕ್ಕಿಗಳ ಭವಿಷ್ಯ ನಿಜವಾಗುವುದೋ ಇಲ್ಲವೋ ಆದರೆ, ಕಾಳದಂಧೆಯಲ್ಲಿ ಕೋಟ್ಯಂತರ ದುಡ್ಡು ಕೈ ಕೈ ಬದಲಾಗುವುದಂತೂ ಖಂಡಿತ.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+